ರಾಷ್ಟ್ರೀಯ

ಈ ಮೂರು ಕಂಪನಿಗಳಲ್ಲಿರುವ ಚಿನ್ನದ ವಿವರ ಕೇಳಿದ್ರೆ ಬೆಚ್ಚಿ ಬೀಳ್ತಿರಿ !

Pinterest LinkedIn Tumblr

gold

ಭಾರತೀಯರು ಹಳದಿ ಲೋಹದ ವ್ಯಾಮೋಹಿಗಳು ಎಂಬುದು ಗೊತ್ತಿರುವ ವಿಚಾರವೇ. ಕಷ್ಟ ಕಾಲದಲ್ಲಿ ಬಂಗಾರದ ಮೇಲೆ ಸಾಲ ನೀಡುವ ಕೇರಳದ ಈ ಮೂರು ಕಂಪನಿಗಳಲ್ಲಿ ಅಡವಿಟ್ಟಿರುವ ಚಿನ್ನ ಸಿಂಗಾಪುರ್, ಆಸ್ಟ್ರೇಲಿಯಾ ಮತ್ತು ಸ್ವೀಡನ್ ರಾಷ್ಟ್ರಗಳ ಚಿನ್ನಕ್ಕೆ ಸಮವಾಗಿದೆ ಎಂದರೇ ನಂಬಲೇಬೇಕು.

ಭಾರತದಾದ್ಯಂತ ಶಾಖೆ ಹೊಂದಿರುವ ಕೇರಳ ಮೂಲದ ಮುತ್ತೂಟ್ ಫೈನಾನ್ಸ್, ಮಣಪ್ಪುರಂ ಫೈನಾನ್ಸ್ ಹಾಗೂ ಮುತ್ತೂಟ್ ಫಿನ್ ಕಾರ್ಪ್ ಕಂಪನಿಗಳಲ್ಲಿ ಒಟ್ಟು 195 ಟನ್ ಕ್ಕಿಂತ ಹೆಚ್ಚು ಬಂಗಾರ ಅಡಮಾನವಾಗಿ ಇಡಲಾಗಿದ್ದು, ಇದು ಶ್ರೀಮಂತ ರಾಷ್ಟ್ರಗಳೆಂದು ಕರೆಸಿಕೊಳ್ಳುವ ಸಿಂಗಾಪುರ್, ಆಸ್ಟ್ರೇಲಿಯಾ ಹಾಗೂ ಸ್ವೀಡನ್ ದೇಶಗಳು ಕಾಯ್ದಿಟ್ಟಿರುವ ಬಂಗಾರಕ್ಕಿಂತ ಜಾಸ್ತಿ.

ವಿಶ್ವದ ಒಟ್ಟು ಚಿನ್ನದ ಮಾರುಕಟ್ಟೆಯಲ್ಲಿ ಭಾರತದಿಂದ ಶೇ.30 ರಷ್ಟು ಬೇಡಿಕೆಯಿದ್ದು, ಅದರಲ್ಲೂ ವಿವಾಹ ಸಮಾರಂಭಗಳಲ್ಲಿ ಬಂಗಾರದ ಆಭರಣ ಹೆಚ್ಚು ಮಾಡಿಸಿದಷ್ಟು ಆದ್ದೂರಿ ಎಂಬ ಕಲ್ಪನೆಯಿದೆ. ಈ ಹಿನ್ನಲೆಯಲ್ಲಿ ಭಾರತೀಯರು ಬಂಗಾರಕ್ಕೆ ಹೆಚ್ಚು ಪ್ರಾಶಸ್ತ್ಯ ನೀಡುತ್ತಾರಲ್ಲದೇ ಕಷ್ಟ ಕಾಲದಲ್ಲಿ ಅವರುಗಳ ನೆರವಿಗೆ ಬರುವುದೇ ಈ ಬಂಗಾರ.

ಈ ರೀತಿ ಬಂಗಾರದ ಆಭರಣಗಳ ಮೇಲೆ ಸಾಲ ನೀಡುವ ಈ ಮೂರು ಕಂಪನಿಗಳಲ್ಲಿ ಅಡಮಾನವಾಗಿ ಇಟ್ಟಿರುವ ಚಿನ್ನದ ಪೈಕಿ ಮುತ್ತೂಟ್ ಫೈನಾನ್ಸ್ ನಲ್ಲಿ 116 ಟನ್ ಗಳಿದ್ದರೆ, ಮಣಪ್ಪುರಂ ಫೈನಾನ್ಸ್ ನಲ್ಲಿ 40 ಟನ್ ಹಾಗೂ ಮುತ್ತೂಟ್ ಫಿನ್ ಕಾರ್ಪ್ ನಲ್ಲಿ 39 ಟನ್ ಚಿನ್ನವಿದೆ. ಈ ಮೂರು ಕಂಪನಿಗಳಲ್ಲಿರುವ ಚಿನ್ನವನ್ನು ಒಟ್ಟುಗೂಡಿಸಿದರೆ 195 ಟನ್ ಆಗುತ್ತದೆ. ಆದರೆ ಸಿಂಗಾಪುರ್ ಬಂಗಾರ ಕಾಯ್ದಿರಿಸಿರುವುದು 127 ಟನ್, ಸ್ವೀಡನ್ 126 ಟನ್, ದಕ್ಷಿಣ ಆಫ್ರಿಕಾ 125 ಟನ್ ಹಾಗೂ ಮೆಕ್ಸಿಕೋ 123 ಟನ್ ಆಗಿದೆ.

Write A Comment