ಮನೋರಂಜನೆ

ಚಿಬಾಬಾ ಅರ್ಧಶತಕ; ಝಿಂಬಾಬ್ವೆಗೆ ಚೊಚ್ಚಲ ಜಯ

Pinterest LinkedIn Tumblr

RAHANE

ಹರಾರೆ, ಜು.19: ಏಕದಿನ ಸರಣಿಯಲ್ಲಿ ಕ್ಲೀನ್ ಸ್ವೀಪ್ ಮಾಡಿದಂತೆ, ಟ್ವೆಂಟಿ -20 ಪಂದ್ಯದಲ್ಲಿ ಸರಣಿ ಗೆಲುವಿನತ್ತ ನೋಡುತ್ತಿದ್ದ ಟೀಮ್ ಇಂಡಿಯಾದ ಪ್ರಯತ್ನ ಫಲ ನೀಡಿಲ್ಲ. ಎರಡನೆ ಹಾಗೂ ಅಂತಿಮ ಟ್ವೆಂಟಿ-20 ಪಂದ್ಯದಲ್ಲಿ ಝಿಂಬಾಬ್ವೆ ವಿರುದ್ಧ ಭಾರತ 10 ರನ್‌ಗಳ ಸೋಲು ಅನುಭವಿಸಿದೆ.

ಇದರೊಂದಿಗೆ ಎರಡು ಪಂದ್ಯಗಳ ಟ್ವೆಂಟಿ-20 ಸರಣಿಯಲ್ಲಿ ಝಿಂಬಾಬ್ವೆ 1-1 ಸಮಬಲ ಸಾಧಿಸುವಲ್ಲಿ ಯಶಸ್ವಿಯಾಗಿದೆ. ಮೊದಲ ಪಂದ್ಯದಲ್ಲಿ ಭಾರತ 54 ರನ್‌ಗಳ ಜಯ ಗಳಿಸಿತ್ತು.

ರವಿವಾರ ಎರಡನೆ ಪಂದ್ಯದಲ್ಲಿ ಗೆಲುವಿಗೆ 146 ರನ್‌ಗಳ ಸವಾಲನ್ನು ಪಡೆದ ಭಾರತ ನಿಗದಿತ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟದಲ್ಲಿ 135 ರನ್ ಗಳಿಸಿತು. ಭಾರತಕ್ಕೆ ಸವಾಲು ಅಷ್ಟೇನೂ ಕಠಿಣವಾಗಿರಲಿಲ್ಲ. ಆದರೆ ತಂಡದ ಯಾವನೇ ಒಬ್ಬ ಆಟಗಾರನ ವೈಯಕ್ತಿಕ ಕೊಡುಗೆ ಅರ್ಧಶತಕ ಮುಟ್ಟಲಿಲ್ಲ. ವಿಕೆಟ್ ಕೀಪರ್ ರಾಬಿನ್ ಉತ್ತಪ್ಪ 42 ರನ್ ಗಳಿಸಿರುವುದು ಗರಿಷ್ಠ ಸ್ಕೋರ್. ಕ್ರೆಮೆರ್ (3-18), ವಿಲಿಯಮ್ಸ್(1-31), ಮಪೊಫು (1-26), ಸಿಯಾನ್ ವಿಲಿಯಮ್ಸ್(1-31) ದಾಳಿಗೆ ಸಿಲುಕಿದ ಭಾರತಕ್ಕೆ ಗೆಲುವಿನ ದಡ ಸೇರಲು ಸಾಧ್ಯವಾಗಲಿಲ್ಲ. ಅಂತಿಮ ಓವರ್‌ನಲ್ಲಿ ಭಾರತದ ಗೆಲುವಿಗೆ 19 ರನ್ ಬೇಕಾಗಿತ್ತು. ಆದರೆ 8 ರನ್ ಗಳಿಸಲಷ್ಟೇ ಶಕ್ತವಾಯಿತು. 146 ರನ್‌ಗಳ ಗೆಲುವಿನ ಸವಾಲನ್ನು ಪಡೆದ ಟೀಮ್ ಇಂಡಿಯಾ ಮೊದಲ ಓವರ್‌ನಲ್ಲೇ ಮೊದಲ ವಿಕೆ ಕಳೆದುಕೊಂಡಿತು. ಆರಂಭಿಕ ದಾಂಡಿಗ ಹಾಗೂ ನಾಯಕ ಅಜಿಂಕ್ಯ ರಹಾನೆ ಮೊದಲ ಓವರ್‌ನ ಎರಡನೆ ಎಸೆತದಲ್ಲಿ ಚೆಂಡನ್ನು ಬೌಂಡರಿಗೆ ಅಟ್ಟಿದರು. ಮೂರನೆ ಎಸೆತವನ್ನು ರಕ್ಷಣಾತ್ಮವಾಗಿ ನಿಭಾಯಿಸಿದ್ದರು. ಚೆಂಡನ್ನು ಅವರು ಶಾರ್ಟ್‌ಫೈನ್ ಕಡೆ ತಳ್ಳಿದಾಗ ಇನ್ನೊಂದು ತುದಿಯಲ್ಲಿದ್ದ ಮುರಳಿ ವಿಜಯ್ ರನ್‌ಗಾಗಿ ಎರಡು ಹೆಜ್ಜೆ ಮುಂದಿಟ್ಟು ನಿರ್ಧಾರ ಬದಲಿಸಿದರು. ಇದು ನಾಯಕ ರಹಾನೆಯನ್ನು ಇಕ್ಕಟ್ಟಿಗೆ ಸಿಲುಕಿತು.ಅವರು ರನೌಟಾಗಿ ಪೆವಿಲಿಯನ್ ಸೇರಿದರು.

