ಮನೋರಂಜನೆ

ಬಾಯ್ ಫ್ರೆಂಡ್ ಇಲ್ಲಾ ಅಂತಾ ಹಚ್ಚೆನೂ ತೆಗೆದಳಂತೆ ಈ ನಟಿ !

Pinterest LinkedIn Tumblr

amy

ಬಾಲಿವುಡ್ ನಟಿಯರು ದಿನಕ್ಕೊಂದು ಬಟ್ಟೆ ಬದಲಿಸುವಂತೆ ಬಾಯ್ ಫ್ರೆಂಡ್ ಅನ್ನೂ ಬದಲಾಯಿಸುವುದು ಹೊಸತೇನಲ್ಲ. ಆದರೆ ಕೆಲವರು ಹಳೆಯ ನೆನಪನ್ನು ಮೆಲುಕು ಹಾಕುತ್ತಿದ್ದಾರೆ. ಇನ್ನೂ ಕೆಲವರು ಪ್ರೀತಿಗಿದ್ದ ಪುರಾವೆಯನ್ನೂ ನಾಶ ಮಾಡುತ್ತಾರೆ. ಇದಕ್ಕೆ ಜ್ವಲಂತ ಸಾಕ್ಷಿಯೆಂದರೆ ನಟಿ ಏಮಿ ಜಾಕ್ಸನ್.

ಒಂದು ಕಾಲದಲ್ಲಿ ಏಮಿ ಜಾಕ್ಸನ್ ಹಾಗೂ ಬಾಲಿವುಡ್ ನಟ ಪ್ರತೀಕ್ ಬಬ್ಬರ್ ಕೈಕೈ ಹಿಡಿದು ಓಡಾಡಿಕೊಂಡಿದ್ದರು. ಅದರಲ್ಲಿಯೇ ಏಮಿ ತಮ್ಮ ಪ್ರೇಮದ ಕುರುಹಾಗಿ ‘ಮೇರಾ ಪ್ಯಾರ್ ಮೇರಾ ಪ್ರತೀಕ್ ‘ ಎಂದು ತೋಳಿನ ಮೇಲೆ ಪ್ರೀತಿಯಿಂದ ಹಚ್ಚೆಯನ್ನೂ ಹಾಕಿಸಿಕೊಂಡಿದ್ದರು. ಹಾಗೀಗೆಂದು ಒಂದಷ್ಟು ದಿನ ಡೇಟಿಂಗ್‌ನಲ್ಲಿದ್ದ ಈ ಜೋಡಿಯ ಮೇಲೆ ಯಾರ ದೃಷ್ಟಿ ಬಿತ್ತೋ ಏನೋ. ಒಬ್ಬರಿಗೊಬ್ಬರು ದೂರಾದರು.

ಇದೀಗ ಏಮಿ ಜಾಕ್ಸನ್ ತೋಳಿನಲ್ಲಿದ್ದ ಹಚ್ಚೆಯನ್ನು ಅಳಿಸಿ ಹಾಕಿದ್ದಾರೆ, ಅಷ್ಟೇ ಅಲ್ಲ, ಮನಸ್ಸಿನಿಂದಲೇ ಹೋದ ಮೇಲೆ ಆತನ ಹೆಸರನ್ನು ತೋಳಿನ ಮೇಲೆ ಇಟ್ಟುಕೊಂಡು ಏನ್ಮಾಡ್ಲಿ ಅಂತಾಳೆ ಏಮಿ. ಅದೂ ಹೌದು, ಮತ್ತೆ ಬರುವ ಹೊಸಬರಿಗೆ ಆ ಜಾಗ ಮೀಸಲಾಗಿಡಬೇಕಲ್ಲಾ ಅಂತಾರಂತೆ ಅವರ ಅಭಿಮಾನಿಗಳು!

Write A Comment