ಮನೋರಂಜನೆ

ಆಮೀರ್‌ರ ಧೂಮ್ 3 ದಾಖಲೆ ಸರಿಗಟ್ಟಿ, 9 ದಿನಕ್ಕೆ 300 ಕೋಟಿ ಕ್ಲಬ್ ಸೇರಿದ ‘ಬಾಹುಬಲಿ’; ಭಾರತೀಯ ಚಿತ್ರರಂಗದ ಎಲ್ಲಾ ದಾಖಲೆಗಳನ್ನು ಸರಿಗಟ್ಟಿದ್ದ ದಕ್ಷಿಣ ಭಾರತದ ಬಾಹುಬಲಿ

Pinterest LinkedIn Tumblr

Bahubali-Still

ಭಾರತ ಚಿತ್ರರಂಗದ ಸದ್ಯದ ಎಲ್ಲಾ ದಾಖಲೆಗಳನ್ನು ಸರಿಗಟ್ಟುತ್ತಿರುವ ಎಸ್ ಎಸ್ ರಾಜಮೌಳಿ ನಿರ್ದೇಶನದ ಬಾಹುಬಲಿ ಚಿತ್ರ ಕೇಲವ 9 ದಿನಕ್ಕೆ 300 ಕೋಟಿ ಕ್ಲಬ್ ಸೇರುವ ಮೂಲಕ ಭಾರತ ನಂಬರ್ ಒನ್ ಮೂವಿ ಎನಿಸಿಕೊಂಡಿದೆ.

ಪಂಚ ಭಾಷೆಗಳಲ್ಲಿ ತೆರೆಕಂಡಿರುವ ಬಾಹುಬಲಿ ಚಿತ್ರ ಮೊದಲ ದಿನವೇ 50 ಕೋಟಿ ಗಳಿಸುವ ಮೂಲಕ ದಾಖಲೆ ನಿರ್ಮಿಸಿತ್ತು. ಕೇವಲ ಮೂರು ದಿನಗಳಲ್ಲೇ 160 ಕೋಟಿ ಗಳಿಸಿ ಮುನ್ನುಗ್ಗುತ್ತಿದ್ದ ಚಿತ್ರ. ಇದೀಗ ಕೇವಲ 9 ದಿನಗಳಲ್ಲಿ 300 ಕೋಟಿ ಗಳಿಸುವ ಮೂಲಕ ಧೂಮ್ 3 ಚಿತ್ರದ ಎಲ್ಲಾ ದಾಖಲೆಗಳನ್ನು ಸರಿಗಟ್ಟಿದೆ.

ತೆಲುಗಿನ ಆವೃತ್ತಿಯಲ್ಲಿ ಬಾಹುಬಲಿ ಚಿತ್ರ ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳಲ್ಲಿ ಮೊದಲ ವಾರದಲ್ಲಿ 82.8 ಕೋಟಿ ರುಪಾಯಿ ಗಳಿಸಿದ್ದು. ತೆಲುಗು ಇಂಡಸ್ಟ್ರೀಯ ಆಲ್ ಟೈಮ್ ನಂಬರ್ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ದಕ್ಷಿಣ ಭಾರತ ಆಲ್ ಟೈಮ್ ಕಲೆಕ್ಷನ್ ನಲ್ಲಿ ನಂಬರ್ ಒನ್ ಚಿತ್ರ ಎನಿಸಿಕೊಂಡಿದ್ದ ರಜನಿಕಾಂತ್ ಅಭಿನಯದ ಎಂದಿರನ್ ಚಿತ್ರ ಮೊದಲ ಸ್ಥಾನದಲ್ಲಿತ್ತು. ಈ ಎಲ್ಲಾ ದಾಖಲೆಗಳನ್ನು ಬಾಹುಬಲಿ ಕೇವಲ 9 ದಿನಗಳಲ್ಲೇ ಅಳಿಸಿ ಹಾಕಿದೆ.

ಭಾರತದಲ್ಲೇ ಅತಿ ದೊಡ್ಡ ಬಜೆಟ್ ಅಂದರೆ ಸುಮಾರು 250 ಕೋಟಿ ರುಪಾಯಿ ವೆಚ್ಚದಲ್ಲಿ ನಿರ್ಮಾಣವಾಗಿದ್ದ ಬಾಹುಬಲಿ ದೇಶಾದ್ಯಂತ 4000 ಪರದೆಗಳಲ್ಲಿ ಬಿಡುಗಡೆಯಾಗಿದ್ದು. ಎಲ್ಲಾ ಚಿತ್ರ ಮಂದಿರಗಳಲ್ಲಿಯೂ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ.

Write A Comment