ಮನೋರಂಜನೆ

ಸ್ಯಾಂಡಲ್‌ವುಡ್ ನಲ್ಲಿ ‘ಡೀಲ್’ ಮಾಡಲು ಬರುತ್ತಿದೆ ಯುವಕರ ತಂಡ

Pinterest LinkedIn Tumblr

deal-1ಸ್ಯಾಂಡಲ್‌ವುಡ್‌ಗೆ ಯುವ ಪಡೆಗಳ ದಂಡು ನಿರಂತರವಾಗಿ ಬರ್ತಾಿನೆ ಇದೆ. ಆ ನಿಟ್ಟಿನಲ್ಲಿ ಹೊಸದೊಂದು ಆಲೋಚನೆಯೊಂದಿಗೆ ಯುವಕರ ತಂಡವೊಂದು ಗಾಂಧಿನಗರ ಪ್ರವೇಶ ಮಾಡಿದೆ. ಈ ಮೊದಲು ಕೆಲ ಕಿರುಚಿತ್ರಗಳನ್ನು ನಿರ್ದೇಶಿಸಿರುವ ಹಾಗೂ ಸಹಾಯಕ ನಿರ್ದೇಶಕನಾಗಿ ಚಿತ್ರವೊಂದಕ್ಕೆ ಕೆಲಸ ಮಾಡಿರುವ

ವಿಜಯ್ ತಮ್ಮಣ್ಣ ಮೊದಲ ಬಾರಿಗೆ ನಿರ್ದೇಶನ ಮಾಡಿರುವ ಚಿತ್ರ ಡೀಲ್ ಸಸ್ಪೆನ್ಸ್ ಕ್ರೈಂ ಹಾಗೂ ಫ್ಯಾಮಿಲಿ ಎಂಟರ್‌ಟೈನರ್ ಆದ ಚಿತ್ರದ ಧ್ವನಿ ಸುರುಳಿ ಬಿಡುಗಡೆ ಸಮಾರಂಭ ಕಳೆದ ವಾರ ನಡೆಯಿತು.  ಕನ್ನಡ ಚಲನಚಿತ್ರರಂಗದ ಸದಭಿರುಚಿಯ  ನಿರ್ಮಾಪಕ ಬಿ.ಕೆ. ಶ್ರೀನಿವಾಸ್ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿ ಈ ಚಿತ್ರದ ಧ್ವನಿಸುರುಳಿಯನ್ನು ಬಿಡುಗಡೆ ಮಾಡಿದರು.  ದೀಪಕ್‌ರಾಜ್ ನಾಯಕನಾಗಿರುವ ಈ ಚಿತ್ರದಲ್ಲಿ ಜೀವಿಕಾ ನಾಯಕಿ ಪಾತ್ರ  ನಿರ್ವಹಿಸಿದ್ದಾರೆ. ನಂದೀಶ ರೆಡ್ಡಿ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.  ನಿರ್ದೇಶಕ ವಿಜಯ್ ಅವರ ಬಾಲ್ಯ ಸ್ನೇಹಿತರೂ ಆಗಿರುವ ನಂದೀಶ್ ರೆಡ್ಡಿ ಮೊಟ್ಟ ಮೊದಲ ಬಾರಿಗೆ ಚಿತ್ರ ನಿರ್ಮಾಣಕ್ಕಿಳಿದಿದ್ದಾರೆ. ಕುತೂಹಲಕರ ಪ್ರೇಮಕಥೆ ಇದಾಗಿದ್ದರೂ ಲಾಂಗು, ಮಚ್ಚಿನ ಯಾವುದೇ

