ಮನೋರಂಜನೆ

ಸಂಭಾವನೆ ಪಡೆಯದೆ ಡ್ಯಾನ್ಸ್ ಮಾಡಿದ ಹೃತಿಕ್

Pinterest LinkedIn Tumblr

2aಸಲ್ಮಾನ್ ಖಾನ್ ಅಭಿನಯದ, ಗುಲ್ಶನ್ ಕುಮಾರ್ ನಿರ್ಮಾಣದ ಆಶಿಕಿ ಚಿತ್ರ ಸೂಪರ್ ಹಿಟ್ ಆಗಿತ್ತು. ಈಗ ಆ ಚಿತ್ರದ ಧೀರೇ ಧೀರೇಸೆ ಹಾಡನ್ನು ರಿಕ್ರಿಯೇಟ್ ಮಾಡಲಾಗುತ್ತಿದ್ದು, ಈ ಹಾಡಿಗೆ ಸ್ಟೆಪ್ ಹಾಕಲು ಹೃತಿಕ್ ರೋಷನ್ ಒಪ್ಪಿಗೆ ಸೂಚಿಸಿದ್ದಾರೆ. ಹೃತಿಕ್ ರೋಷನ್ ಗ್ರಿಕ್ ಗಾಡ್‌ನಂತೆ ಕಾಣಿಸೋದು ಮಾತ್ರ ಅಲ್ಲ, ಬಾಲಿವುಡ್‌ನ ನೃತ್ಯ ದೇವನಂತೆಯೂ ಕಂಗೊಳಿಸುತ್ತಾರೆ. ಯಾಕೆಂದರೆ, ಈ ನೃತ್ಯಕ್ಕೆ ಅವರು ಒಂದು ಪೈಸೆ ಸಂಭಾವನೆಯನ್ನೂ ಪಡೆಯುತ್ತಿಲ್ಲ. ಮೊದಲ ಬಾರಿಗೆ ರಿಕ್ರಿಯೇಟ್ ಮಾಡಿದ ಹಳೆಯ ಹಾಡಿಗೆ ಡ್ಯಾನ್ಸ್ ಮಾಡಲಿದ್ದಾರೆ ಹೃತಿಕ್.

1990 ಯಲ್ಲಿ ತೆರೆ ಕಂಡ ಆಶಿಕಿ ಚಿತ್ರದ ಧೀರೆ ಹಾಡಿಗೆ ನದೀಪ್ ಶ್ರವಣ್ ಸಂಗೀತ ಸಂಯೋಜನೆ ಮಾಡಿದ್ದರು. ಕುಮಾರ್ ಸಾನು ಹಾಡಿದ್ದಾರೆ. ಈಗ ಮರು ಧ್ವನಿ ಮುದ್ರಣದಲ್ಲಿ ಯೊ ಯೊ ಹನಿ ಸಿಂಗ್ ಹಾಡಲಿದ್ದಾರೆ. ಗುಲ್ಶನ್ ಕುಮಾರ್ ಮಗ ಭೂಷಣ್ ಕುಮಾರ್ ತಮ್ಮ ತಂದೆಯ ನೆನಪಲ್ಲಿ ಆಶಿಕಿ ಚಿತ್ರದ ಹಾಡನ್ನು ರಿಕ್ರಿಯೇಟ್ ಮಾಡಲು ಬಯಸಿದ್ದಾರೆ. ಇದಕ್ಕೆ ಒಪ್ಪಿಕೊಂಡ ಹೃತಿಕ್ ರೋಷನ್ ಮತ್ತು ಹನಿ ಸಿಂಗ್ ಯಾವುದೇ ಸಂಭಾವನೆ ಪಡೆಯದೆ ಈ ಹಾಡಿಗೆ ಕೆಲಸ ಮಾಡಿದ್ದಾರೆ.

‘ಅಂದು ಆಶಿಕಿ ಮತ್ತು ಮೈನೆ ಪ್ಯಾರ್ ಕಿಯಾ ಚಿತ್ರದ ಹಾಡುಗಳು ಬಹಳ ಜನಪ್ರಿಯವಾಗಿದ್ದವು. ನಾನು ಅಪ್ಪನ ಜತೆ ಯಾವಾಗ ಕಾರಿನಲ್ಲಿ ಕೂತರೂ ತಕ್ಷಣ ಈ ಹಾಡುಗಳನ್ನು ಪ್ಲೇ ಮಾಡುತ್ತಿದ್ದೆ. ಇಡೀ ದಿನ ಕೇಳುತ್ತಿದ್ದೆ. ಅಪ್ಪ ನಮ್ಮನ್ನಗಲಿದಾಗ ಯೊ ಯೊ ಹನಿಸಿಂಗ್ ಬಳಿ ಧೀರೇ ಧೀರೆ ಸೆ ಹಾಡು ಅಪ್ಪನ ಮೆಚ್ಚಿನ ಹಾಡಾಗಿತ್ತು ಎಂದಿದ್ದೆ. ಈಗ ಆ ಹಾಡನ್ನು ಮತ್ತೆ ರಿಕ್ರಿಯೇಟ್ ಮಾಡಿದ್ದಾರೆ. ಆಶಿಕಿ ಚಿತ್ರಕ್ಕೆ 25 ವರ್ಷ ತುಂಬಿದ ಸಂದರ್ಭದಲ್ಲಿ ಈ ಹಾಡಿನ ಮೂಲಕ ನನ್ನ ತಂದೆಗೆ ಶ್ರದ್ಧಾಂಜಲಿ ಅರ್ಪಿಸಲು ಇಚ್ಚಿಸುತ್ತೇನೆ’ ಎಂದಿದ್ದಾರೆ ಭೂಷಣ್ ಕುಮಾರ್.

‘ಗುಲ್ಶನ್ ಕುಮಾರ್‌ಗಾಗಿ ನಾನು ಡ್ಯಾನ್ಸ್ ಮಾಡುತ್ತಿದ್ದೇನೆ. ನಾನು ಈ ಹಾಡಿನಲ್ಲಿ ನರ್ತಿಸಲು ಅದೊಂದೇ ಕಾರಣ’ ಎಂದಿದ್ದಾರೆ ನಟ ಹೃತಿಕ್. ಇವರಿಬ್ಬರೂ ಹಣ ಪಡೆಯದೆ ಕೆಲಸ ಮಾಡಲು ಒಪ್ಪಿದ್ದಾರೆ. ನಾನು ಕೂಡಾ ಹಣಕ್ಕಾಗಿ ಇದನ್ನು ಮಾಡುತ್ತಿಲ್ಲ. ಇದರಿಂದ ಬಂದ ಹಣವನ್ನು ಚಾರಿಟಿ ಫಂಡ್‌ಗೆ ಕೊಡುತ್ತೇನೆ ಎಂದಿದ್ದಾರೆ ಭೂಷಣ್.

Write A Comment