ರಾಷ್ಟ್ರೀಯ

ಮುಖ್ಯಮಂತ್ರಿ ಕಚೇರಿಯಲ್ಲಿ ಜೀನ್ಸ್ ಧರಿಸಿದರೆ ಜೋಕೆ !

Pinterest LinkedIn Tumblr

7875Vasundhara_Raje_Scindia_Reuters_650ಇತ್ತೀಚೆಗೆ ತುಂಡುಡುಗೆಯನ್ನು ಹಲವಾರು ಶಾಲಾ ಕಾಲೇಜುಗಳು ನಿಷೇಧಿಸಿರುವುದು ಎಲ್ಲರಿಗೂ ತಿಳಿದಿರುವ ಸಂಗತಿ. ಆದರೆ ರಾಜಸ್ಥಾನದ ಮುಖ್ಯಮಂತ್ರಿ ಕಚೇರಿಯಲ್ಲಿ ಕರ್ತವ್ಯದಲ್ಲಿದ್ದಾಗ ಜೀನ್ಸ್, ಟೀ ಶರ್ಟ್ ಧರಿಸುವುದನ್ನು ಕಟ್ಟು ನಿಟ್ಟಾಗಿ ನಿಷೇಧಿಸಲಾಗಿದೆ.

ಈ ಹಿಂದಷ್ಟೇ ಮುಖ್ಯಮಂತ್ರಿ ವಸುಂಧರಾ ರಾಜೇ ಬಣ್ಣ ಬಣ್ಣದ ಬಟ್ಟೆ ತೊಡುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದರು. ಅಲ್ಲದೇ ಸಾರ್ವಜನಿಕ ಸಂಪರ್ಕಾಧಿಕಾರಿಗಳೂ ಸಹ ಜೀನ್ಸ್, ಟೀ ಶರ್ಟ್ ಬರುತ್ತಿರುವುದರಿಂದ ಕಿಡಿ ಕಾರಿರುವ ರಾಜೇ ಈ ನಿರ್ಣಯ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ.

ಹಾಗಾಗಿ ಇನ್ನು ರಾಜಸ್ತಾನದ ಮುಖ್ಯಮಂತ್ರಿ ಕಚೇರಿಯಲ್ಲಿ ಯಾವುದೇ ಸಿಬ್ಬಂದಿಗಳು  ಜೀನ್ಸ್, ಟೀ ಶರ್ಟ್ ಗಳನ್ನು ಧರಿಸುವಂತಿಲ್ಲ. ಒಂದೊಮ್ಮೆ ಧರಿಸಿ ಬಂದರೆ ಯಾವ ಶಿಕ್ಷೆ ವಿಧಿಸಲಾಗುತ್ತದೆ ಎಂಬುದು ಮಾತ್ರ ಬಹಿರಂಗಗೊಳಿಸಿಲ್ಲ.

Write A Comment