ಮನೋರಂಜನೆ

ನಟ ಶಾಹೀದ್ ಮದುವೆ ಪಾರ್ಟಿಗೆ ಈ ತಾರೆಯರೆಲ್ಲ ಬಂದಿದ್ರು ನೋಡಿ

Pinterest LinkedIn Tumblr

704013shahid-reception3ಜುಲೈ 7 ರಂದು ಗುರ್ಗಾವ್ ನಲ್ಲಿ ದೆಹಲಿ ಮೂಲದ ಯುವತಿ ಮೀರಾ ರಜಪೂತ್ ಜೊತೆ ವಿವಾಹವಾದ ನಟ ಶಾಹೀದ್ ಕಪೂರ್, ಬಾಲಿವುಡ್ ಸೆಲೆಬ್ರಿಟಿಗಳಿಗೆ ಮುಂಬೈನ ಪಂಚತಾರಾ ಹೋಟೆಲ್ ನಲ್ಲಿ ಭರ್ಜರಿ ಪಾರ್ಟಿ ನೀಡಿದ್ದಾರೆ.

ಜುಲೈ 12 ರಂದು ನಡೆದ ವಿವಾಹ ಆರತಕ್ಷತೆ ಕಮ್ ಪಾರ್ಟಿಗೆ ಖ್ಯಾತ ಬಾಲಿವುಡ್ ನಟ ಅಮಿತಾಬ್ ಬಚ್ಚನ್, ಅನಿಲ್ ಕಪೂರ್, ಡಿಸ್ನಿ ಇಂಡಿಯಾದ ಸಿಇಓ ಸಿದ್ದಾರ್ಥ ರಾಯ್ ಕಪೂರ್, ನಿರ್ಮಾಪಕರುಗಳಾದ ಸಾಜಿದ್ ನಾಡಿಯಾವಾಲಾ, ವಿಶಾಲ್ ಭಾರದ್ವಾಜ್, ಸಂಜಯ್ ಕಪೂರ್, ನಟಿ ಅರ್ಚನಾ ಪೂರಣ್ ಸಿಂಗ್, ಮಸಾಬಾ ಗುಪ್ತಾ, ಸತೀಶ್ ಕೌಶಿಕ್ ಮೊದಲಾದ ಖ್ಯಾತನಾಮರು ಆಗಮಿಸಿ ನವ ದಂಪತಿಗಳಿಗೆ ಶುಭ ಹಾರೈಸಿದ್ದಾರೆ.

ಆದರೆ ಶಾಹೀದ್ ಕಪೂರ್ ಜೊತೆ ಹೆಸರು ಥಳಕು ಹಾಕಲಾಗಿದ್ದ ಕರೀನಾ ಕಪೂರ್, ಪ್ರಿಯಾಂಕಾ ಛೋಪ್ರಾ ಮೊದಲಾದವರು ಮಾತ್ರ ಈ ವಿವಾಹ ಆರತಕ್ಷತೆ ಕಾರ್ಯಕ್ರಮದಲ್ಲಿ ಹಾಜರಾಗಿಲ್ಲ. ಇವರುಗಳನ್ನು ಶಾಹೀದ್ ಕಪೂರ್ ಕರೆದಿಲ್ಲವೋ ಅಥವಾ ಅವರೇ ಗೈರು ಹಾಜರಾಗಿದ್ದಾರೋ ಎಂಬುದು ಮಾತ್ರ ತಿಳಿದುಬಂದಿಲ್ಲ.

Write A Comment