ಕರ್ನಾಟಕ

ಶರ್ಟ್ ಬಿಚ್ಚಿ ಪೊಲೀಸರಿಗೆ ಕೈಕೊಟ್ಟು ಪರಾರಿಯಾದ ಸರಗಳ್ಳ..!

Pinterest LinkedIn Tumblr

Thef-escapedಬೆಂಗಳೂರು, ಜು.2-ಕೈಗೆ ಬಂದ ತುತ್ತು ಬಾಯಿಗೆ  ಬರಲಿಲ್ಲ ಎಂಬಂತೆ ಗಸ್ತಿನಲ್ಲಿದ್ದ ಪೊಲೀಸರ ಕೈಗೆ ಸಿಕ್ಕಿಬಿದ್ದ ಹಳೆ ಸರಗಳ್ಳನೊಬ್ಬ ತೊಟ್ಟಿದ್ದ ಶರ್ಟ್‌ಬಿಚ್ಚಿ ಹಿಡಿದಿದ್ದವರ ಕೈಯಲ್ಲೇ ಬಿಟ್ಟು ಪರಾರಿಯಾದ ಪ್ರಸಂಗ ಇಂದು ಬೆಳಗ್ಗೆ ಜರುಗಿದೆ. ಕಳೆದ ಎರಡು ತಿಂಗಳಿನಿಂದ ನಗರದಲ್ಲಿ ಸರಗಳ್ಳರ ಹಾವಳಿ ತೀವ್ರವಾಗಿದ್ದು,

ಅವರ ಸೆರೆಗೆ ಪೊಲೀಸರು ನಾನಾ ಕಸರತ್ತು ಮಾಡುತ್ತಿದ್ದಾರೆ. ಬೆಳಗಿನ ವೇಳೆ ವಾಯುವಿಹಾರ ಮಾಡುವವರನ್ನೇ ಸರಗಳ್ಳರು ಟಾರ್ಗೆಟ್ ಮಾಡಿಕೊಳ್ಳುತ್ತಿದ್ದು, ಈ ಸಮಯದಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳು ಸೇರಿದಂತೆ ಪೊಲೀಸರು ಗಸ್ತನ್ನು ಹೆಚ್ಚಿಸಿ ಎಲ್ಲೆಡೆ ತೀವ್ರ ನಿಗಾ ವಹಿಸಿದ್ದಾರೆ.

ದಕ್ಷಿಣ ವಿಭಾಗದಲ್ಲೂ ಎಂದಿನಂತೆ ಇಂದು ಬೆಳಗ್ಗೆ ಗಸ್ತಿನಲ್ಲಿದ್ದ ಪೊಲೀಸರಿಗೆ 7 ಗಂಟೆ ಸುಮಾರಿನಲ್ಲಿ ಹಳೇ ಸರಗಳ್ಳನೊಬ್ಬ ಬೈಕ್ ಏರಿ ಸಂಚಾರ ಹೊರಟ ಬಗ್ಗೆ ಮಾಹಿತಿ ಲಭ್ಯವಾಗಿದೆ. ಕೂಡಲೇ ಎಚ್ಚೆತ್ತುಕೊಂಡ ಪೊಲೀಸರು ಗಿರಿನಗರ ಠಾಣೆ ವ್ಯಾಪ್ತಿಯ ಹೊಸಕೆರೆಹಳ್ಳಿ ದೇಗುಲ ಬಳಿ ಹಳೇಸರಗಳ್ಳ ಹೋಗುತ್ತಿರುವುದನ್ನು ಪತ್ತೆ ಮಾಡಿ ಚೀತಾವಾಹನದಲ್ಲಿ ಬೆನ್ನಟ್ಟಿದ್ದಾರೆ. ಪೊಲೀಸರು ಬೆನ್ನತ್ತಿರುವುದನ್ನು ಅರಿತ ಹಳೇಸರಗಳ್ಳ ತಾನು ಸವಾರಿ ಮಾಡುತ್ತಿದ್ದ ಬೈಕ್ ಬಿಟ್ಟು  ಓಡಿ ಪರಾರಿಯಾಗಲು ಯತ್ನಿಸಿದ್ದಾನೆ. ಈ ವೇಳೆ ಇದನ್ನು ಗಮನಿಸಿದ ಸಾರ್ವಜನಿಕರು ಕೂಡಲೇ ಸರಗಳ್ಳನನ್ನು ಬೆನ್ನತ್ತಿ ಹಿಡಿದು ಹಿಂದಿನಿಂದ ಕೊರಳಪಟ್ಟಿ ಬಿಗಿ ಹಿಡಿದುಕೊಂಡಿದ್ದಾರೆ. ಪೊಲೀಸರು ಹತ್ತಿರ ಹೋಗುವಷ್ಟರಲ್ಲಿ ಸರಗಳ್ಳ ಶರ್ಟ್‌ಅನ್ನು  ಬಿಚ್ಚಿ ಆತನನ್ನು ಹಿಡಿದಿದ್ದವರ ಕೈಯಲ್ಲೇ ಬಿಟ್ಟು ಪರಾರಿಯಾಗಿದ್ದಾನೆ. ಸರಗಳ್ಳನು ಎರಡು ಶರ್ಟ್‌ಅನ್ನು  ಒಂದರ ಮೇಲೆ ಒದರಂತೆ ತೊಟ್ಟಿದ್ದನು ಎಂದು  ಎಲ್ಲರ  ಅರಿವಿಗೆ ಬಂದಿದೆ. ಪರಾರಿಯಾಗಿರುವ ಹಳೆಸರಗಳ್ಳನ ಬೈಕ್, ಮೊಬೈಲನ್ನು ಪೊಲೀಸರು ವಶಪಡಿಸಿಕೊಂಡಿದ್ದು, ಆತನ ಬಂಧನಕ್ಕೆ ಬಲೆ ಬೀಸಿದ್ದಾರೆ.

ನೆರವಿಗೆ ಬರಲು ಮನವಿ:
ಸರಕಿತ್ತು ಪರಾರಿಯಾಗುವ ಕಳ್ಳರನ್ನು  ಕೃತ್ಯ ನಡೆದಾಗ ನೋಡುವ ಸಾರ್ವಜನಿಕರು ಕೂಡಲೇ ಹಿಡಿದು ಪೊಲೀಸರ ನೆರವಿಗೆ ಬರಬೇಕೆಂದು ದಕ್ಷಿಣ ವಿಭಾಗದ ಡಿಸಿಪಿ ಲೋಕೇಶ್ ಕುಮಾರ್ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ. ಗಸ್ತಿನಲ್ಲಿರುವಾಗ ಸಾರ್ವಜನಿಕರ ಕೈಗೆ ಸಿಕ್ಕುರೂ ಸರಗಳ್ಳ ಪರಾರಿಯಾದ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪೊಲೀಸರಿಗೆ  ಸಹಕರಿಸಿದ ಸಾರ್ವಜನಿಕರನ್ನು ಪ್ರಶಂಸಿಸಿ ಮಾತನಾಡಿದರು.

Write A Comment