ಮನೋರಂಜನೆ

ವದಂತಿಗಳಿಗೆ ತೆರೆ ಎಳೆದ ಶಾರೂಕ್ ಖಾನ್- ಅಜಯ್ ದೇವಗನ್ !

Pinterest LinkedIn Tumblr

sharuಖ್ಯಾತ ಬಾಲಿವುಡ್ ನಟರುಗಳಾದ ಶಾರೂಕ್ ಖಾನ್ ಮತ್ತು ಅಜಯ್ ದೇವಗನ್ ಪರಸ್ಪರ ಮಾತನಾಡುವುದಿಲ್ಲ. ಒಬ್ಬರನ್ನು ಕಂಡರೆ ಮತ್ತೊಬ್ಬರಿಗಾಗುವುದಿಲ್ಲವೆಂದು ಬಾಲಿವುಡ್ ನಲ್ಲಿ ಕೇಳಿ ಬರುತ್ತಿದ್ದ ವದಂತಿಗಳಿಗೆ ತೆರೆ ಎಳೆದಿದ್ದಾರೆ.

ಬಲ್ಗೇರಿಯಾದಲ್ಲಿ ಪರಸ್ಪರ ಎದುರಾದ ಇವರುಗಳು ಒಟ್ಟಿಗೇ ಕುಳಿತು ಊಟ ಮಾಡಿದ್ದಾರಲ್ಲದೇ ತಮ್ಮ ತಮ್ಮ ಚಿತ್ರಗಳ ಕುರಿತು ಗಂಟೆಗಟ್ಟಲೇ ಚರ್ಚೆ ನಡೆಸಿದ್ದಾರೆ. ನಿರ್ಮಾಪಕ- ನಿರ್ದೇಶಕ ಕರಣ್ ಜೋಹರ್ ಕಾರಣಕ್ಕಾಗಿ ಇವರಿಬ್ಬರ ನಡುವೆ ವಿರಸ ಏರ್ಪಟ್ಟಿತ್ತೆಂದು ಕೇಳಿ ಬರುತ್ತಿದ್ದ ಮಾತುಗಳು ಇವರಿಬ್ಬರ ಭೇಟಿಯಿಂದಾಗಿ ನಿವಾರಣೆಯಾದಂತಾಗಿದೆ.

ಶಾರೂಕ್ ಮತ್ತು ಅಜಯ್ ದೇವಗನ್ ಈವರೆಗೂ ಮಾತುಕತೆ ನಡೆಸದಿದ್ದರೂ ಅಜಯ್ ದೇವಗನ್ ಪತ್ನಿ ಕಾಜೋಲ್, ಶಾರೂಕ್ ಜೊತೆ ಅತ್ಮೀಯರಾಗಿದ್ದರು. ಈ ಜೋಡಿ ಹಲವು ಹಿಟ್ ಚಿತ್ರಗಳನ್ನು ನೀಡಿದ್ದು, ಪ್ರಸ್ತುತ ರೋಹಿತ್ ಶೆಟ್ಟಿ ನಿರ್ದೇಶನದ ‘ದಿಲ್ ವಾಲೇ’ ಚಿತ್ರದ ಚಿತ್ರೀಕರಣಕ್ಕಾಗಿ ಬಲ್ಗೇರಿಯಾದಲ್ಲಿದೆ. ಪತ್ನಿಯನ್ನು ಭೇಟಿ ಮಾಡಲು ತೆರಳಿದ್ದ ಅಜಯ್ ದೇವಗನ್, ಶಾರೂಕ್ ಖಾನ್ ಜೊತೆ ಅತ್ಮೀಯ ಮಾತುಕತೆ ನಡೆಸುವ ಮೂಲಕ ತಮ್ಮಿಬ್ಬರ ನಡುವೆ ಯಾವುದೇ ಭಿನ್ನಾಭಿಪ್ರಾಯಗಳಿಲ್ಲವೆಂಬುದನ್ನು ಸಾರಿ ಹೇಳಿದ್ದಾರೆ.

Write A Comment