ಮುಂಬೈ

25 ವರ್ಷಗಳಿಂದ ರಂಜಾನ್ ಉಪವಾಸ ಮಾಡುತ್ತಿದ್ದಾರೆ ಈ ಇನ್ಸ್ ಪೆಕ್ಟರ್

Pinterest LinkedIn Tumblr

4765Sujata-Patilಮುಂಬೈ: ಜಾತಿ- ಧರ್ಮವೆಂದು ಬಡಿದಾಡಿಕೊಳ್ಳುವವರ ಮಧ್ಯೆ ಭಾವೈಕ್ಯತೆಗೆ ಬೆಸುಗೆ ಹಾಕುವಂತಹ ಇಂತಹ ಅಪರೂಪದ ಘಟನೆಗಳೂ ವರದಿಯಾಗುತ್ತವೆ. ಹಿಂದೂ ಧರ್ಮದ ಮಹಿಳಾ ಇನ್ಸ್ ಪೆಕ್ಟರ್ ಒಬ್ಬರು ಕಳೆದ 25 ವರ್ಷಗಳಿಂದಲೂ ರಂಜಾನ್ ವೇಳೆ ಉಪವಾಸ ಆಚರಿಸುತ್ತಿದ್ದಾರೆ.

ಮುಂಬೈನ ಬಾಂದ್ರಾದ ಖೇರ್ ವಾಡಿ ಪೊಲೀಸ್ ಠಾಣೆಯಲ್ಲಿ ಸೀನಿಯರ್ ಇನ್ಸ್ ಪೆಕ್ಟರ್ ಆಗಿರುವ ಸುಜಾತಾ ಪಾಟೀಲ್, ರಂಜಾನ್ ಸಂದರ್ಭದಲ್ಲಿ ಒಂದು ತಿಂಗಳುಗಳ ಕಾಲ ಕಟ್ಟುನಿಟ್ಟಿನ ಉಪವಾಸ ವ್ರತ ಆಚರಿಸುತ್ತಾರೆ. ಪ್ರತಿಯೊಬ್ಬ ಮುಸ್ಲಿಮರೂ ಮಾಡುವಂತೆ ಇವರು ಬೆಳಗಿನ ಜಾವ 4 ಗಂಟೆಗೆ ಸೆಹ್ರಿ ಹಾಗೂ ಸಂಜೆ ಇಫ್ತಾರ್ ಭೋಜನ ಮಾಡುತ್ತಾರೆ.

ಈ ಕುರಿತು ಮಾತನಾಡಿರುವ ಅವರು, ಚಿಕ್ಕಂದಿನಿಂದಲೂ ತಾವು ಸೂಫಿ ಸಂತರಿಂದ ಪ್ರಭಾವಿತರಾಗಿರುವುದಾಗಿ ಹೇಳಿದ್ದಾರೆ. ಅಜ್ಮೀರಿನ ಖ್ವಾಜಾ ಮೊಹೀದ್ದೀನ್ ಚಿಸ್ತಿ ದರ್ಗಾಕ್ಕೂ ಭೇಟಿ ನೀಡಿರುವುದಾಗಿ ತಿಳಿಸಿರುವ ಸುಜಾತಾ ಪಾಟೀಲ್ ರಂಜಾನ್ ತಿಂಗಳಿನಲ್ಲಿ ಉಪವಾಸ ಆಚರಣೆ ಮಾಡುವುದರಿಂದ ತಮಗೆ ಮಾನಸಿಕ ಶಾಂತಿ ಹಾಗೂ ನೆಮ್ಮದಿ ದೊರೆಯುತ್ತದೆ ಎಂದು ತಿಳಿಸಿದ್ದಾರೆ.

Write A Comment