ರಾಷ್ಟ್ರೀಯ

ಸಂಬಂಧಿ ಯುವತಿ ಮೇಲೆ ಸ್ಲೀಪರ್ ಕೋಚ್ ಬಸ್ ನಲ್ಲೇ ಅತ್ಯಾಚಾರ

Pinterest LinkedIn Tumblr

539903-1ಅಹ್ಮದಾಬಾದ್: ತಾನು ಪ್ರೀತಿಸುತ್ತಿದ್ದ ಯುವಕನನ್ನು ಮದುವೆಯಾಗುವ ಸಲುವಾಗಿ ಸಂಬಂಧಿಯೊಬ್ಬನ ಬಳಿ 21 ವರ್ಷದ ಯುವತಿ ಸಹಾಯ ಕೇಳಿದ್ದು, ಅವರುಗಳು ಪರಾರಿಯಾಗಲು ಸಹಕಾರ ನೀಡುವುದಾಗಿ ಹೇಳಿದ್ದ ಆತ ಸ್ಲೀಪರ್ ಕೋಚ್ ಬಸ್ ನಲ್ಲಿ ಕರೆದುಕೊಂಡು ಹೋಗುವ ವೇಳೆ ಅಮಲು ಬರುವ ಪದಾರ್ಥ ನೀಡಿ ಅತ್ಯಾಚಾರವೆಸಗಿರುವ ಘಟನೆ ನಡೆದಿದೆ.

ಮುಂಬೈನ ಬೋರಿವಲಿ ನಿವಾಸಿ ಬಂಟಿ ಅಲಿಯಾಸ್ ಜಸ್ವಂತ್ ಸಿಂಗ್ ರಾಥೋರ್ ಎಂಬಾತನೇ ಈ ಕೃತ್ಯವೆಸಗಿದ ಆರೋಪಿಯಾಗಿದ್ದು, ಯುವತಿ ನೀಡಿದ ದೂರಿನಂತೆ ಆತನ ವಿರುದ್ದ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಬಂಧನಕ್ಕೆ ಮುಂದಾಗಿದ್ದಾರೆ. ಜಸ್ವಂತ್ ಸಿಂಗ್ ರಾಥೋರ್  ಯುವತಿಯ ಸಹೋದರಿಯ ವಿವಾಹ ಸಮಾರಂಭಕ್ಕೆಂದು ಅಹ್ಮದಾಬಾದಿಗೆ ಹೋಗಿದ್ದನೆನ್ನಲಾಗಿದೆ.

ಸಹೋದರಿಯ ವಿವಾಹ ಸಮಾರಂಭದಲ್ಲಿ ಯುವತಿ ತನ್ನ ಪ್ರೇಮದ ಕುರಿತು ಹೇಳಿಕೊಂಡಿದ್ದು, ಯುವತಿ ಹಾಗೂ ಆಕೆಯ ಪ್ರೇಮಿ ಜಸ್ವಂತ್ ಸಿಂಗ್ ಬಳಿ ಸಹಾಯ ಯಾಚಿದರೆನ್ನಲಾಗಿದೆ. ಮುಂಬೈನಲ್ಲಿ ಅವರುಗಳಿಗೆ ನೆಲೆ ಒದಗಿಸಿಕೊಡುವುದಾಗಿ ಹೇಳಿದ ಜಸ್ವಂತ್ ಸಿಂಗ್, ಯುವತಿಯನ್ನು ಯಾರಿಗೂ ತಿಳಿಯದಂತೆ ತನ್ನ ಜೊತೆ ಮುಂಬೈಗೆ ಕರೆದುಕೊಂಡು ಹೋಗುವುದಾಗಿ ಹೇಳಿದ್ದು, ಸ್ವಲ್ಪ ದಿನದ ಬಳಿಕ ಆಕೆಯ ಪ್ರೇಮಿ ಬಂದು ಸೇರುವಂತೆ ತಿಳಿಸಿದ್ದನೆನ್ನಲಾಗಿದೆ.

ಅದರಂತೆ ಜಸ್ವಂತ್ ಸಿಂಗ್ ಯುವತಿಯನ್ನು ಅಹ್ಮದಾಬಾದಿನಿಂದ ಮುಂಬೈಗೆ ತನ್ನ ಜೊತೆ ಸ್ಲೀಪರ್ ಕೋಚ್ ಬಸ್ ನಲ್ಲಿ ಕರೆದುಕೊಂಡು ಹೊರಟಿದ್ದು, ಮಾರ್ಗ ಮಧ್ಯೆ ಆಕೆಗೆ ಅಮಲು ಪದಾರ್ಥ ತಿನ್ನಿಸಿ ಬಸ್ ನಲ್ಲಿಯೇ ಆಕೆಯ ಮೇಲೆ ಅತ್ಯಾಚಾರವೆಸಗಿದ್ದಾನೆ. ಪ್ರಜ್ಞೆ ಬಂದ ಬಳಿಕ ಯುವತಿ ಪರಿಪರಿಯಾಗಿ ಬೇಡಿಕೊಂಡರೂ ಕರಗದೇ ತನ್ನ ಮನೆಗೆ ಕರೆದುಕೊಂಡು ಹೋಗಿ ಮತ್ತೊಮ್ಮೆ ತನ್ನ ಕಾಮತೃಷೆ ತೀರಿಸಿಕೊಂಡಿದ್ದಾನೆ.

ಆತನಿಂದ ತಪ್ಪಿಸಿಕೊಂಡು ಅಹ್ಮದಾಬಾದಿಗೆ ಮರಳಿದ ಯುವತಿ ಈಗ ಜಸ್ವಂತ್ ಸಿಂಗ್ ರಾಥೋರ್ ವಿರುದ್ದ ಅತ್ಯಾಚಾರದ ಪ್ರಕರಣ ದಾಖಲಿಸಿದ್ದು, ಯುವತಿಯನ್ನು ವೈದ್ಯಕೀಯ ಪರೀಕ್ಷೆಗೊಳಪಡಿಸಿರುವ ಪೊಲೀಸರು ಮುಂಬೈಗೆ ತೆರಳಿ ಆರೋಪಿಯನ್ನು ಬಂಧಿಸಲು ಮುಂದಾಗಿದ್ದಾರೆ.

Write A Comment