ಅಂತರಾಷ್ಟ್ರೀಯ

ಆಸ್ಪತ್ರೆಗೆ ದಾಖಲಾದ ಫುಟ್ಬಾಲ್ ದಿಗ್ಗಜ ಪೀಲೆ

Pinterest LinkedIn Tumblr

(FILE) Brazilian football legend Pele ki

ಬ್ರೆಜಿಲ್ ನ ಫುಟ್ಬಾಲ್ ದಿಗ್ಗಜ 74 ವರ್ಷದ ಪೀಲೆ ಮತ್ತೆ ಆಸ್ಪತ್ರೆಗೆ ದಾಖಲಾಗಿದ್ದಾರೆ. ಕಳೆದ ಮೇ ತಿಂಗಳಿನಲ್ಲಷ್ಟೇ ಶಸ್ತ್ರ ಚಿಕಿತ್ಸೆಗೊಳಗಾಗಿದ್ದ ಅವರು ಈ ಬಾರಿ ಬೆನ್ನು ಮೂಳೆ ಸಮಸ್ಯೆಯಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆಂದು ತಿಳಿದುಬಂದಿದೆ.

ಫುಟ್ಬಾಲ್ ನ ದಿಗ್ಗಜ ಪೀಲೆಯವರ ಆರೋಗ್ಯದ ಕುರಿತು ಕಳವಳಪಡಬೇಕಾದ ಅಗತ್ಯವಿಲ್ಲವೆಂದು ತಿಳಿಸಿರುವ ವೈದ್ಯರು, ಶಸ್ತ್ರ ಚಿಕಿತ್ಸೆ ಮೂಲಕ ಅವರ ಬೆನ್ನು ಮೂಳೆ ಸಮಸ್ಯೆಯನ್ನು ಪರಿಹರಿಸಲಾಗಿದೆ ಎಂದು ತಿಳಿಸಿದ್ದಾರೆ. ಇನ್ನು ಕೆಲ ದಿನಗಳ ಬಳಿಕ ಅವರು ಮರಳಿ ಮನೆಗೆ ತೆರಳಲಿದ್ದಾರೆಂದು ಹೇಳಿದ್ದಾರೆ.

ಫುಟ್ಬಾಲ್ ನಲ್ಲಿ ಅದ್ವೀತಿಯ ಸಾಧನೆ ಮಾಡಿರುವ ಪೀಲೆ, ತಮ್ಮ ಅವಧಿಯಲ್ಲಿ ಬ್ರೆಜಿಲ್ ಮೂರು ಬಾರಿ ವಿಶ್ವ ಕಪ್ ಪಡೆಯುವಂತೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. 91 ಫುಟ್ಬಾಲ್ ಮ್ಯಾಚ್ ಗಳನ್ನು ಆಡಿರುವ ಪೀಲೆ, ಒಟ್ಟು 77 ಗೋಲುಗಳನ್ನು ಗಳಿಸಿದ್ದಾರೆ. ಫಿಫಾದಲ್ಲಿ ನಡೆದಿದೆ ಎನ್ನಲಾದ ಲಂಚ ಹಗರಣ ಇತ್ತೀಚೆಗೆ ಬೆಳಕಿಗೆ ಬಂದ ವೇಳೆ ಬೇಸರ ವ್ಯಕ್ತಪಡಿಸಿದ್ದ ಪೀಲೆ, ಕ್ರೀಡೆಗಳಲ್ಲಿನ ಇಂತಹ ಬೆಳವಣಿಗೆ ಆಟದ ಮಹತ್ವವನ್ನು ಕಳೆಯುತ್ತವೆ ಎಂದಿದ್ದರು.

Write A Comment