ರಾಷ್ಟ್ರೀಯ

ಮೋದಿ ಹವಾಕ್ಕೆ ಬಿಹಾರದಲ್ಲಿ ಅರಳಿದ ಕಮಲ

Pinterest LinkedIn Tumblr

7122BJP_flags_AFP4ಬಿಹಾರದಲ್ಲಿ ಹೇಗಾದರೂ ಮಾಡಿ ಕಮಲವನ್ನುಮುದುಡಿಸಬೇಕು ಎಂದು ಕನಸು ಕಂಡಿದ್ದ ಮೋದಿ ವಿರೋಧಿಗಳಿಗೆ ಬಿಹಾರ ವಿಧಾನ ಪರಿಷತ್ ಚುನಾವಣೆ ಫಲಿತಾಂಶ ಆಘಾತಕ್ಕೆ ಕಾರಣವಾಗಿದೆ.

ಕಳೆದ ಮಂಗಳವಾರ ನಡೆದಿದ್ದ ಬಿಹಾರ ವಿಧಾನ ಪರಿಷತ್ ಚುನಾವಣೆ ಫಲಿತಾಂಶ ಶುಕ್ರವಾರ ಪ್ರಕಟವಾಗಿದ್ದು, 24 ಸ್ಥಾನಗಳ ಪೈಕಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ 14 ಸ್ಥಾನಗಳಲ್ಲಿ ಗೆಲುವು ಸಾಧಿಸಿ ಜಯಭೇರಿ ಬಾರಿಸಿದರೆ ಜೆಡಿಯು 5, ಆರ್‌ಜೆಡಿ 3, ಕಾಂಗ್ರೆಸ್ ಹಾಗೂ ಪಕ್ಷೇತರ ಅಭ್ಯರ್ಥಿ ತಲಾ ಒಂದು ಸ್ಥಾನಕ್ಕೆ ತೃಪ್ತಿ ಪಟ್ಟಿದ್ದಾರೆ.

ವಿಶೇಷವೆಂದರೆ ಸದ್ಯದಲ್ಲಿಯೇ ಬಿಹಾರದ ವಿಧಾನಸಭಾ ಚುನಾವಣಾ ಎದುರಾಗಲಿದ್ದು ಈ ಹಿನ್ನೆಲೆಯಲ್ಲಿ ಬಿಜೆಪಿಯನ್ನು ಮಣಿಸಲು ನಿತೀಶ್ ಕುಮಾರ್ ಹಾಗೂ ಲಾಲೂ ಪ್ರಸಾದ್ ಯಾದವ್ ರಣತಂತ್ರ ರೂಪಿಸುತ್ತಿದ್ದಾರೆ. ಆದರೆ ಈ ನಡುವೆ ಬಿಜೆಪಿ ಎಚ್ಚರಿಕೆಯಿಂದ ರಾಜಕೀಯ ಹೆಜ್ಜೆ ಇಡುತ್ತಿದ್ದು ಮುಂದಿನ ಚುನಾವಣೆಯಲ್ಲಿ ಪಕ್ಷವನ್ನು ಆಡಳಿತಕ್ಕೆ ತರಲು ಸಾಕಷ್ಟು ಪರಿಶ್ರಮ ಪಡುತ್ತಿದೆ. ಹಾಗಾಗಿ ಈ ಗೆಲುವು ಸ್ವಲ್ಪ ಮಟ್ಟಿಗೆ ಬಿಜೆಪಿ ನಾಯಕರಿಗೆ ಉತ್ಸಾಹ ತಂದಿರುವುದಂತೂ ಸತ್ಯ.

Write A Comment