ರಾಷ್ಟ್ರೀಯ

ಕೆಲಸ ಹುಡುಕುವವರು ಮಾಡುವ ಕೆಲ ಯಡವಟ್ಟುಗಳು

Pinterest LinkedIn Tumblr

847315job1

ಪ್ರತಿಯೊಬ್ಬರು ಉತ್ತಮ ವೇತನ ದೊರೆಯುವ ಉದ್ಯೋಗವನ್ನೇ ಬಯಸುತ್ತಾರೆ. ಇದಕ್ಕಾಗಿ ತಮ್ಮ ಹೆಸರುಗಳನ್ನು ವಿವಿಧ ಜಾಬ್ ಪೋರ್ಟಲ್ ಗಳಲ್ಲಿ ನೋಂದಾಯಿಸಿಕೊಂಡಿರುತ್ತಾರೆ. ಅದರೂ ಕೆಲವೊಮ್ಮೆ ಮಾಡುವ ಯಡವಟ್ಟುಗಳು ಉದ್ಯೋಗ ಪಡೆಯುವಲ್ಲಿ ವಿಫಲರಾಗುವಂತೆ ಮಾಡುತ್ತವೆ.

ಕೇವಲ ಜಾಬ್ ಪೋರ್ಟಲ್ ಗಳಲ್ಲಿ ಮಾತ್ರ ಹೆಸರು ನೋಂದಾಯಿಸದೇ LinkedIn, Facebook, Twitter ಮೊದಲಾದ ಕಡೆಯೂ ಗಮನ ಹರಿಸಿದರೆ ಉತ್ತಮ. ಹಲವು ಕಂಪನಿಗಳು ಈಗ ತಮ್ಮಲ್ಲಿ ಲಭ್ಯವಿರುವ ನೌಕರಿಗಳಿಗೆ ಸೂಕ್ತ ನೌಕರರನ್ನು ಹುಡುಕಲು ಸಾಮಾಜಿಕ ಜಾಲ ತಾಣಗಳನ್ನೇ ಹೆಚ್ಚಾಗಿ ಆಶ್ರಯಿಸುತ್ತಿದ್ದಾರೆ. ಇದಕ್ಕೆ ಕಾರಣ ಸಾಮಾಜಿಕ ಜಾಲ ತಾಣಗಳ ಮೂಲಕ ನಿಮ್ಮ ವೈಯಕ್ತಿಕ ಮಾಹಿತಿಗಳೂ ಅವರುಗಳಿಗೆ ಲಭ್ಯವಾಗುತ್ತವೆ. ಹಾಗಾಗಿ ಫೇಸ್ ಬುಕ್, ಟ್ವಿಟ್ಟರ್ ಮೊದಲಾದ ಸಾಮಾಜಿಕ ಜಾಲ ತಾಣಗಳಲ್ಲಿ ದೊಡ್ಡ ದೊಡ್ಡ ಕಂಪನಿಗಳ ಮಾನವ ಸಂಪನ್ಮೂಲ ಅಧಿಕಾರಿಯಾಗಿರುವವರನ್ನು ಫಾಲೋ ಮಾಡುತ್ತಿದ್ದರೆ ನೌಕರಿ ಕುರಿತ ಅಪ್ ಡೇಟ್ಸ್ ಸಿಗುತ್ತದೆ.

ಸಾಮಾನ್ಯವಾಗಿ ಎಲ್ಲ ಅಭ್ಯರ್ಥಿಗಳು ಮಾಡುವ ಮತ್ತೊಂದು ಪ್ರಮುಖ ಯಡವಟ್ಟೇನೆಂದರೆ ಪ್ರತಿಯೊಂದು ಕೆಲಸಕ್ಕೂ ತಾವು ಈಗಾಗಲೇ ಸಿದ್ದಪಡಿಸಿಟ್ಟುಕೊಂಡಿರುವ ರೆಸ್ಯೂಮ್ ಗಳನ್ನೇ ಕಳುಹಿಸುವುದು. ಅದರ ಬದಲಿಗೆ ತಾವು ಯಾವ ಕಂಪನಿಯಲ್ಲಿ ಕೆಲಸ ಬಯಸಿ ರೆಸ್ಯೂಮ್ ಕಳುಹಿಸುತ್ತೇವೆಯೇ ಅದಕ್ಕೂ ಮುನ್ನ ಕಂಪನಿಯ ಪೂರ್ವಾಪರ ತಿಳಿದುಕೊಂಡು ಆ ನೌಕರಿಗೆ ಅವರ ನಿರೀಕ್ಷೆಗಳೇನು ಎಂಬುದನ್ನು ಮನಗಂಡು ರೆಸ್ಯೂಮ್ ಸಿದ್ದಪಡಿಸಿ ಕಳುಹಿಸುವುದು ಸೂಕ್ತ. ಯಾವುದೇ ಅಭ್ಯರ್ಥಿ ತಮ್ಮ ರೆಸ್ಯೂಮ್ ಕಳುಹಿಸಿ ಬಳಿಕ ಸ್ವಲ್ಪ ಕಾಲ ಕಾಯುವುದು ಒಳ್ಳೆಯದು. ರೆಸ್ಯೂಮ್ ಕಳುಹಿಸಿದ ಕೆಲ ದಿನಗಳ ಬಳಿಕ ಪದೇ ಪದೇ ಅವರಿಗೆ ಇ ಮೇಲ್ ಮಾಡುತ್ತಾ ಕಿರಿಕಿರಿ ಉಂಟು ಮಾಡಬಾರದು. ಅಭ್ಯರ್ಥಿ ಕಳುಹಿಸಿದ ರೆಸ್ಯೂಮ್ ಅನ್ನು ವಿಮರ್ಶಿಸಲು ಅವರಿಗೂ ಸ್ವಲ್ಪ ಕಾಲ ಬೇಕಾಗುತ್ತದೆ. ಹಾಗಾಗಿ ತಾಳ್ಮೆ ವಹಿಸಿದರೆ ಸೂಕ್ತ.

Write A Comment