ಅಂತರಾಷ್ಟ್ರೀಯ

‘ಕರಿದ ಕೋಳಿ’ ತಿಂದರೆ ‘ಸ್ತನ’ ಬೆಳೆಯುತ್ತೆ ಗೊತ್ತಾ? ಈ ವರದಿ ನೋಡಿ !

Pinterest LinkedIn Tumblr

chik

ಲಂಡನ್: ಕರಿದ ಕೋಳಿ ತಿಂದರೆ ‘ಸ್ತನ’ ಬೆಳೆಯುತ್ತದೆಯೇ? ಹೌದು ಎಂದು ಪುಷ್ಟೀಕರಿಸುತ್ತದೆ ಚೀನಾದ ಈ ಘಟನೆ. ಕರಿದ ಕೋಳಿಯನ್ನು (ಫ್ರೈಡ್ ಚಿಕನ್) ತಿಂದ ಪರಿಣಾಮವಾಗಿ ಚೀನಾ ಯುವಕನೊಬ್ಬನ ಸ್ತನಗಳು ಬೆಳೆಯುತ್ತಿವೆ. ಹೀಗಾಗಲು ಕಾರಣ ಆತನ ಪ್ರೀತಿಯ ‘ಕರಿದ ಕೋಳಿ’ಯ ಹಾರ್ಮೋನ್ ಎಂದು ವೈದ್ಯರು ಹೇಳಿದ್ದಾರೆ.

ತನ್ನ ಎದೆ ದಿನದಿಂದ ದಿನಕ್ಕೆ ದಪ್ಪವಾಗುತ್ತಿರುವುದನ್ನು ಕಂಡು ಹೌಹಾರಿದ 26ರ ಹರೆಯದ ಪದವೀಧರನೊಬ್ಬ ವೈದ್ಯರ ಬಳಿಗೆ ಸಲಹೆ ಪಡೆಯಲು ಹೋದ. ಮಿ. ಲಿ ಎಂಬ ಈ ಯುವಕನಿಗೆ ಕೋಳಿಯ ಕರಿದ ರೆಕ್ಕೆ ಮತ್ತು ಕಾಲು ಎಂದರೆ ಬಲು ಇಷ್ಟ.

ಆದರೆ ವೈದ್ಯರು ‘ನಿನ್ನ ಫಾಸ್ಟ್ ಫುಡ್ ಪ್ರೀತಿಯೇ ನಿನ್ನ ಸಮಸ್ಯೆಯ ಮೂಲ’ ಎಂದು ಹೇಳಿದರು ಎಂದು ಇಎನ್.ಪೀಪಲ್.ಸಿಎನ್ ವರದಿ ಮಾಡಿದೆ. ’ನಿನ್ನ ಸ್ತನಗಳು ಬೆಳೆಯುತ್ತಿರುವುದಕ್ಕೆ ಕೋಳಿಯ ಹಾರ್ಮೋನ್ ಕಾರಣ. ಸ್ತನ ಬೆಳೆಯಬಾರದು ಎಂದು ಇದ್ದರೆ ಹೆಚ್ಚು ತರಕಾರಿ ಮತ್ತು ಹಣ್ಣುಗಳನ್ನು ತಿನ್ನಬೇಕು’ ಎಂದು ವೈದ್ಯರು ಆತನಿಗೆ ಎಚ್ಚರಿಸಿದರು ಎಂದು ವರದಿ ಹೇಳಿದೆ.

ಕರಿದ ಕೋಳಿ ಜಗತ್ತಿನಲ್ಲಿ ಅತ್ಯಂತ ಜನಪ್ರಿಯವಾಗಿರುವ ಖಾದ್ಯಗಳಲ್ಲಿ ಒಂದು. ಚೀನಾದಲ್ಲಿ ಹೆಚ್ಚಿನ ಜನ ಶ್ರೀಮಂತರಾಗುತ್ತಿದ್ದಂತೆಯೇ ಕರಿದ ಕೋಳಿ ತಿನ್ನುವ ಹವ್ಯಾಸವನ್ನು ರೂಢಿಸಿಕೊಳ್ಳುತ್ತಿದ್ದಾರೆ.

ಕೋಳಿ ಮತ್ತು ಇತರ ಕೆಲವು ಮಾಂಸದ ಉತ್ಪನ್ನಗಳಲ್ಲಿ ಬೆಳವಣಿಗೆಯ ಹಾರ್ಮೋನ್​ಗಳು ಹಾಗೂ ಇತರ ಅಂಶಗಳು ಇರುವುದು ಜಗತ್ತಿನ ವಿವಿಧ ಭಾಗಗಳಲ್ಲಿ ನಡೆಸಲಾದ ಪರೀಕ್ಷೆಗಳಿಂದ ಬೆಳಕಿಗೆ ಬಂದಿದೆ ಎಂದು ವರದಿ ಹೇಳಿದೆ.

Write A Comment