ಅಂಶಗಳಿಲ್ಲದ ನೀಟಾದ ಚಿತ್ರವಿದು ಎಂದು ನಿರ್ದೇಶಕ ವಿಜಯ ತಮ್ಮಣ್ಣ ಹೇಳಿದರು.  ಈಗಾಗಲೇ ಈ ಚಿತ್ರದ ಚಿತ್ರೀಕರಣ ಸಂಪೂರ್ಣಗೊಂಡಿದ್ದು ಶೇ.70ರಷ್ಟು ಬೆಂಗಳೂರಿನಲ್ಲಿ ಹಾಗೂ ಶೇ.30ರಷ್ಟು ಭಾಗದ ಚಿತ್ರೀಕರಣ ಮಂಗಳೂರು ಹಾಗೂ  ಉಡುಪಿ ಸುತ್ತಮುತ್ತಲ ಪ್ರದೇಶಗಳಲ್ಲಿ ನಡೆಸಲಾಗಿದೆ. ಈ ಚಿತ್ರದ ಕಾರ್ಯಕಾರಿ ನಿರ್ಮಾಪಕರಾಗಿ ಲೋಕೇಶ್ ಕೆಲಸ ಮಾಡಿದ್ದಾರೆ.  ಹಾಡುಗಳ ಸಿಡಿ ಬಿಡಗಡೆ ಮಾಡಿದ ನಿರ್ಮಾಪಕ ಬೆಂ.ಕೋ.ಶ್ರೀನಿವಾಸ ಮಾತನಾಡಿ, ಈ ಚಿತ್ರದ ನಿರ್ದೇಶಕ  ವಿಜಯ್ ಅವರ ತಂದೆ ತಮ್ಮಣ್ಣ ನನ್ನ ಹಳೇ ಸ್ನೇಹಿತರು ಅವರಿಗೋಸ್ಕರವಾಗಿಯೇ ನಾನು ಈ ಸಮಾರಂಭಕ್ಕೆ ಬಂದಿದ್ದೇನೆ. ಈಗ ಹೊಸದಾಗಿ ಚಿತ್ರರಂಗಕ್ಕೆ ಬರುತ್ತಿರುವ ಯುವಕರು   ಹೊಸ ಹೊಸ ಆಲೋಚನೆಗ

ಳೊಂದಿಗೆ ಹೊಸ ಕನಸುಗಳನ್ನು ಕಟ್ಟಿಕೊಂಡು ಬರುತ್ತಾರೆ. ಜನರ ಅಭಿರುಚಿಯನ್ನು ನಿಖರವಾಗಿ ತಿಳಿದುಕೊಂಡು ತಮ್ಮ ಪ್ರತಿಭೆಯೊಂದಿಗೆ ಅಳವಡಿಸಿಕೊಂಡು  ಸಿನಿಮಾ ಮಾಡಿದರೆ ಖಂಡಿತ ಮೊದಲ ಪ್ರಯತ್ನದಲ್ಲೇ ಸಿಕ್ಸರ್ ಹೊಡೆಯಬಹುದು. ಒಳ್ಳೆ ಕಥೆಯನ್ನಿಟ್ಟುಕೊಂಡು ಈ ಸಿನಿಮಾ ಮಾಡಿದ್ದಾರೆ.  ವಿಜಯ್ ಕನ್ನಡ ಚಿತ್ರರಂಗಕ್ಕೆ ಮತ್ತೊಂದು ಕೊಡುಗೆಯಾಗಲಿ ಎಂದು ಹೇಳಿದರು.  ನಾಯಕ ದೀಪಕ್‌ರಾಜ್ ಈ ಚಿತ್ರದಲ್ಲಿ ರಾಕ್ ಸ್ಟಾರ್ ಪಾತ್ರ ನಿರ್ವಹಿಸಿದ್ದಾರೆ,  ನಾಯಕಿ  ಜೀವಿಕಾ ಪ್ರೇಯಸಿಯಾಗಿ ಕಾಣಿಸಿಕೊಂಡಿದ್ದು, ಈ ಚಿತ್ರವು ಜೀವಿಕಾ ಅಭಿಯನದ 2ನೇ  ಚಿತ್ರವಾಗಿದೆ.

Write A Comment