ಮನೋರಂಜನೆ

ಗ್ಯಾಜೆಟ್: ಟ್ಯಾಬ್‌ನಲ್ಲಿ ಎಡಿಟಿಂಗ್ ಮಾಡುವೆ

Pinterest LinkedIn Tumblr

10aನನಗೆ ಟ್ಯಾಬ್ ಬಳಸುವುದು ತುಂಬಾನೇ ಇಷ್ಟ. ಅದು ಮೊಬೈಲ್ ಥರನೇ ಇದೆ. ನಾನು ಪೋಸ್ಟರ್ ಡಿಸೈನ್ ಅನ್ನು ಟ್ಯಾಬ್‌ನಲ್ಲೇ ಮಾಡುತ್ತೇನೆ. ಶೂಟಿಂಗ್ ಮಾಡಿದ ಫೋಟೇಜ್ ಅನ್ನು ಬಳಸುವುದಕ್ಕೆ ಟ್ಯಾಬ್ ಬಳಸುವೆ. ನಾನು ಎಲ್ಲೇ ಹೋದರೂ ಇದನ್ನು ತೆಗೆದುಕೊಂಡು ಹೋಗುವೆ. ಕೆಲವೊಮ್ಮೆ ವಿದೇಶಕ್ಕೆ ಪ್ರಯಾಣ ಮಾಡುವಾಗ ಟ್ಯಾಬ್‌ನಲ್ಲಿ ಪಿಕ್ಚರ್ ನೋಡುತ್ತಾ ಕುಳಿತುಕೊಳ್ಳುವೆ. ಅದರಿಂದ ಸಮಯ ಹೋಗುವುದೇ ಗೊತ್ತಾಗುವುದಿಲ್ಲ. ನಿರ್ದೇಶಕರು ನನಗೆ ಒನ್ ಲೈನ್ ಸ್ಟೋರಿ ಕಳುಹಿಸಿ ಕೊಡುತ್ತಾರೆ. ಅದನ್ನು ಮೊಬೈಲ್‌ನಲ್ಲಿ ಓದುವುದಕ್ಕೆ ಕಷ್ಟ. ಅದಕ್ಕಾಗಿಯೇ ಟ್ಯಾಬ್ ಬಳಸುತ್ತೇನೆ.

ಕೆಲವೊಮ್ಮೆ ಮೊಬೈಲ್‌ನಲ್ಲಿ ಲೊಕೇಶನ್ ಶೂಟ್ ಮಾಡುವುದಕ್ಕೆ ಆಗುವುದಿಲ್ಲ. ಆಗ ಟ್ಯಾಬ್‌ನಲ್ಲಿ ಶೂಟ್ ಮಾಡಬಹುದು. ಅದರಲ್ಲಿ ತುಂಬಾ ಕ್ಲಾರಿಟಿ ಇರುತ್ತದೆ. ನನ್ನ ನಿರ್ಮಾಣದ ಚಿತ್ರದ ಶೂಟಿಂಗ್ ನಡೆಯುತ್ತಿದೆ. ಸಂಜೆ ಹೊತ್ತಿಗೆ ಅವರೆಲ್ಲರೂ ನನ್ನ ಟ್ಯಾಬ್‌ಗೆ ಫೋಟೇಜ್ ಕಳುಹಿಸುತ್ತಾರೆ. ಎಲ್ಲರೂ ಕುಳಿತುಕೊಂಡು ಅದನ್ನು ನೋಡುತ್ತೇವೆ. ಮೊಬೈಲ್‌ನಲ್ಲಿ ಸಿನಿಮಾ ಸಂಬಂಧಿಸಿದ ಎಲ್ಲವನ್ನೂ ಮಾಡುವುದಕ್ಕೆ ಸಾಧ್ಯ ಇಲ್ಲ. ಹಾಗಾಗಿ ಸಿನಿಮಾ ತಂಡದವರು ಟ್ಯಾಬ್ ಮೊರೆ ಹೋಗಬೇಕಾಗಿದೆ.

ನಾನು ಬಳಸುತ್ತಿರುವ ಟ್ಯಾಬ್ ಯಾವ ಕಂಪನಿ ಅದರ ಮೊತ್ತ ಎಷ್ಟು ಎಂಬುದು ಮುಖ್ಯವಲ್ಲ. ನಾನು ಹೇಳುವುದು ಇಷ್ಟೇ; ಗ್ಯಾಜೆಟ್‌ಗಳನ್ನು ಮಕ್ಕಳ ಕೈಗೆ ಕೊಡಬೇಡಿ. ಅವರು ಅದನ್ನು ಗೇಮ್ ಆಡುವುದಕ್ಕೆ ಮಾತ್ರ ಬಳಸುತ್ತಾರೆ. ಅದರಿಂದ ಮಕ್ಕಳ ವಿದ್ಯಾಭ್ಯಾಸಕ್ಕೂ ತೊಂದರೆಯಾಗಬಹುದು. ಅದಕ್ಕೆ ಪೋಷಕರು ಕೂಡ ಟ್ಯಾಬ್ ಬಳಸುವುದಕ್ಕೂ ಮುನ್ನ ಮಕ್ಕಳ ಬಗ್ಗೆ ಯೋಚಿಸಿ. ಇಂದಿನ ಮಕ್ಕಳು ಗ್ಯಾಜೆಟ್ ಬಗ್ಗೆ ನಮಗಿಂತ ಹೆಚ್ಚು ತಿಳಿದುಕೊಂಡಿರುತ್ತಾರೆ. ಅದನ್ನು ನಾವು ಎಂದಿಗೂ ಮರೆಯಬಾರದು. – ಸುದೀಪ್, ನಟ

Write A Comment