ರಾಷ್ಟ್ರೀಯ

ದೇಹದ ಮೇಲೆ ಕಾರು ಚಲಿಸಿದರೂ ಬದುಕುಳಿದ ಮಗು !

Pinterest LinkedIn Tumblr

9995girl-carಮಹಾರಾಷ್ಟ್ರದ ನಾಸಿಕ್‍ನಲ್ಲಿ ಮೂರು ವರ್ಷದ ಹೆಣ್ಣು ಮಗುವಿನ ಮೇಲೆ ಕಾರು ಹರಿದು ಹೋದರೂ ಸಹ  ಯಾವುದೇ ಆಪಾಯವಿಲ್ಲದೇ ಬದುಕಿದ ಪವಾಡವೊಂದು ನಡೆದಿದೆ.

ತಾಯಿಯ ಜೊತೆ ಹಿಂದೆಯೇ ನಡೆದುಕೊಂಡು ಹೋದ ಮಗುವನ್ನು ಗಮನಿಸದ ಕಾರು ಚಾಲಕ ಕಾರು ಚಲಾಯಿಸಿದ್ದು ಕಾರಿನ ಎರಡೂ ಟಯರ್‍ಗಳು ಮಗುವಿನ ಮೇಲೆ ಹರಿದಿದೆ. ಆದರೆ ಅದೃಷ್ಟವಶಾತ್ ಮಗುವಿಗೆ ಏನೂ ಆಗಿಲ್ಲ.ಆ ಆಘಾತದಲ್ಲೂ ಮಗು ಮೇಲೆದ್ದು ಬಂದಿದ್ದು ಆಕೆಯ ಲಿವರ್ ಮತ್ತು ಕಿಡ್ನಿಗೆ ಆಂತರಿಕ ಗಾಯಗಳಾಗಿದ್ದು ವೈದ್ಯರು ಚಿಕಿತ್ಸೆ ನೀಡಿದ್ದಾರೆ.

ಜೂನ್ 18 ರಂದು ಈ ಘಟನೆ ನಡೆದ್ದು, ಕಾರು ಬಾಲಕಿಯ ಮೇಲೆ ಹರಿದ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆ ಆಗಿದೆ. ಘಟನೆ ನಡೆದ ಬಳಿಕ ಪರಾರಿಯಾಗಲು ಯತ್ನಿಸಿದ್ದ ಚಾಲಕನನ್ನು ಸ್ಥಳೀಯರು ಹಿಡಿದುಕೊಂಡು ಥಳಿಸಲು ಮುಂದಾದಾಗ  ಮಗುವಿನ ಚಿಕಿತ್ಸೆಯ ಎಲ್ಲ ವೆಚ್ಚಗಳನ್ನು ತಾನೇ ಬರಿಸುವುದಕ್ಕೆ ಕಾರು ಚಾಲಕ ಒಪ್ಪಿಕೊಂಡಿದ್ದಾನೆ. ಈ ಹಿನ್ನೆಲೆಯಲ್ಲಿ ಮಗುವಿನ ತಾಯಿ ಕಾರು ಚಾಲಕನ ವಿರುದ್ಧ ದೂರು ದಾಖಲಿಸಿಲ್ಲ ಎಂಬ ಮಾಹಿತಿ ಲಭಿಸಿದೆ.

Write A Comment