ಅಂತರಾಷ್ಟ್ರೀಯ

ಇಟಲಿಯಲ್ಲಿ ದನಕರುಗಳಿಗೂ ‘ಏರ್ ಕಂಡೀಶನರ್’ ಭಾಗ್ಯ !

Pinterest LinkedIn Tumblr

danaಹೆಚ್ಚುತ್ತಿರುವ ಬಿಸಿಲಿನ ತಾಪ ತಾಳಲಾರದೇ ಮನೆಗಳಲ್ಲಿ ‘ಏಸಿ’ ಅಳವಡಿಸುವುದು ಸಾಮಾನ್ಯ. ಆದರೆ ಇಟಲಿಯಲ್ಲಿ ಇದೀಗ ದನದ ಕೊಟ್ಟಿಗೆಗಳೂ ಏರ್ ಕಂಡೀಶನರ್ ಭಾಗ್ಯ ಪಡೆಯುತ್ತಿವೆ.

ಹೌದು. ಸದ್ಯ ಇಟಲಿಯಲ್ಲಿ 40 ಸೆಂಟಿಗ್ರೇಟ್ ಬಿಸಿಲಿನ ತಾಪವಿದ್ದು ಜುಲೈನಲ್ಲಿ ಇನ್ನೂ ಹೆಚ್ಚಿನ ಬಿಸಿಲಿರುತ್ತದೆಯಂತೆ. ಅಲ್ಲದೇ ಇದೀಗ ಬಿಸಿಲಿನ ಝಳ ಹೆಚ್ಚುತ್ತಿದ್ದು ಜನರು ಬಿಸಿಲಿನ ಬೇಗೆಗೆ ಬೆಂದಿದ್ದು , ಹಾಗಾಗಿ ಎಲ್ಲಾ ಸಮಯದಲ್ಲಿಯೂ ಏಸಿ ಬಳಸುವ ವಾತಾವರಣ ನಿರ್ಮಾಣವಾಗಿದೆ. ಆದರೆ ಈ ಬಿಸಿಲಿನ ತಾಪಕ್ಕೆ ಹಸುಗಳು ನೀಡುವ ಹಾಲಿನ ಪ್ರಮಾಣವೂ ಕಡಿಮೆಯಾಗತೊಡಗಿದ್ದು ಹೀಗಾಗಿಯೇ ಮನೆಯಲ್ಲಿನ ಕೊಟ್ಟಿಗೆಗಳಿಗೆ ಏಸಿ ಅಳವಡಿಸಲು ಮುಂದಾಗಿದ್ದಾರೆ.

ಏನೇ ಇರಲಿ, ಹಾಲು ಕೊಡದ ಹಸುವಿಗೆ ಹುಲ್ಲು ಹಾಕಲು ಹಿಂದೆ ಮುಂದೆ ನೋಡುವ ಕಾಲದಲ್ಲಿ ಹಾಲಿನ ಆಸೆಗಾದರೂ ಇಟಲಿಯಲ್ಲಿ ದನಗಳು ‘ಏಸಿ ಭಾಗ್ಯ’ ಕಂಡಿರುವುದು ಮಾತ್ರ ಸತ್ಯ.

Write A Comment