ಮನೋರಂಜನೆ

ಕಾಶ್ಮೀರದ ಸೌಂದರ್ಯಕ್ಕೆ ಮನಸೋತ ಸಲ್ಲು

Pinterest LinkedIn Tumblr

1aಸಲ್ಮಾನ್ ಖಾನ್ ಕಾಶ್ಮೀರದ ಸೌಂದರ್ಯಕ್ಕೆ ಮನಸೋತಿದ್ದಾರೆ. ತಮ್ಮ ಹೊಸ ಸಿನಿಮಾ ‘ಭಜರಂಗಿ ಭಾಯಿಜಾನ್’ ಶೂಟಿಂಗ್ ನಿಮಿತ್ತ ಸಲ್ಲು ಕಾಶ್ಮೀರಕ್ಕೆ ಹೋಗಿದ್ದರು. ಅಲ್ಲಿನ ಪ್ರಕೃತಿ ಸೌಂದರ‌್ಯಕ್ಕೆ ಅವರು ಫಿದಾ ಆಗಿದ್ದಾರೆ. ಸಾಯುವ ಮುನ್ನ ಪ್ರತಿಯೊಬ್ಬರೂ ಕನಿಷ್ಠ ಹತ್ತು ಬಾರಿಯಾದರೂ ಕಾಶ್ಮೀರವನ್ನು ನೋಡಬೇಕು ಎಂದಿದ್ದಾರೆ ಸಲ್ಲು.

ಚಿತ್ರದ ನಿರ್ದೇಶಕ ಕಬೀರ್ ಖಾನ್ ಹೇಳಿಕೆ ಕೂಡ ಸಲ್ಮಾನ್‌ರ ಆಶಯಕ್ಕೆ ಇಂಬು ನೀಡುತ್ತದೆ. ‘ಕಾಶ್ಮೀರದ ವಾತಾವರಣ ಸರಿಯಿಲ್ಲ ಎನ್ನುವ ತಪ್ಪು ತಿಳಿವಳಿಕೆ ನಮ್ಮಲ್ಲಿದೆ. ಆದರೆ ಅಲ್ಲಿಗೆ ಹೋದಾಗಲೇ ಅದೆಷ್ಟು ಶಾಂತಿ ಹಾಗೂ ಸುಂದರವಾದ ತಾಣ ಎನ್ನುವುದು ಗೊತ್ತಾಗುವುದು.’ ಎಂದು ಭಾವುಕರಾಗುವ ಕಬೀರ್ ‘ಭಜರಂಗಿ ಭಾಯಿಜಾನ್’ ಚಿತ್ರಕ್ಕೆ ಅಲ್ಲಿ ನಲವತ್ತು ದಿನಗಳ ಕಾಲ ಚಿತ್ರೀಕರಣ ನಡೆಸಿದ್ದಾರೆ.

‘ನಾವಲ್ಲಿ 40 ದಿನಗಳ ಕಾಲ ಶೂಟಿಂಗ್ ನಡೆಸಿದೆವು. ಎಲ್ಲರೂ ಅಲ್ಲಿನ ಸಮಸ್ಯೆಗಳ ಬಗ್ಗೆ ಮಾತನಾಡುತ್ತಾರೆ. ನಾವು ಕಾಶ್ಮೀರದ ಮತ್ತೊಂದು ಮುಖವನ್ನು ತೋರಿಸಬೇಕೆಂದು ನಿಶ್ಚಯಿಸಿದೆವು. ಸಲ್ಮಾನ್ ಖಾನ್‌ರಂತಹ ಸ್ಟಾರ್ ಹೀರೋಗಳೇ ಅಲ್ಲಿ ನಲವತ್ತು ದಿನಗಳ ಕಾಲ ಶೂಟಿಂಗ್‌ನಲ್ಲಿ ತೊಡಗಿಸಿಕೊಂಡರು. ಹೀಗಾಗಿ ಇತರೆ ಹೀರೋಗಳು ಕೂಡ ಯಾವುದೇ ಹಿಂಜರಿಕೆ, ಭಯವಿಲ್ಲದೆ ಅಲ್ಲಿ ಚಿತ್ರೀಕರಣ ನಡೆಸಬಹುದು. ಮುಂದಿನ ದಿನಗಳಲ್ಲಿ ಹೆಚ್ಚೆಚ್ಚು ಚಿತ್ರಗಳಿಗೆ ಕಾಶ್ಮೀರದಲ್ಲಿ ಚಿತ್ರೀಕರಣ ನಡೆಯುವಂತಾಗಲಿ’ ಎಂದು ನಿರ್ದೇಶಕ ಕಬೀರ್ ಖಾನ್ ಆಶಿಸುತ್ತಾರೆ.

Write A Comment