ಮನೋರಂಜನೆ

‘ರಂಗಿತರಂಗ’ ಚಿತ್ರ ನೋಡಿದ ಪ್ರೇಕ್ಷಕನಿಗೆ ಹೃದಯಾಘಾತ !

Pinterest LinkedIn Tumblr

rangi

ಬಾಹುಬಲಿ ಚಿತ್ರದ ಅಬ್ಬರದ ನಡುವೆಯೂ ಪ್ರೇಕ್ಷಕರನ್ನು ಸೆಳೆಯುವಲ್ಲಿ ಸಫಲವಾಗಿರುವ ‘ರಂಗಿತರಂಗ’ ಕನ್ನಡ ಚಿತ್ರ ವೀಕ್ಷಿಸುತ್ತಿದ್ದ ಸಮಯದಲ್ಲಿ ವ್ಯಕ್ತಿಯೊಬ್ಬರು ಹೃದಾಯಘಾತದಿಂದ ಮೃತಪಟ್ಟಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಕತ್ರಿಗುಪ್ಪೆ ಬಳಿಯ ಕಾಮಾಕ್ಯ ಚಿತ್ರಮಂದಿರದಲ್ಲಿ ಚಿತ್ರ ವೀಕ್ಷಿಸುತ್ತಿದ್ದ ಸಮಯದಲ್ಲಿ ಐಬಿಎನ್ ಕಂಪನಿಯಲ್ಲಿ ಸಾಫ್ಟ್ ವೇರ್ ಎಂಜಿನಿಯರ್ ಆಗಿರುವ ಜೆಪಿ ನಗರದ ನಿವಾಸಿ 38 ವರ್ಷದ ಸಂಜಯ್ ಹುಲಿಮನಿ ಎಂಬುವವರಿಗೆ ಹೃದಯಾಘಾತ ಸಂಭವಿಸಿದ್ದು ತಕ್ಷಣ ಕುಸಿದು ಬಿದ್ದು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.

ಬೇರೆ ಭಾಷಾ ಚಿತ್ರಗಳ ಪ್ರಬಲ ಸ್ಪರ್ಧೆಯ ನಡುವೆಯೂ ಉತ್ತಮ ಪ್ರದರ್ಶನ ಕಾಣುತ್ತಿರುವ ‘ರಂಗಿತರಂಗ’ ಚಿತ್ರದಲ್ಲಿ ಹಾರರ್ ದೃಶ್ಯಗಳು ಹೆಚ್ಚಿದ್ದು ಇದೇ ಹೃದಯಾಘಾತಕ್ಕೆ ಕಾರಣವಿರಬಹುದು ಎಂದು ಪ್ರೇಕ್ಷಕರು ಮಾತನಾಡುತ್ತಿರುವುದು ಥಿಯೇಟರ್ ನಲ್ಲಿ ಕೇಳಿಬಂತು.

Write A Comment