ಮನೋರಂಜನೆ

ವೈವಾಹಿಕ ಜೀವನಕ್ಕೆ ಕಾಲಿಡಲಿರುವ ಕ್ರಿಕೆಟಿಗ ಸಿಎಂ ಗೌತಮ್

Pinterest LinkedIn Tumblr

gouಬೆಂಗಳೂರು: ಕರ್ನಾಟಕ ಮತ್ತು ಡೆಲ್ಲಿ ಡೇರ್ ಡೆವಿಲ್ಸ್ ತಂಡದ ಪ್ರಮುಖ ಆಟಗಾರ, ವಿಕೆಟ್ ಕೀಪರ್ – ಬ್ಯಾಟ್ಸಮನ್ ಸಿಎಂ ಗೌತಮ್ ಸದ್ಯವೇ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ.

ಕಳೆದ 7 ವರ್ಷಗಳಿಂದ ಕರ್ನಾಟಕ ತಂಡದ ಅವಿಭಾಜ್ಯ ಅಂಗವಾಗಿರುವ ಗೌತಮ್, ದೇಶಿಯ ಪಂದ್ಯಗಳಲ್ಲಿ ಕರ್ನಾಟಕ ಸತತವಾಗಿ ಚಾಂಪಿಯನ್ ಆಗುವಲ್ಲಿ ಮಹತ್ತರ ಪಾತ್ರ ವಹಿಸಿದ್ದಾರೆ.

ಗೂಗಲ್​ನಲ್ಲಿ ಮಾನವ ಸಂಪನ್ಮೂಲ ಅಧಿಕಾರಿಯಾಗಿ ಕೆಲಸ ಮಾಡುತ್ತಿರುವ ಪವಿತ್ರಾ ಅವರೊಂದಿಗೆ ಗೌತಮ್ ಜುಲೈ 6ರಂದು​ ಹೊಸ ಜೀವನವನ್ನು ಪ್ರಾರಂಭಿಸಲಿದ್ದಾರೆ. ಪೂಜಾ ಎಂಬಿಎ ಪದವೀಧರೆಯಾಗಿದ್ದಾರೆ.

ಮುನ್ನಾದಿನ ಸಂಜೆ ಎಚ್​ಎಎಲ್ ಏರ್​ಪೋರ್ಟ್ ರಸ್ತೆಯಲ್ಲಿರುವ ಹೋಟೆಲ್ ರಾಯಲ್ ಆರ್ಕಿಡ್​ನಲ್ಲಿ ಆರತಕ್ಷತೆ ಕಾರ್ಯಕ್ರಮ ನಡೆಯಲಿದೆ.

ಕಳೆದ ವರ್ಷ ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಪ್ರತಿನಿಧಿಸಿದ್ದ ಅವರು ಪ್ರಸಕ್ತ ವರ್ಷ ಡೆಲ್ಲಿ ಡೇರ್​ಡೆವಿಲ್ಸ್ ತಂಡದಲ್ಲಿದ್ದರು.

Write A Comment