ಮನೋರಂಜನೆ

ತಾಯಿ ಪಾತ್ರ ಮಾಡಲು ನಾ ಒಲ್ಲೆ ಅಂತಾಳೇ ಈ ನಟಿ !

Pinterest LinkedIn Tumblr

3081isha-koppikar-gorgeous-look-wallpaperಬಾಲಿವುಡ್ಡಿನ ಒಂದು ಕಾಲದ ಬೆಡಗಿ ಹಾಗೂ ನಿಜ ಜೀವನದಲ್ಲಿ ಒಂದು ಮಗುವಿನ ತಾಯಿಯಾಗಿರುವ ಇಷಾ ಕೊಪ್ಪಿಕರ್, ತಾಯಿ ಪಾತ್ರದಲ್ಲಿ ನಟಿಸಲು ಒಲ್ಲೆ ಅಂದಿದ್ದಾರೆ. ತಾಯಿ ಪಾತ್ರ ಮಾಡುವಷ್ಟು ವಯಸ್ಸು ನನಗಿನ್ನೂ ಆಗಿಲ್ಲ ಎಂದಿರುವ ಕೊಪ್ಪಿಕರ್ ನಾನಿನ್ನೂ ಹಾಟ್ ಹಾಟ್ ಬೆಡಗಿ ಎಂದು ಸ್ವಯಂ ಹೊಗಳಿಕೊಂಡಿದ್ದಾರೆ.

ಮಗುವಿನ ತಾಯಿಯಾಗಿರುವ ಇಷಾ ಕೊಪ್ಪಿಕರ್ ಅವರಿಗೆ ನಿರ್ದೇಶಕರೊಬ್ಬರು ತಾಯಿ ಪಾತ್ರ ನೀಡುವ ಆಫರ್ ನೀಡಿದಾಗ ಸಿಟ್ಟಿಗೆದ್ದಿರುವ ಅವರು ನಾನು ಒಂದು ಮಗುವಿನ ತಾಯಿಯಾಗಿರಬಹುದು ಆದರೆ ನನ್ನ ಸೌಂದರ್ಯವನ್ನು ಇನ್ನೂ ಹದಿಹರೆಯದವರಂತೆ ಕಾಪಾಡಿಕೊಂಡಿದ್ದೇನೆ. ಹಾಗಾಗಿ ತಾಯಿ ಪಾತ್ರದಲ್ಲಿ ನಟಿಸಲು ಬಿಲ್ ಕುಲ್ ಸಾಧ್ಯವಿಲ್ಲವೆಂದು ತಿರಸ್ಕರಿಸಿದ್ದಾರಂತೆ.

ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿರುವ ಇಷಾ ಕೊಪ್ಪಿಕರ್, ಚಿಕ್ಕ ಮಗುವಿನ ತಾಯಿಯಾಗಿರುವ ನಾನು 19 ವರ್ಷದ ಹುಡುಗಿಯ ತಾಯಿಯಾಗಿ ನಟನೆ ಮಾಡಲು ಸಾಧ್ಯವೇ ಎಂದು ಪ್ರಶ್ನಿಸಿದರಲ್ಲದೇ ಮುಂದೆ ಇಂತಹ ಪಾತ್ರಗಳಿಗೆ ಮತ್ತೆ ಕರೆ ಬಂದರೆ ಯಾವುದೇ ಕಾರಣಕ್ಕೂ ಒಪ್ಪಿಕೊಳ್ಳುವುದಿಲ್ಲವೆಂದಿದ್ದಾರೆ.

Write A Comment