ರಾಷ್ಟ್ರೀಯ

ವೇಶ್ಯಾವಾಟಿಕೆ ದಂಧೆಗೆ ಈ ರಾಜಕಾರಣಿ ಮನೆಯೇ ಆಶ್ರಯ ತಾಣ

Pinterest LinkedIn Tumblr

veಕಾನ್ಪುರ್: ಬೃಹತ್ ವೇಶ್ಯಾವಾಟಿಕೆ ಜಾಲವೊಂದನ್ನು ಬೇಧಿಸಿರುವ ಪೊಲೀಸರು ಈ ಸಂಬಂಧ 9 ಮಂದಿ ಯುವತಿಯರೂ ಸೇರಿದಂತೆ ಒಟ್ಟು 15 ಮಂದಿಯನ್ನು ಬಂಧಿಸಿದ್ದಾರೆ. ಈ ವೇಶ್ಯಾವಾಟಿಕೆ ದಂಧೆ ನಡೆಯುತ್ತಿದ್ದುದು ರಾಜಕಾರಣಿಯೊಬ್ಬನ ನಿವಾಸದಲ್ಲಿ ಎಂಬ ಅಂಶವೂ ಈ ವೇಳೆ ಬಯಲಾಗಿದೆ.

ಉತ್ತರ ಪ್ರದೇಶದ ಕಾನ್ಪುರದ ಕಲ್ಯಾಣಪುರದಲ್ಲಿರುವ ದೀಪಕ್ ಗುಪ್ತಾ ಎಂಬ ಸಮಾಜವಾದಿ ಪಕ್ಷದ ಮುಖಂಡನ ನಿವಾಸದ ಮೇಲೆ ಪೊಲೀಸರು ದಾಳಿ ನಡೆಸಿದಾಗ ವೇಶ್ಯಾವಾಟಿಕೆ ದಂಧೆ ಹಲವು ವರ್ಷಗಳಿಂದ ನಡೆಯುತ್ತಿರುವುದು ಬೆಳಕಿಗೆ ಬಂದಿದೆ. ಪಶ್ಚಿಮ ಬಂಗಾಳ ಹಾಗೂ ಜಾರ್ಖಂಡ್ ನಿಂದ ಯುವತಿಯರನ್ನು ಕರೆದುಕೊಂಡು ಬಂದು ವೇಶ್ಯಾವಾಟಿಕೆ ದಂಧೆಗೆ ಇಳಿಸಲಾಗುತ್ತಿತ್ತೆಂದು ಹೇಳಲಾಗಿದೆ.

ದೀಪಕ್ ಗುಪ್ತಾ ರಾಜಕೀಯದಲ್ಲಿ ಪ್ರಭಾವಿ ವ್ಯಕ್ತಿಯಾಗಿದ್ದ ಕಾರಣ ಆತನ ವಿರುದ್ದ ದೂರು ನೀಡಲು ಸ್ಥಳೀಯರು ಹಿಂದೇಟು ಹಾಕುತ್ತಿದ್ದರೆನ್ನಲಾಗಿದೆ. ಇತ್ತೀಚೆಗೆ ಪೊಲೀಸರಿಗೆ ಬಂದ ಅನಾಮಧೇಯ ಕರೆಯೊಂದು ವೇಶ್ಯಾವಾಟಿಕೆ ದಂಧೆಯ ಸುಳಿವು ನೀಡಿದ್ದು, 15 ಮಂದಿಯನ್ನು ಬಂಧಿಸಿರುವ ಪೊಲೀಸರು ಪ್ರಕರಣದ ಪ್ರಮುಖ ಆರೋಪಿ ದೀಪಕ್ ಗುಪ್ತಾನ ಪತ್ತೆಗೆ ಬಲೆ ಬೀಸಿದ್ದಾರೆ.

Write A Comment