ರಾಷ್ಟ್ರೀಯ

ಮಿತಿ ಮೀರಿ ಕುಡಿದು ಬೀಳ್ತೀರಾ..? ಹಾಗಿದ್ದರೆ ಇಲ್ಲಿ ಓದಿ !

Pinterest LinkedIn Tumblr

5590AlcoDroidಬಾರಿನಲ್ಲಿ ಕುಳಿತು ಕುಡಿಯತೊಡಗಿದರೆ ಮತ್ತೆ ಮನೆಗೆ ತೆರಳಲೂ ಸಾಧ್ಯವಿಲ್ಲದ ಪರಿಸ್ಥಿತಿ ಉಂಟಾಗುತ್ತಿದೆಯಾ. ಹಾಗಿದ್ದರೆ ಈ ಮೊಬೈಲ್ ಅಪ್ಲಿಕೇಷನ್ ಡೌನ್ ಲೋಡ್ ಮಾಡಿಕೊಳ್ಳಿ. ಅರೆ, ಇದೇನು ಕುಡಿತಕ್ಕೂ ಅಪ್ಲಿಕೇಷನ್ ಏನು ಸಂಬಂಧ ಎಂದಿರಾ..? ಹಾಗಾದರೆ ಈ ಸ್ಟೋರಿ ಓದಿ.

ಹೌದು. ನೀವು ಮಿತಿ ಮೀರಿ ಕುಡಿಯದಂತೆ ಎಚ್ಚರಿಸಲು ‘ದ ಅಲ್ಕೋಹಾಲ್ ಟ್ರ್ಯಾಕರ್’ ಎಂಬ ಅಪ್ಲಿಕೇಷನ್ ಒಂದು ಸಿದ್ದವಾಗಿದ್ದು ಇದನ್ನು ಡೌನ್‌ಲೋಡ್  ಮಾಡಿಕೊಂಡಲ್ಲಿ ನೀವು ತೆಗೆದುಕೊಳ್ಳುವ ಬಿಯರ್ ಅಥವಾ ವೈನ್ ಪ್ರಮಾಣ, ದಿನ ಅಥವಾ ವಾರದಲ್ಲಿ ಮಿತಿಗಿಂತ ಹೆಚ್ಚಾದರೆ ಎಚ್ಚರಿಕೆ ನೀಡುವ ಮೂಲಕ ಮೀತಿ ಮೀರದಂತೆ ಸಹಕಾರಿಯಾಗುತ್ತದೆ.

ವಿಶೇಷವೆಂದರೆ ಬೇರೆ ಬೇರೆ ಕಂಪನಿಗಳ ಮದ್ಯದಲ್ಲಿ ಆಲ್ಕೋಹಾಲ್ ಪ್ರಮಾಣವೂ ವಿಭಿನ್ನವಾಗಿರುತ್ತಿದ್ದು ಪ್ರತಿ ಸಾರಿ ಕುಡಿದಾಗಲೂ ಆಲ್ಕೋಹಾಲ್ ಪ್ರಮಾಣವನ್ನು ನಿರ್ದಿಷ್ಟ ‘ಯೂನಿಟ್’‌ಗಳಾಗಿ ಈ ಆ್ಯಪ್ ಪರಿವರ್ತಿಸಿ, ವರದಿ ನೀಡುತ್ತದೆ. ಅಷ್ಟೇ ಅಲ್ಲ, ಈ ಹೊಸ ಅಪ್ಲಿಕೇಷನ್ನಲ್ಲಿ ಮಾನಸಿಕ ಥೆರಪಿಯೊಂದಿಗೆ, ಅವರನ್ನು ಅಪಾಯಕಾರಿ ಕುಡಿತದಿಂದ ದೂರವಿರಿಸಲು ಸಹಕರಿಸುವ ಲಿಂಕ್‌ಗಳೂ ಲಭ್ಯವಿದೆ. ಅಲ್ಲದೇ ಅವರು ಕುಡಿಯುತ್ತಿರುವ ಪ್ರಮಾಣ, ಆರೋಗ್ಯದ ಮೇಲೆ ಎಷ್ಟು ಪರಿಣಾಮ ಬೀರಬಲ್ಲದು ಎಂಬುದನ್ನೂ ಸಮರ್ಪಕವಾಗಿ ವಿವರಿಸುತ್ತದೆ ಎಂಬುದು ಕಂಪನಿಯ ಅಭಿಪ್ರಾಯ.

ಏನೇ ಇರಲಿ, ಕುಡಿದು ಮುದಗೊಳ್ಳಲೆಂದೇ  ಬಾರಿಗೆ ತೆರಳುವ ನಮ್ಮ ಮಂದಿ ಮೊಬೈಲ್ ಎಲ್ಲಿ ಎಂದು ಹುಡುಕುವ ಸಂದರ್ಭದಲ್ಲಿ ಈ ಅಪ್ಲಿಕೇಷನ್ ಕುರಿತು ನೆನಪಿರುತ್ತಾ ಎಂಬುದೇ ಈಗಿರುವ ಪ್ರಶ್ನೆ.!

Write A Comment