ರಾಷ್ಟ್ರೀಯ

ಬಾಲಕಿಯನ್ನು ರೇಪ್ ಮಾಡಿ ವಿಡಿಯೋ ಮಾಡಿದ ಕಾಮುಕರು

Pinterest LinkedIn Tumblr

7501rapeಇಬ್ಬರು ಕಾಮುಕರು ಅಪ್ರಾಪ್ತ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿ ತಮ್ಮ ರಾಸಲೀಲೆಯನ್ನು ವಿಡಿಯೋ ಮಾಡಿಕೊಂಡು ಎಂಎಂಎಸ್ ಮೂಲಕ ಹರಿಬಿಟ್ಟ ಅಮಾನವೀಯ ಘಟನೆ ಬಿಹಾರದಲ್ಲಿ ನಡೆದಿದೆ.

ಬಾಲಕಿ ಮನೆಯಲ್ಲಿ ಒಬ್ಬಳೇ ಇದ್ದ ಸಮಯದಲ್ಲಿ ಆಕೆಯ ಮನೆಗೆ ನುಗ್ಗಿದ್ದ ಪಕ್ಕದ ಮನೆಯ ಕಾಮುಕರು ಆಕೆಯ ಮೇಲೆ ಬರ್ಬರವಾಗಿ ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ. ಅಷ್ಟೇ ಅಲ್ಲ , ತಮ್ಮ ಈ ಕುಕೃತ್ಯವನ್ನು ವಿಡಿಯೋ ಮಾಡಿಕೊಂಡಿದ್ದು ಅದರಲ್ಲೊಬ್ಬ ಆ ವಿಡಿಯೋವನ್ನು ಎಂಎಂಎಸ್ ಮೂಲಕ ಹರಿಬಿಟ್ಟಿದ್ದಾನೆ.

ಈ ಕುರಿತು ಪ್ರಕರಣ ದಾಖಲಾಗಿದ್ದು ನ್ಯಾಯಕ್ಕಾಗಿ ಬಾಲಕಿಯ ಪೋಷಕರುಪಂಚಾಯತ್ ನ ಮೊರೆ ಹೋಗಿದ್ದಾರೆ. ಪೊಲೀಸರು ಈಗಾಗಲೇ ಬಾಲಕಿಯ ಹೇಳಿಕೆ ಪಡೆದು ಆಕೆಯನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಿದ್ದು ಕಾಮುಕರ ಪತ್ತೆಗೆ ಮುಂದಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

Write A Comment