ಮನೋರಂಜನೆ

ಅಣ್ಣಾವ್ರ ‘ಮಯೂರ’ ಚಿತ್ರದ ಕಥೆಯನ್ನು ಕಾಪಿ ಮಾಡಿದ್ರಾ ರಾಜಮೌಳಿ..?

Pinterest LinkedIn Tumblr

4662Rajkumar-in-Mayura-and-Prabhas-in-Baahubali

ಖ್ಯಾತ ನಿರ್ದೇಶಕ ರಾಜಮೌಳಿ ನಿರ್ದೇಶನದ ‘ಬಾಹುಬಲಿ’ ಚಿತ್ರ ಬಿಡುಗಡೆಗೂ ಮುನ್ನವೇ ಭರ್ಜರಿ ಸದ್ದು ಮಾಡುತ್ತಿದೆ. ಈ ಮಧ್ಯೆ ಸಾಮಾಜಿಕ ಜಾಲ ತಾಣಗಳಲ್ಲಿ ಚರ್ಚೆಯೊಂದು ನಡೆದಿದ್ದು, ಕನ್ನಡದ ಮೇರು ನಟ ಡಾ.ರಾಜಕುಮಾರ್ ಅಭಿನಯದ ‘ಮಯೂರ’ ಚಿತ್ರದ ಕಥೆಯನ್ನೇ ರಾಜಮೌಳಿ ಕಾಪಿ ಮಾಡಿದ್ದಾರೆಂಬ ಮಾತು ಕೇಳಿ ಬರುತ್ತಿದೆ.

ತೆರೆಗೆ ಬರುವ ಮುನ್ನವೇ ‘ಬಾಹುಬಲಿ’ ಚಿತ್ರದ ಕಥೆ ಬಹಿರಂಗಗೊಂಡಿದ್ದ ಕಾರಣ ಈ ಚರ್ಚೆ ಆರಂಭವಾಗಿದ್ದು, 1975 ರಲ್ಲಿ ಬಿಡುಗಡೆಗೊಂಡಿದ್ದ ಡಾ. ರಾಜಕುಮಾರ್ ಅಭಿನಯದ ‘ಮಯೂರ’ ಚಿತ್ರದ ಕಥೆಯನ್ನೇ ಇದು ಹೋಲುತ್ತಿದೆ ಎಂದು ಹೇಳಲಾಗುತ್ತಿದೆ. ಈ ಹಿಂದೆ ‘ಬಾಹುಬಲಿ’ ಚಿತ್ರದ ಪೋಸ್ಟರ್ ಬಿಡುಗಡೆಗೊಂಡಿದ್ದ ವೇಳೆ ಅದನ್ನು ಹಾಲಿವುಡ್ ಚಿತ್ರವೊಂದರಿಂದ ಕಾಪಿ ಮಾಡಲಾಗಿದೆ ಎಂಬ ಮಾತುಗಳು ಕೇಳಿ ಬಂದಿದ್ದವು.

ಪ್ರಭಾಸ್, ರಾಣಾ ದಗ್ಗುಬಾಟಿ, ಅನುಷ್ಕಾ ಶೆಟ್ಟಿ, ತಮನ್ನಾ ಹಾಗೂ ಕನ್ನಡದ ಖ್ಯಾತ ನಟ ಕಿಚ್ಚ ಸುದೀಪ್ ಅಭಿನಯಿಸಿರುವ ‘ಬಾಹುಬಲಿ’ ತೆರೆ ಮೇಲೆ ಬರುತ್ತಿದ್ದು, ಬಳಿಕವಷ್ಟೇ ಇದು ಅಣ್ಣಾವ್ರ ಅಭಿನಯದ ‘ಮಯೂರ’ ಚಿತ್ರದ ಕಥೆಯನ್ನು ಕಾಪಿ ಮಾಡಿ ನಿರ್ಮಿಸಲಾಗಿದೆಯಾ ಎಂಬುದು ಬಹಿರಂಗವಾಗಲಿದೆ.

Write A Comment