ಮನೋರಂಜನೆ

‘ಪ್ರೇಮಂ’ ಚಿತ್ರದ ಪೈರೆಸಿ ಮಾಡಿದ್ದು ವಿದ್ಯಾರ್ಥಿಗಳು !

Pinterest LinkedIn Tumblr

8222sai-pallavi3.jpg.image.784.410ಕೇರಳ: ಮಲಯಾಳಂ ನ ಸೂಪರ್ ಹಿಟ್ ಚಿತ್ರ ‘ಪ್ರೇಮಂ’ ಅನ್ನು ಪೈರಸಿ ಮಾಡಿದ್ದು, ವಿದ್ಯಾರ್ಥಿಗಳೆಂಬ ಅಂಶ ಬೆಳಕಿಗೆ ಬಂದಿದೆ. ಈಗ ಐವರು ವಿದ್ಯಾರ್ಥಿಗಳನ್ನು ಬಂಧಿಸಲಾಗಿದ್ದು, ಇವರಲ್ಲಿ ಇಬ್ಬರು 18 ವರ್ಷದೊಳಗಿನವರು ಎಂದು ಹೇಳಲಾಗಿದೆ.

ಈ ವಿದ್ಯಾರ್ಥಿಗಳಿಗೆ ಪೈರೆಟೆಡ್ ಮಾಫಿಯಾ ಜೊತೆ ಸಂಬಂಧವಿರಬಹುದೆಂಬ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದು, ಹೆಚ್ಚಿನ ವಿಚಾರಣೆಗಾಗಿ ತಿರುವನಂತಪುರಕ್ಕೆ ಕರೆದು ತಂದಿದ್ದಾರೆ. ಅಲ್ಲದೇ ಒಬ್ಬ ವಿದ್ಯಾರ್ಥಿಯ ಮನೆಯಿಂದ ಕೃತ್ಯಕ್ಕೆ ಬಳಸಿದ್ದ ಲ್ಯಾಪ್ ಟಾಪ್ ಹಾಗೂ ಪೆನ್ ಡ್ರೈವ್ ಸಹ ವಶಕ್ಕೆ ಪಡೆಯಲಾಗಿದೆ.

ಜೂನ್ 22 ರಂದು ಈ ವಿದ್ಯಾರ್ಥಿಗಳು ‘ಪ್ರೇಮಂ’ ಚಿತ್ರವನ್ನು ಟೊರೆಂಟ್ ವೆಬ್ ಸೈಟಿಗೆ ಅಪ್ ಲೋಡ್ ಮಾಡಿದ್ದು, ಇದಕ್ಕಾಗಿ ನಕಲಿ ಐಪಿ ಅಡ್ರೆಸ್ ಬಳಸಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ. ‘ಪ್ರೇಮಂ’ ಚಿತ್ರ ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನ ಕಾಣುತ್ತಿದ್ದ ಮಧ್ಯೆ ಇದರ ಪೈರೆಟೆಡ್ ಕಾಪಿಗಳು ಮಾರುಕಟ್ಟೆಯಲ್ಲಿ ಹರಿದಾಡಲಾರಂಭಿಸಿದಾಗ ಚಿತ್ರದ ನಿರ್ಮಾಪಕರು ಈ ಕುರಿತು ದೂರು ನೀಡಿದ್ದರು. ಅಲ್ಲದೇ ವಿದೇಶದಲ್ಲಿದ್ದ ಟೆಕ್ಕಿಯೊಬ್ಬ ಆನ್ ಲೈನ್ ನಲ್ಲಿ ಅಕ್ರಮವಾಗಿ ‘ಪ್ರೇಮಂ’ ಚಿತ್ರವನ್ನು ಡೌನ್ ಲೋಡ್ ಮಾಡಿಕೊಂಡಿದ್ದ ಕಾರಣಕ್ಕಾಗಿ ಕಂಬಿ ಎಣಿಸಬೇಕಾಗಿ ಬಂದಿತ್ತು.

Write A Comment