ಅಂತರಾಷ್ಟ್ರೀಯ

ರಂಜಾನ್ ಉಡುಗೊರೆಗಾಗಿ 20 ಮಂದಿ ಜೀವವನ್ನೇ ತೆತ್ತರು !

Pinterest LinkedIn Tumblr

issಪವಿತ್ರ ರಂಜಾನ್ ಹಿನ್ನೆಲೆಯಲ್ಲಿ ಬಟ್ಟೆಗಳನ್ನು ಉಡುಗೊರೆಯಾಗಿ ಪಡೆಯಲು ನೂಕು ನುಗ್ಗಲು ಉಂಟಾಗಿ 20 ಮಂದಿ ಸಾವನ್ನಪ್ಪಿದ ಘಟನೆ ವರದಿಯಾಗಿದೆ.

ಬಾಂಗ್ಲಾದೇಶದಲ್ಲಿ ಈ ಘಟನೆ ನಡೆದಿದ್ದು ಇಲ್ಲಿನ ಮೈಮೆನ್ ಸಿಂಗ್ ಜಿಲ್ಲೆಯಲ್ಲಿರುವ ತಂಬಾಕು ಕಂಪನಿಯೊಂದು ರಂಜಾನ್ ಹಿನ್ನೆಲೆಯಲ್ಲಿ ಬಡಬಗ್ಗರಿಗೆ ಬಟ್ಟೆ ವಿತರಿಸಲು ಮುಂದಾಗಿತ್ತು. ಈ ಕಾರಣದಿಂದ ಕಾರ್ಖಾನೆ ಎದುರು ಸಾವಿರಾರು ಮಂದಿ ಜಮಾಯಿಸಿದ್ದರು.

ಈ ಸಮಯದಲ್ಲಿ ಕಾಲ್ತುಳಿತ ಸಂಭವಿಸಿದ್ದು 20 ಮಂದಿ ಸಾವನ್ನಪ್ಪಿದ್ದು ಹಲವಾರು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ .ಈ ಸಮಯದಲ್ಲಿ ಪೊಲೀಸರು ಮಧ್ಯ ಪ್ರವೇಶಿಸಿ ಪರಿಷ್ಟಿತಿಯನ್ನು ತಹಬದಿಗೆ ತಂದಿದ್ದು ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ನೀಡಲಾಗುತ್ತಿದೆ.

Write A Comment