ಮಂಗಳೂರು,ಜುಲೈ.17: ದಕ್ಷಿಣ ಕನ್ನಡ ಜಿಲ್ಲಾ ಆಯುಷ್ ಅಧಿಕಾರಿಗಳ ಕಛೇರಿಯಲ್ಲಿ ಭಾರತೀಯ ವೈದ್ಯಪದ್ಧತಿಗಳು ಮತ್ತು ಹೋಮಿಯೋಪತಿ (ಆಯುಷ್) ಪದ್ಧತಿಗಳ ವಿವಿಧ ಕಾಲೇಜುಗಳ ಪ್ರಾಂಶುಪಾಲರು, ಆಯುಷ್ ಫೆಡರೇಶನ್ ಆಫ್ ಇಂಡಿಯಾ, ನೀಮಾ, ಆಯುಷ್ ಫೌಂಡೇಶನ್, ಯೋಗ ಮುಂತಾದ ವಿವಿಧ ಆಯುಷ್ ಸಂಘಟನೆಗಳ ಪದಾಧಿಕಾರಿಗಳ ಸಭೆ ನಡೆಯಿತು.ವಿವಿಧ ಪದ್ಧತಿಗಳಲ್ಲಿ ಸಮನ್ವಯ ಸಾಧನೆಯೊಂದಿಗೆ “ಆಯುಷ್“ ಪದ್ಧತಿಗಳನ್ನು ಪ್ರಧಾನವಾಹಿನಿಗೆ ತರುವ ಮೂಲಕ ಗ್ರಾಮೀಣ ಜನರ ಜೀವನಶೈಲಿಯಲ್ಲಿ ಆರೋಗ್ಯಕರ ಪರಿವರ್ತನೆ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಸೇವಾನಿರತರಾಗಿರುವ ವೈದ್ಯರ ಸೇವಾಗುಣಮಟ್ಟವನ್ನು ಜನಸ್ನೇಹಿ ಕಾರ್ಯಕ್ರಮಗಳೊಂದಿಗೆ ಅಭಿವೃದ್ಧಿ ಪಡಿಸುವ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು.
ಈಗಾಗಲೇ ಆಯುರ್ವೇದ, ಹೋಮಿಯೋಪತಿ ಕಾಲೇಜುಗಳ ವತಿಯಿಂದ ಸರಕಾರದ ಯೋಜನೆಯಂತೆ ಆಯುಷ್ ಇಲಾಖೆಯ ಕಾರ್ಯಕ್ರಮಗಳಾದ ಆಯುಷ್ ಅರಿವು, ಮನೆಮದ್ದು, ತಾಲೂಕು ಹಾಗೂ ಜಿಲ್ಲಾಮಟ್ಟದ ಕಾರ್ಯಾಗಾರ, ಯೋಗ, ಆಯುಷ್ ಗ್ರಾಮ ಇತ್ಯಾದಿ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಹಮ್ಮಿಕೊಳ್ಳಲಾಗುತ್ತಿದೆ. ಇಂತಹ ಸಮಾಜಮುಖಿ ಕಾರ್ಯಕ್ರಮಗಳನ್ನು ನಿಸ್ವಾರ್ಥ ಸೇವಾರ್ಥಿಗಳ ಸಹಕಾರದೊಂದಿಗೆ ಇಡೀ ಜಿಲ್ಲೆಯ ವಿಶೇಷವಾಗಿ ಗ್ರಾಮೀಣ ಜನರಿಗೆ ತಲುಪಿಸುವ ಮಹತ್ವಾಕಾಂಕ್ಷೆ ಹೊಂದಲಾಗಿದೆ.
ಈ ಸಭೆಯ ಅಧ್ಯಕ್ಷತೆಯನ್ನು ಜಿಲ್ಲಾ ಆಯುಷ್ ಅಧಿಕಾರಿಗಳಾದ ಡಾ:ದೇವದಾಸ್ ವಹಿಸಿದ್ದರು. ಆಯುಷ್ ವಿಶೇಷ ಕರ್ತವ್ಯಾಧಿಕಾರಿ ಡಾ:ಮೊಹಮದ್ ಇಕ್ಬಾಲ್ ಉಪಸ್ಥಿತರಿದ್ದರು.
ಆಯುಷ್ ವೈದ್ಯಾಧಿಕಾರಿ ಡಾ: ಮುರಳೀಧರ್ ಇವರು ಸ್ವಾಗತಿಸಿದರು. ಆಯುಷ್ ಫೌಂಡೇಶನ್ ಅಧ್ಯಕ್ಷರಾದ ಡಾ: ಆಶಾ ಜ್ಯೋತಿ ರೈ ಮಾಲಾಡಿ, ಡಾ:ನಾರಾಯಣ ಅಸ್ರ, ಆಳ್ವಾಸ್ ಆಯುರ್ವೇದ ಮೆಡಿಕಲ್ ಕಾಲೇಜು ಪ್ರಾಂಶುಪಾಲರಾದ ಡಾ: ವಿನಯಚಂದ್ರ ಶೆಟ್ಟಿ, ಆಳ್ವಾಸ್ ನ್ಯಾಚುರೋಪತಿ ಕಾಲೇಜಿನ ಪ್ರಾಂಶುಪಾಲರಾದ ಡಾ:ವನಿತಾ ಶೆಟ್ಟಿ, ಆಳ್ವಾಸ್ ಹೋಮಿಯೋಪತಿ ಕಾಲೇಜು ಪ್ರಾಂಶುಪಾಲರಾದ ಡಾ:ವಿಜಯೇಂದ್ರ ಇಟಗಿ, ಫಾಧರ್ ಮುಲ್ಲರ್ಸ್ ಹೋಮಿಯೋಪತಿ ಮೆಡಿಕಲ್ ಕಾಲೇಜಿನ ಪ್ರಾಂಶುಪಾಲರಾದ ಡಾ:ಶಿವಪ್ರಸಾದ್, ಡಾ:ಪ್ರವೀಣ್ರಾಜ್, ಡಾ: ರಾಮಕೃಷ್ಣ ರಾವ್, ಕರ್ನಾಟಕ ಆಯುರ್ವೇದ ಮೆಡಿಕಲ್ ಕಾಲೇಜಿನ ಡಾ: ಸಂತೋಷ್, ಡಾ: ಸಂದೀಪ್ ಬೇಕಲ್, ಡಾ:ಅಜಯ್ ಭಟ್, ಆಯುಷ್ ಫೆಡರೇಷನ್ ಆಫ್ ಇಂಡಿಯಾದ ಅಧ್ಯಕ್ಷರಾದ ಡಾ:ಕೃಷ್ಣರಾಜ ಭಟ್, ನೀಮಾ ಅಧ್ಯಕ್ಷರಾದ ಡಾ: ವಿಜಯ ನಾರಾಯಣ ತೋಳ್ಪಾಡಿ, ಯೋಗರತ್ನ ಶ್ರೀ ಗೋಪಾಲಕೃಷ್ಣ ದೇಲಂಪಾಡಿ, ಶ್ರೀ ಕುಶಾಲಪ್ಪ ಗೌಡ, ಶ್ರೀ ನಾರಾಯಣ ಶೆಟ್ಟಿ, ಡಾ: ಗೋಪಾಲಕೃಷ್ಣ ನಾಯಕ್ ಮುಂತಾದವರು ಚರ್ಚೆಯಲ್ಲಿ ಭಾಗವಹಿಸಿದರು


