ಮನೋರಂಜನೆ

ನಿದ್ರೆಯಿಲ್ಲದ ರಾತ್ರಿಗಳನ್ನು ಕಳೆಯುತ್ತಿದ್ದಾರಂತೆ ಸೋನಾಕ್ಷಿ ಸಿನ್ಹಾ..!

Pinterest LinkedIn Tumblr

4740Sonakshi-Sinha-43407_6165ಬಾಲಿವುಡ್ ನಟಿ ಸೋನಾಕ್ಷಿ ಸಿನ್ಹಾ ಕಳೆದ ಕೆಲ ದಿನಗಳಿಂದ ನಿದ್ರೆಯಿಲ್ಲದ ರಾತ್ರಿಗಳನ್ನು ಕಳೆಯುತ್ತಿದ್ದಾರಂತೆ. ಇದನ್ನು ಅವರೇ ಸ್ವತಃ ಟ್ವೀಟ್ ಮಾಡುವ ಮೂಲಕ ಹೇಳಿಕೊಂಡಿದ್ದಾರೆ. ಇದಕ್ಕೆ ಕಾರಣವೇನು ಎಂಬುದರ ಸ್ಟೋರಿ ಇಲ್ಲಿದೆ ನೋಡಿ.

ಸೋನಾಕ್ಷಿ ಸಿನ್ಹಾ ಈಗ ಖ್ಯಾತ ನಿರ್ದೇಶಕ ಮುರುಗದಾಸ್ ನಿರ್ದೇಶನದ ‘ಅಖಿರಾ’ ಚಿತ್ರದಲ್ಲಿ ಪಾತ್ರ ನಿರ್ವಹಿಸುತ್ತಿದ್ದಾರೆ. ಈ ಚಿತ್ರದ ಶೂಟಿಂಗ್ ಮುಂಬೈನ ನಾರಿಮನ್ ಪಾಯಿಂಟ್ ನಲ್ಲಿ ರಾತ್ರಿ ವೇಳೆ ನಡೆಯುತ್ತಿದೆಯಂತೆ. ಇದಕ್ಕಾಗಿ ಸೋನಾಕ್ಷಿ ಸಿನ್ಹಾ ನಿದ್ದೆಗೆಡಬೇಕಾಗಿ ಬಂದಿದೆ.

ಎಲ್ಲರೂ ಮಲಗಿದ್ದ ವೇಳೆ ತಾನು ಎಚ್ಚರಾಗಿದ್ದು, ಇತರೆಯವರು ಎಚ್ಚರಾಗಿದ್ದ ವೇಳೆ ತಾನು ಮಲಗುವಂತಾಗಿದೆ ಎಂದು ಹಳಹಳಿಸಿರುವ ಸೋನಾಕ್ಷಿ ಸಿನ್ಹಾ, ಆದರೆ ಚಿತ್ರ ಚೆನ್ನಾಗಿ ಮೂಡಿ ಬರುವ ಸಲುವಾಗಿ ತಾನು ಯಾವುದೇ ತ್ಯಾಗಕ್ಕೂ ಸಿದ್ದ ಎಂಬ ಮಾತುಗಳನ್ನಾಡಿದ್ದಾರಂತೆ.

Write A Comment