ಮನೋರಂಜನೆ

2015 ರ ಟಾಪ್ 5 ಬಾಲಿವುಡ್ ನಟಿಯರ ಪಟ್ಟಿ ಇಲ್ಲಿದೆ ನೋಡಿ..!

Pinterest LinkedIn Tumblr

anu2015 ರ ಅರ್ಧ ಭಾಗ ಈಗಾಗಲೇ ಕಳೆದಿದೆ. ಟಾಪ್ 5 ಬಾಲಿವುಡ್ ನಟಿಯರ ಪಟ್ಟಿ ಈಗ ಹೊರ ಬಿದ್ದಿದ್ದು, ಈ ನಟಿಯರು ನಟಿಸಿದ ಚಿತ್ರಗಳ ಗಳಿಕೆ ಆಧಾರದ ಮೇಲೆ ಪಟ್ಟಿಯನ್ನು ಸಿದ್ದಪಡಿಸಲಾಗಿದೆ.

ಈ ಪ್ರಕಾರ ಟಾಪ್ 1 ಸ್ಥಾನವನ್ನು ಕಂಗನಾ ರಣಾವತ್ ಅಲಂಕರಿಸಿದ್ದು, ಅವರು ನಟಿಸಿದ್ದ ‘ತನು ವೆಡ್ಸ್ ಮನು ರಿಟರ್ನ್ಸ್’ ಚಿತ್ರ ಬರೋಬ್ಬರಿ 149.39 ರೂ.ಗಳನ್ನು ಇದುವರೆಗೆ ಗಳಿಸಿದೆಯಲ್ಲದೇ ಇನ್ನೂ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದೆ. ಎರಡನೇ ಸ್ಥಾನದಲ್ಲಿ ಭಾರತ ಟೆಸ್ಟ್ ತಂಡದ ನಾಯಕ ವಿರಾಟ್ ಕೊಹ್ಲಿಯ ಮನದನ್ನೆ ಅನುಷ್ಕಾ ಶರ್ಮಾ ಅವರಿದ್ದು, ಅವರು ಅಭಿನಯಿಸಿದ ‘ಎನ್.ಹೆಚ್. 10’, ‘ಬಾಂಬೆ ವೆಲ್ವೆಟ್’ ಹಾಗೂ ‘ದಿಲ್ ದಡ್ಕನೇ ದೋ’ ಚಿತ್ರಗಳು ಒಟ್ಟು 132.44 ಕೋಟಿ ರೂ. ಗಳನ್ನು ಗಳಿಸಿದೆ. ‘ಬಾಂಬೆ ವೆಲ್ವೆಟ್’ ಬಾಕ್ಸಾಫೀಸಿನಲ್ಲಿ ವಿಫಲವಾಗಿದ್ದರೂ ಆ ಚಿತ್ರದ ಗಳಿಕೆಯನ್ನೂ ಇದಕ್ಕೆ ಸೇರಿಸಲಾಗಿದೆ.

ಮೂರನೇ ಸ್ಥಾನದಲ್ಲಿ ‘ಎಬಿಸಿಡಿ 2’ ರಲ್ಲಿ ನಟಿಸಿರುವ ಶ್ರದ್ದಾ ಕಪೂರ್ ಅವರಿದ್ದು, ಈ ಚಿತ್ರದ ಇದುವರೆಗಿನ ಗಳಿಕೆ 91.32 ಕೋಟಿ ರೂ.ಗಳಾಗಿದೆ. ನಾಲ್ಕನೇ ಸ್ಥಾನದಲ್ಲಿ ಶೃತಿ ಹಾಸನ್ ಅವರಿದ್ದು, ಅಕ್ಷಯ್ ಕುಮಾರ್ ಜೊತೆ ಅವರು ನಟಿಸಿದ ‘ಗಬ್ಬರ್ ಈಸ್ ಬ್ಯಾಕ್’ ಚಿತ್ರ 87.52 ಕೋಟಿ ರೂ.ಗಳನ್ನು ಗಳಿಕೆ ಮಾಡಿದೆ. ಐದನೇ ಸ್ಥಾನದಲ್ಲಿ ದೀಪಿಕಾ ಪಡುಕೋಣೆಯವರಿದ್ದು ಅವರ ಅಭಿನಯದ ‘ಪೀಕು’ ಚಿತ್ರ 79.92 ಕೋಟಿ ರೂ.ಗಳನ್ನು ಗಳಿಕೆ ಮಾಡಿದೆ. ಗಮನಿಸಬೇಕಾದ ಅಂಶವೆಂದರೇ ‘ತನು ವೆಡ್ಸ್ ಮನು 2’ ಹಾಗೂ ‘ಪೀಕು’ ನಾಯಕಿ ಪ್ರಧಾನ ಚಿತ್ರಗಳೆಂಬ ಸಂಗತಿ. ಈ ಎರಡು ಚಿತ್ರಗಳು ಭರ್ಜರಿ ಯಶಸ್ಸು ಕಾಣುವ ಮೂಲಕ ನಾಯಕಿ ಪ್ರಧಾನ ಚಿತ್ರಗಳು ಬಾಕ್ಸಾಫೀಸಿನಲ್ಲಿ ವಿಫಲವಾಗುತ್ತವೆಂಬ ನಂಬಿಕೆಯನ್ನು ಹುಸಿ ಮಾಡಿವೆ.

Write A Comment