ಸ್ಯಾಂಡಲ್‌ವುಡ್‌ನಲ್ಲಿ ಮತ್ತೆ ಪರಭಾಷೆ ಚಿತ್ರದ ಹಾವಳಿ ಶುರುವಾಗಿದೆ. ಇಂದು ಬಿಡುಗಡೆಯಾಗುತ್ತಿರುವ ಬಾಹುಬಲಿ ಚಿತ್ರ ವಿಶ್ವದಾದ್ಯಂತ ತನ್ನ ಕದಂಬ ಬಾಹುವನ್ನು ಚಾಚಿದೆ. ಇದರಿಂದ ಬಹಳಷ್ಟು ತೊಂದರೆ ಎದುರಾಗಿದೆ ಎನ್ನಬಹುದು. ನಾಲ್ಕು ಭಾಷೆಯಲ್ಲಿ ಬಿಡುಗಡೆಗೊಳ್ಳುತ್ತಿರುವ ಈ ಚಿತ್ರದ ಓಟಕ್ಕೆ ಕನ್ನಡ ಚಿತ್ರಗಳು ಕೂಡ ನಲುಗುತ್ತಿವೆ.
ಕಳೆದ ವಾರವಷ್ಟೆ ಬಿಡುಗಡೆಗೊಂಡ ರಂಗಿತರಂಗ ಚಿತ್ರ ಮಲ್ಟಿಫ್ಲೆಕ್ಸ್‌ಗಳಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿವೆ. ಆದರೂ ಬಾಹುಬಲಿಯ ಅಬ್ಬರದಿಂದ ಮಲ್ಪಿಪ್ಲೆಕ್ಸ್ ಕೆಲವು ಚಿತ್ರಮಂದಿರಗಳನ್ನು ಕಸಿದುಕೊಳ್ಳುತ್ತಿದೆ. ಅದರಂತೆಯೇ ಉ.ಕ.ಭಾಗದಲ್ಲಿ ಗೂಳಿಹಟ್ಟಿ ಚಿತ್ರವೂ ಕೂಡ ಯಶಸ್ವಿಯಾಗಿ ಪ್ರದರ್ಶನಗೊಳ್ಳುತ್ತಿದೆ. ಹಾಗೆಯೇ ಗೂಳಿಹಟ್ಟಿಯ ಪ್ರಮುಖ ಚಿತ್ರಮಂದಿರವಾದ ಭೂಮಿಕಾ ಚಿತ್ರಮಂದಿರವನ್ನೂ ಕೂಡ ವಶಪಡಿಸಿಕೊಂಡಿದೆ. ಇದರಿಂದ ಗೂಳಿಹಟ್ಟಿ ಚಿತ್ರ ನಿರ್ಮಾಪಕರಿಗೆ ತುಂಬಾ ಅನಾನುಕೂಲವಾಗಿದ್ದು , ಪರ್ಯಾಯ ಚಿತ್ರಮಂದಿರಕ್ಕೆ ಸಾಗಿದ್ದಾರೆ.ಸ್ಯಾಂಡಲ್‌ವುಡ್‌ನಲ್ಲಿ ಕನ್ನಡ ಚಿತ್ರಗಳು ಉತ್ತಮ ಪ್ರದರ್ಶನ ಕಾಣುವುದೇ ಅಪರೂಪ.
ಹಾಗೊಂದು, ಈಗೊಂದು ಪ್ರೇಕ್ಷಕರನ್ನು ಸೆಳೆಯುವ ಸಿನಿಮಾ ಬಂದಾಗ ಪರಭಾಷೆ ಚಿತ್ರಗಳ ಮಧ್ಯೆ ನಲುಗಿಹೋಗುತ್ತಿವೆ. ರಂಗಿತರಂಗ ಹಾಗೂ ಗೂಳಿಹಟ್ಟಿ ಚಿತ್ರದ ನಿರ್ಮಾಪಕರು ಈಗಾಗಲೇ ವಾಣಿಜ್ಯ ಮಂಡಳಿಗೆ ದೂರು ನೀಡಲು ಮುಂದಾಗಿದ್ದು , ಬಾಹುಬಲಿ ವಿತರಣೆ ಹಕ್ಕನ್ನು ಪಡೆದ ಆರ್.ಎಸ್ ಪ್ರೊಡಕ್ಷನ್‌ನ ಶ್ರೀನಿವಾಸ್ ಹಾಗೂ ಶ್ರೀಕಾಂತ್ ಅವರನ್ನು ಕರೆಸಿ ಮಾತನಾಡಿ ಕನ್ನಡ ಚಿತ್ರಗಳಿಗೆ ಅನುಕೂಲವಾಗುವಂತೆ ಸಹಕರಿಸಲು ತಿಳಿಸಿ ನ್ಯಾಯಕೊಡಿಸಿ ಎಂದು ವಾಣಿಜ್ಯ ಮಂಡಳಿ ಮುಂದೆ ಹೋಗಿದ್ದಾರೆ. ಆರ್.ಎಸ್.ಪ್ರೊಡಕ್ಷನ್ ಕೂಡ ಕನ್ನಡದಲ್ಲಿ ಬಹಳಷ್ಟು ಚಿತ್ರಗಳನ್ನು ನಿರ್ಮಿಸಿವೆ. ಕನ್ನಡ ಚಿತ್ರಗಳ ಬಗ್ಗೆ ಕಾಳಜಿ ವಹಿಸಿ ಸೂಕ್ತ ನಿರ್ಧಾರವನ್ನು ತೆಗೆದುಕೊಂಡು ಕನ್ನಡ ಚಿತ್ರಗಳನ್ನು ಉಳಿಸುವಂತಾಗಲಿ. ವಾಣಿಜ್ಯ ಮಂಡಳಿ ಈಗಾಗಲೇ ಎದುರಾಗಿರುವ ಸಮಸ್ಯೆಗಳನ್ನು ಬಗೆಹರಿಸುವ ಪ್ರಯತ್ನ ಮಾಡಲು ಮುಂದಾಗಿದ್ದು, ಮುಂದೆ ಈ ರೀತಿಯ ಸಮಸ್ಯೆ ಎದುರಾಗದಂತೆ ಸೂಕ್ತ ತೀರ್ಮಾನ ಕೈಗೊಳ್ಳಲು ಆಲೋಚಿಸುತ್ತೇವೆ ಎಂದು ಚಲನಚಿತ್ರ ವಾಣಿಜ್ಯ ಮಂಡಳಿ ನಿರ್ಮಾಪಕರ ಕಾರ್ಯದರ್ಶಿ ಬಾಮಾ ಹರೀಶ್ ತಿಳಿಸಿದ್ದಾರೆ.