ಮನೋರಂಜನೆ

ಮತ್ತೆ ಸುದ್ದಿಯಾಗಿದ್ದಾಳೆ ಪೂನಮ್​ ಪಾಂಡೆ !  ಮಾಜಿ ಸಚಿವರ ಪುತ್ರನ ಜತೆ ಡೇಟಿಂಗ್!

Pinterest LinkedIn Tumblr

khanna

ನವದೆಹಲಿ: ಪೂನಮ್​ ಪಾಂಡೆ… ಪರಿಚಯ ಇರಬೇಕಲ್ಲ. ಇರ್ಲೇ ಬೇಕು ಬಿಡಿ, ಟೀಂ ಇಂಡಿಯಾ ಆಟಗಾರರಿಗೆ ಸ್ಪೂರ್ತಿ ನಾನೇ ಎನ್ನುವ ರೀತಿ ಆಗಾಗ ಬೆತ್ತಲಾಗಿಬಿಡುತ್ತೇನೆ ಎಂದು ಚಟ ಚಟ ಪಟಾಕಿ ಹಾರಿಸುತ್ತಿದ್ದಾಕೆ ಈಗ ಮತ್ತೆ ಸುದ್ದಿಯಾಗಿದ್ದಾಳೆ!

ಈಗಲೂ ಅಂತದ್ದೇ ಒಂದು ಹೇಳಿಕೆ ನೀಡಿ ಪ್ರಚಾರ ಪಡೆದುಕೊಳ್ಳುತ್ತಿರಬೇಕು ಎಂದು ಮೂಗು ಮುರಿದು ಓದದೇ ಇರಬೇಡಿ. ಖಂಡಿತಾ ಅಂತದ್ದೇನೂ ಅಲ್ಲ. ಅದಕ್ಕಿಂತ ವಿಭಿನ್ನವಾದ ಸುದ್ದಿ ಇದು. ಹಾಗಾದರೆ ಅದೇನು ಎಂದು ಕೇಳುತ್ತೀರಾ… ಇಲ್ಲಿದೆ ಓದಿ.

ಮುಂಬೈ ಎನ್ನುವ ಮಾಯಾ ನಗರಿಯಲ್ಲಿದ್ದುಕೊಂಡು ಆಗಾಗ ದೇಶದ ನಾನಾ ಕಡೆ ಸುತ್ತಾಡಿಕೊಳ್ಳುತ್ತಲೇ ಸುದ್ದಿ ಸೃಷ್ಟಿಸಿಕೊಳ್ಳುವ ರೂಪದರ್ಶಿ ಪೂನಮ್​ಪಾಂಡೆ ಈ ಬಾರಿ ‘ಡೇಟಿಂಗ್’ ಮೂಲಕ ಸುದ್ದಿಯಾಗಿದ್ದಾಳೆ. ಅದೂ ಯಾರ ಜೊತೆ ಗೊತ್ತಾ… ಪ್ರಸಿದ್ಧ ಆಂಕರ್ ವಿನೋದ್ ಖನ್ನಾ ಅವರ ಪುತ್ರ ಸಾಕ್ಷಿ ಖನ್ನಾ ಜತೆ ಎಂದು ದೆಹಲಿಯ ಗಲ್ಲಿ ಗಲ್ಲಿಗಳಲ್ಲಿ ಸುದ್ದಿಯೋ ಸುದ್ದಿ. ಇಷ್ಟು ಸುದ್ದಿಯಾಗಲಿಕ್ಕೆ ಇನ್ನೂ ಒಂದು ಕಾರಣವಿದೆ. ಮಾಜಿ ಸಚಿವರಾದ ವಿನೋದ್ ಖನ್ನಾ ಪುತ್ರ ಡೇಟಿಂಗ್ ಎಂದು ಆಕೆ ಜತೆ ಸುತ್ತಾಡುತ್ತಿರೋದು ಸಹಜವಾಗಿಯೇ ಅವರ ಅಭಿಮಾನಿಗಳು, ಸ್ನೇಹಿತರು, ಹಿತೈಷಿಗಳ ವಲಯದಲ್ಲಿ ಚರ್ಚೆ ಆಗ್ತಿದೆಯಂತೆ.

ಅಷ್ಟಕ್ಕೂ ಹೇಗಪ್ಪಾ ಗೊತ್ತಾಯ್ತು ಅವೆಲ್ಲ ಅಂತೀರಾ?

ಹೌದು ಅವರೇನೂ ಕದ್ದು ಮುಚ್ಚಿ ಓಡಾಡಿಕೊಂಡಿಲ್ಲ. ಜತೆ ಜೊತೆಗೇ ದೆಹಲಿಯ ಪ್ರಮುಖ ಬೀದಿಗಳಲ್ಲಿ ಕಾಣಿಸಿಕೊಂಡಿದ್ದಾರಂತೆ. ಹಾಗಂತ ಆಂಗ್ಲ ಪತ್ರಿಕೆಯೊಂದು ವರದಿ ಮಾಡಿದೆ. ಪೂನಮ್​ಪಾಂಡೆ ಜತೆಗೆ ಪಬ್​ಗಳಲ್ಲಿ ಕಾಣಿಸಿಕೊಂಡಿರುವ ಸಾಕ್ಷಿ ಖನ್ನಾ ದಿನವೆಲ್ಲಾ ಜತೆಗಿದ್ದರು ಎಂದು ವರದಿ ಮಾಡಿದೆ. ಅಷ್ಟಕ್ಕೂ ಇದೇ ಮೊದಲಲ್ಲ ಜತೆಯಾಗಿ ಕಾಣಿಸಿಕೊಂಡಿರುವುದು ಎಂದೂ ಹೇಳಲಾಗಿದ್ದು, ಇವರ ನಡುವೆ ಕೇವಲ ಸ್ನೇಹವಷ್ಟೇ ಅಲ್ಲ ಎಂದು ಬಾಲಿವುಡ್ ಮಂದಿಯೂ ಆಡಿಕೊಳ್ಳುತ್ತಿದ್ದಾರಂತೆ. ಒಟ್ಟಾರೆ ಪೂನಮ್​ಪಾಂಡೆ ಈ ಬಾರಿ ಇನ್ನೊಂದೆಜ್ಜೆ ಮುಂದೆಯೇ ಹೋಗಿ ಸುದ್ದಿಯಾಗುತ್ತಿದ್ದಾರೆ.

Write A Comment