ರಾಷ್ಟ್ರೀಯ

‘ಪ್ರೀತಿ’ಗಾಗಿ ಪ್ರೇಯಸಿಯನ್ನೂ ಕೊಂದು ತಾನೂ ಸತ್ತ ಪ್ರೇಮಿ !

Pinterest LinkedIn Tumblr

7088black-male-suicideತನ್ನನ್ನು ಪ್ರೀತಿಸಿದ ಯುವತಿ ಬೇರೊಬ್ಬನನ್ನು ಮದುವೆಯಾದಳು ಎಂದು ಹತಾಶನಾಗಿದ್ದ ಭಗ್ನ ಪ್ರೇಮಿಯೊಬ್ಬ ಆಕೆಯನ್ನು ಹತ್ಯೆ ಮಾಡಿ ತಾನೂ ಗುಂಡು ಹಾರಿಸಿಕೊಂದು ಆತ್ಮಹತ್ಯೆ ಮಾಡಿಕೊಂಡ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

ಇಲ್ಲಿನ ಹಯಾತ್ ನಗರ ಪೊಲೀಸ್ ಠಾಣಾ ವ್ಯಾಪ್ತಿ ಈ ಘಟನೆ ನಡೆದಿದ್ದು  22 ವರ್ಷದ ವೀರಪಾಲ್ ಎಂಬಾತ 18 ವರ್ಷದ ಪುಷ್ಪಾ ಎಂಬಾಕೆಯನ್ನು ಮನಸಾರೆ ಪ್ರೀತಿಸುತ್ತಿದ್ದ. ಆದರೆ ಆಕೆಯೊಂದಿಗಿನ ಈ ಪ್ರೇಮ ಸಂಬಂಧವನ್ನು ವಿರೋಧಿಸಿದ್ದ ಯುವತಿಯ ಮನೆಯವರು ಬೇರೊಬ್ಬ ಹುಡುಗನ ಜತೆ ಮದುವೆ ಮಾಡಿಕೊಟ್ಟಿದ್ದರು.

ಈ ಘಟನೆಯಿಂದ ಮಾನಸಿಕವಾಗಿ ಆಘಾತಗೊಂಡಿದ್ದ ಯುವಕ ವೀರಪಾಲ್  ಶುಕ್ರವಾರ ಬೆಳಿಗ್ಗೆ ಪ್ರೇಯಸಿ ಪುಷ್ಪಾಳಿಗೆ ಗುಂಡು ಹಾರಿಸಿ ತಾನೂ ಸಹ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.

ಈಗಾಗಲೇ ಸ್ಥಳಕ್ಕೆ ಆಗಮಿಸಿರುವ ಪೊಲೀಸರು ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದು ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

Write A Comment