ಮನೋರಂಜನೆ

ಈ ಕಪ್ಪು ಬಿಳುಪು ಚಿತ್ರಕ್ಕೆ 40 ಕೋಟಿ ರೂ. ಅಂದ್ರೆ ನೀವು ನಂಬಲೇಬೇಕು..!

Pinterest LinkedIn Tumblr

64612lead3ನಂಬುತ್ತಿರೋ, ಬಿಡುತ್ತಿರೋ ನಿಮಗೇ ಬಿಟ್ಟದ್ದು. ಈ ಕಪ್ಪು ಬಿಳುಪು ಚಿತ್ರ ಬರೋಬ್ಬರಿ 40 ಕೋಟಿ ರೂಪಾಯಿಗಳಿಗೆ ಹರಾಜಾಗಿದೆ. ಇದು ಇದುವರೆಗೂ ನಡೆದಿರುವ ಹರಾಜಿನಲ್ಲಿಯೇ ದಾಖಲೆ ಮೊತ್ತ ಎಂದು ಪರಿಗಣಿಸಲಾಗಿದೆ. ಅಷ್ಟಕ್ಕೂ ಈ ಕಪ್ಪು ಬಿಳುಪು ಚಿತ್ರವನ್ನು ತೆಗೆದಿದ್ದರ್ಯಾರು ಮತ್ತು ಎಲ್ಲಿ ಎಂದು ಯೋಚಿಸುತ್ತಿದ್ದೀರಾ.

ಈ ಚಿತ್ರವನ್ನು ತೆಗೆದಿದ್ದು ಪೀಟರ್ ಲಿಕ್ ಎಂಬಾತ. ಅಮೆರಿಕದ ಆರಿಜೋನಾ ಪ್ರಾಂತ್ಯದ ಕಣಿವೆಯಲ್ಲಿ ತೆಗೆದಿರುವ ಈ ಚಿತ್ರದಲ್ಲಿ ಗುಹೆಯ ಮೇಲಿರುವ ಕಿಂಡಿಯೊಂದರಿಂದ ಸೂರ್ಯ ರಶ್ಮಿ ಪ್ರವೇಶಿಸುತ್ತಿದ್ದು ಈ ಚಿತ್ರಕ್ಕೆ ಪೀಟರ್ ಲಿಕ್ ‘ಫ್ಯಾಂಟಮ್’ ಎಂದು ಹೆಸರಿಟ್ಟಿದ್ದ. ಇದನ್ನು ಹರಾಜಿಗಿಟ್ಟ ವೇಳೆ ಚಿತ್ರ ನೋಡಿ ಪ್ರಭಾವಿತನಾದವನೊಬ್ಬ ಬರೋಬ್ಬರಿ 40 ಕೋಟಿ ರೂ. ಕೊಟ್ಟು ಇದನ್ನು ಖರೀದಿಸಿದ್ದಾನೆ.

ಈ ಹಿಂದೆ 1999 ರಲ್ಲಿ ಜರ್ಮನಿಯ ಅಂಡ್ರೂಸ್ ಗಾರ್ಸ್ಕಿ ತೆಗೆದಿದ್ದ ರೀನ್ II ಚಿತ್ರ 27 ಕೋಟಿ ರೂಪಾಯಿಗಳಿಗೆ ಮಾರಾಟವಾಗಿತ್ತು. ಇದಕ್ಕೂ ಮುನ್ನ ಅಂದರೆ 1981 ರಲ್ಲಿ ಸಿಂಡಿ ಶೆರ್ಮಾನ್ ತೆಗೆದಿದ್ದ ಚಿತ್ರ 24 ಕೋಟಿ ರೂ.ಗಳಿಗೆ ಹರಾಜಾಗಿತ್ತು. ಇದೀಗ ಪೀಟರ್ ಲಿಕ್ ಚಿತ್ರಕ್ಕೆ ದೊರೆತಿರುವುದು 40 ಕೋಟಿ ರೂಪಾಯಿಗಳು.

ಇದರಿಂದಾಗಿ ಈಗ ಛಾಯಾಗ್ರಹಣದ ಕುರಿತು ಚರ್ಚೆ ಆರಂಭವಾಗಿದ್ದು ಈಗಿನ ಫೋಟೋಶಾಪ್ ಕಾಲದಲ್ಲಿ ಯಾವುದೇ ಚಿತ್ರವನ್ನು ಕ್ಷಣಾರ್ಧದಲ್ಲಿ ಯಾವ ರೀತಿ ಬೇಕಾದರೂ ಮಾರ್ಪಾಡಿಸುವ ಅವಕಾಶಗಳಿರುವ ಮಧ್ಯೆ ಕಪ್ಪು ಬಿಳುಪು ಚಿತ್ರಕ್ಕೆ 40 ಕೋಟಿ ರೂಪಾಯಿ ನೀಡುತ್ತಾರೆಂದರೆ ಕೊಂಡವರ ಎದೆಗಾರಿಕೆಗೆ ಮೆಚ್ಚಲೇಬೇಕು ಅಲ್ಲವೇ.

Write A Comment