ಲಂಡನ್: ಜಿಂಬಾಬ್ವೆ ಪ್ರವಾಸದಿಂದ ಹೊರಗುಳಿದು ವಿಶ್ರಾಂತಿ ಪಡೆಯುತ್ತಿರುವ ಭಾರತ ಟೆಸ್ಟ್ ತಂಡದ ನಾಯಕ ವಿರಾಟ್ ಕೊಹ್ಲಿ, ತಮ್ಮ ಪ್ರಿಯತಮೆ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಜೊತೆ ವಿಂಬಲ್ಡನ್ ಟೆನಿಸ್ ಪಂದ್ಯಗಳನ್ನು ವೀಕ್ಷಿಸಲು ಲಂಡನ್ ಗೆ ತೆರಳಿದ್ದಾರೆ.
ಟೆನಿಸ್ ಪ್ರಿಯರಾದ ಕ್ರಿಕೆಟ್ ಸವ್ಯಸಾಚಿ ಸಚಿನ್ ತೆಂಡೂಲ್ಕರ್ ಎಂದಿನಂತೆ ಈ ಬಾರಿಯೂ ವಿಂಬಲ್ಡನ್ ಪಂದ್ಯಗಳನ್ನು ವೀಕ್ಷಿಸಲು ಪತ್ನಿ ಅಂಜಲಿ ಜೊತೆ ಲಂಡನ್ ಗೆ ಆಗಮಿಸಿದ್ದು, ಈ ಬಾರಿ ಇವರುಗಳಿಗೆ ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ಸಾಥ್ ನೀಡಿದ್ದಾರೆ.
ವಿಂಬಲ್ಡನ್ ಕುರಿತು ಅಪ್ ಡೇಟ್ ನೀಡುವ ಅಧಿಕೃತ ಟ್ವಿಟ್ಟರ್ ಅಕೌಂಟಿನಲ್ಲಿ ಸಚಿನ್ ತೆಂಡೂಲ್ಕರ್, ಅಂಜಲಿ ತೆಂಡೂಲ್ಕರ್, ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ವಿಂಬಲ್ಡನ್ ಸೆಂಟರ್ ಕೋರ್ಟ್ ನಲ್ಲಿ ಕುಳಿತು ಪಂದ್ಯ ವೀಕ್ಷಿಸುತ್ತಿರುವ ಫೋಟೋವನ್ನು ಟ್ವೀಟ್ ಮಾಡಲಾಗಿದೆ.
