ಮನೋರಂಜನೆ

ಅಮೀರ್ ಖಾನ್ ಜತೆ ನಟಿಸ್ಬೇಕಾ ..? ಇಲ್ಲಿದೆ ಅವಕಾಶ !

Pinterest LinkedIn Tumblr

2077Aamir-Khan3ಬಾಲಿವುಡ್ ನಲ್ಲಿ ತಮ್ಮದೇ ಆದ  ವಿಶಿಷ್ಟ ಅಭಿನಯದ ಮೂಲಕ ಅಭಿಮಾನಿಗಳ ಮನಗೆದ್ದಿರುವ ಅಮೀರ್ ಖಾನ್ ಜತೆ ನಟಿಸುವ ಅವಕಾಶ ಸಿಕ್ಕರೆ..? ಅದು ನಮಗೆಲ್ಲಿ ಸಿಗುತ್ತೆ ಅಂತೀರಾ..? ಖಂಡಿತಾ ಸಿಗುತ್ತೆ.ಹೇಗೆ ಅಂತೀರಾ ..? ಈ ಸ್ಟೋರಿ ಓದಿ.

ಹೌದು. ನಟ ಅಮಿರ್ ಖಾನ್ ಚಿತ್ರ ನಿರ್ಮಾಣ ಸಂಸ್ಥೆಯು ತಮ್ಮ ಮುಂಬರುವ ಹೊಸ ಚಿತ್ರಕ್ಕಾಗಿ ಹೊಸಮುಖಕ್ಕಾಗಿ ಹುಡುಕಾಟ ನಡೆಸಿದ್ದು ಈ ಕುರಿತಾಗಿ ಅಮಿರ್ ಖಾನ್ ಚಿತ್ರ ನಿರ್ಮಾಣ ಸಂಸ್ಥೆಯ ಸದಸ್ಯರಾಗಿರುವ ಅದ್ವೈತ್ ಚಂದನ್ ಅವರು ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ನೀಡಿದ್ದಾರೆ.

ಅಮೀರ್ ಖಾನ್ ಅವರ ಸಂಸ್ಥೆಯಿಂದ ಹೊಸ ಚಿತ್ರವೊಂದು ನಿರ್ಮಾಣವಾಗುತ್ತಿದ್ದು, ಈ ಚಿತ್ರಕ್ಕೆ ಹಾಡು ಹೇಳುವ ಹಾಗೂ ನಟನೆ ಮಾಡುವ ಯುವ ಹಾಗೂ ಹೊಸ  ನಟಿಯೊಬ್ಬರು ಬೇಕಿದ್ದು, ವಯಸ್ಸಿನ ಮಿತಿ 12-17ರ ಒಳಗಿರಬೇಕೆಂದು ತಿಳಿಸಿದ್ದಾರೆ. ಅಲ್ಲದೇ ಹಾಡು ಹೇಳುವ ಹಾಗೂ ನಟನೆ ಮಾಡುವ ಕಲೆಯಿರುವ ಆಸಕ್ತರು ಹಿಂದಿ ಹಾಡೊಂದನ್ನು ಹಾಡಿ ಅದರ ವೀಡೀಯೋವನ್ನು ರೆಕಾರ್ಡ್ ಮಾಡಿ casting@akpfilms.com ವಿಳಾಸಕ್ಕೆ ಇಮೇಲ್ ಮಾಡಿದಲ್ಲಿ ಒಂದೊಮ್ಮೆ ಆಯ್ಕೆಯಾದರೆ ಅಮೀರ್ ಖಾನ್ ಜತೆ ನಟಿಸುವ ಭಾಗ್ಯ ನಿಮ್ಮದಾಗಲಿದೆ.

Write A Comment