ಮುರಳಿ ವಿಜಯ್ ಮತ್ತು ರಾಬಿನ್ ಉತ್ತಪ್ಪ ಬ್ಯಾಟಿಂಗ್ ಮುಂದುವರಿಸಿದರು. ಆರು ಓವರ್‌ಗಳಲ್ಲಿ ಸ್ಕೋರ್ 57ಕ್ಕೆ ತಲುಪಿತು 7ನೆ ಓವರ್‌ನ ಮೊದಲ ಎಸೆತದಲ್ಲಿ ವಿಜಯ್ ಔಟಾದರು. ಅದೇ ಓವರ್‌ನ 4ನೆ ಎಸೆತದಲ್ಲಿ ಮನೀಷ್ ಪಾಂಡೆ (0) ಅವರು ಕ್ರೆಮೆರ್ ಎಸೆತದಲ್ಲಿ ಎಲ್‌ಬಿಡಬ್ಲು ಬಲೆಗೆ ಬಿದ್ದರು. ರಾಬಿನ್ ಉತ್ತಪ್ಪ ಅವರು 25 ಎಸೆತಗಳನ್ನು ಎದುರಿಸಿ 9 ಬೌಂಡರಿಗಳ ಸಹಾಯದಿಂದ 42 ರನ್ ಗಳಿಸಿದರು. ಸ್ಟುವರ್ಟ್ ಬಿನ್ನಿ( 24), ಚೊಚ್ಚಲ ಕ್ರಿಕೆಟ್ ಆಡಿದ ಸಂಜು ಸ್ಯಾಮ್ಸನ್ ಮತ್ತು ಅಕ್ಷರ್ ಪಟೇಲ್(13) ಎರಡಂಕೆಯ ಸ್ಕೋರ್ ದಾಖಲಿಸಿದರು.

ಝಿಂಬಾಬ್ವೆ 145/7: ಟಾಸ್ ಜಯಿಸಿ ಮೊದಲು ಬ್ಯಾಟಿಂಗ್ ಆಯ್ದುಕೊಂಡ ಝಿಂಬಾಬ್ವೆ ತಂಡಕ್ಕೆ ಆರಂಭಿಕ ದಾಂಡಿಗ ಚಿಬಾಬಾ 67 ರನ್(51ಎ, 9ಬೌ) ಕೊಡುಗೆ ನೀಡಿ ಭಾರತ ತಂಡಕ್ಕೆ 146 ರನ್‌ಗಳ ಸವಾಲು ನೀಡಲು ನೆರವಾದರು.

ಭಾರತದ ಬೌಲರ್‌ಗಳು ದುಬಾರಿ ರನ್ ಬಿಟ್ಟುಕೊಟ್ಟರು. ಭುವನೇಶ್ವರ ಕುಮಾರ್ (2-46), ಸಂದೀಪ್ ಶರ್ಮ (1-39), ಮೋಹಿತ್ ಶರ್ಮ(2-28), ಅಕ್ಷರ್ ಪಟೇಲ್ (1-23), ಸ್ಟುವರ್ಟ್ ಬಿನ್ನಿ(1-14) ಅವರಿಗೆ ಝಿಂಬಾಬ್ವೆಯ ನ್ನು ಕಡಿಮೆ ಮೊತ್ತಕ್ಕೆ ನಿಯಂತ್ರಿ ಸಲು ಸಾಧ್ಯವಾಗಲಿಲ್ಲ.

ಚಿಬಾಬ(67), ಮಸಕಝ(19) ಮತ್ತು ವಿಲಿಯಮ್ಸ್ (17) ಹೊರತುಪಡಿಸಿದರೆ ತಂಡದ ಸಹ ಆಟಗಾರರಾದ ರಝಾ (8), ಕೊವೆಂಟ್ರಿ (4), ಇರ್ವಿನ್(7), ವ್ಯಾಲೆರ್(6), ಉಸೇಯ(1) ಒಂದಂಕೆಯ ತಂಡದ ಸ್ಕೋರ್ 145ಕ್ಕೆ ತಲುಪಿತು. ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಚಿಬಾಬಾ ಅವರು ಪಂದ್ಯಶ್ರೇಷ್ಠ ಮತ್ತು ಸರಣಿಶ್ರೇಷ್ಠ ಪ್ರಶಸ್ತಿಯನ್ನು ಬಾಚಿಕೊಂಡರು.

Write A Comment