ಅಂತರಾಷ್ಟ್ರೀಯ

ಬಿಸಿಯಾಗುವ ಸ್ಮಾರ್ಟ್ ಫೋನ್‌ಗೊಂದು ಎಸಿ!

Pinterest LinkedIn Tumblr

9aವಾಷಿಂಗ್ಟನ್: ಕಾರಲ್ಲಿ ಸ್ಮಾರ್ಟ್‌ಫೋನ್‌ಗಳನ್ನು ಚಾರ್ಜ್‌ಗಿಟ್ಟರೆ, ವಿಪರೀತ ಬಿಸಿಯಾಗುತ್ತೆ ಅಲ್ವಾ? ಕಾರು ಒಳಗೆಲ್ಲ ಬಿಸಿಯಾದಂತೆ ಎನಿಸಿ, ಕಿರಿಕಿರಿಯನ್ನುಂಟು ಮಾಡುತ್ತದೆ. ಇದಕ್ಕೆ ಶೆವರ್ಲೆ ಪರಿಹಾರವೊಂದನ್ನು ಸೂಚಿಸುತ್ತಿದೆ.

ಬ್ಯಾಟರಿಗಳು ಸದಾ ಕೂಲ್ ಆಗಿಯೇ ಇದ್ದು, ಕಾರ್ಯಕ್ಷಮತೆ ಹೆಚ್ಚುವಂತೆ ಮಾಡಲು ಮೊಬೈಲ್‌ಗಳಿಗಾಗಿಯೇ ಎಸಿಯೊಂದನ್ನು ಪರಚಯಿಸುತ್ತಿದೆ.

‘ಆ್ಯಕ್ಟಿವ್ ಫೋನ್ ಕೂಲಿಂಗ್’ ಎಂಬ ಈ ಎಸಿಯನ್ನು ಕಾರಿನ ಎಸಿಯೊಂದಿಗೆ ಹಾಕಿಕೊಂಡರೆ, ಫೋನ್ ಕೂಲ್ ಆಗಿರುವಂತೆ ನೋಡಿಕೊಳ್ಳುತ್ತದೆ, ಎಂದು ಯುಎಸ್‌ಎ ಟುಡೇ ವರದಿ ಮಾಡಿದೆ.

‘ಬ್ಯಾಟರಿ ನಿರಂತರವಾಗಿ ಬಿಸಿಯಾಗುತ್ತಿದ್ದರೆ, ಫೋನ್‌ಗೂ ತೊಂದರೆಯಾಗುತ್ತದೆ. ಅದಕ್ಕೆ ಫೋನ್ ಅನ್ನು ಸದಾ ಗಾಳಿಯಾಡುವೆಡೆ ಇಟ್ಟು, ಚಾರ್ಜ್‌ ಆಗುವಾಗ ಆಥವಾ ಮಾತನಾಡುವಾಗ ತಂಪಾಗಿರುವಂತೆ ನೋಡಿ ಕೊಳ್ಳಬೇಕು’, ಎನ್ನುತ್ತಾರೆ ಡಿಜಿಟಲ್ ಟ್ರೆಂಡ್‌ನ ಜೆಫ್ರಿ ವ್ಯಾನ್ ಕ್ಯಾಂಪ್.

ಈ ಎಸಿ 2016ರಲ್ಲಿ ಬರುವ ಕಾರುಗಳಾದ ಇಂಪಾಲಾ, ಮಲಿಬು, ವೋಲ್ಟ್ ಮತ್ತು ಕ್ರೂಜ್‌ಗಳಲ್ಲಿ ವೈರ್‌ಲೆಸ್ ಚಾರ್ಜಿಂಗ್ ಸೌಕರ್ಯದೊಂದಿಗೆ ಈ ವ್ಯವಸ್ಥೆಯೂ ಬರಲಿದೆ. ಡ್ಯಾಶ್‌ಬೋರ್ಡ್‌ನಲ್ಲಿರುವ ವಿಶೇಷ ಟ್ರೇಯಲ್ಲಿ ಮೊಬೈಲ್ ಫೋನ್ ಇರಿಸಿದರಾಯಿತು. ಇದರಿಂದ ಸಂಗೀತ ಕೇಳಿದರೆ, ಗಂಟೆಗಟ್ಟಲೆ ಮಾತನಾಡಿದರೂ, ನಿಮ್ಮ ಸ್ಮಾರ್ಟ್ ಫೋನ್ ಬಿಸಿಯಾಗುವುದಿಲ್ಲ.

Write A Comment