ಮನೋರಂಜನೆ

ಬಚ್ಚನ್, ಸಲ್ಲು, ಅಕ್ಷಯ್, ಧೋನಿ ಪಡೆಯುವ ಸಂಭಾವನೆ ಎಷ್ಟು ಗೊತ್ತೇ ?

Pinterest LinkedIn Tumblr

sallu-bachan

ನ್ಯೂಯಾರ್ಕ್: ಫೋರ್ಬ್ಸ್ ತಯಾರಿಸಿರುವ ಪ್ರಪಂಚದ ಹೆಚ್ಚು ಸಂಭಾವನೆ ಪಡೆಯುತ್ತಿರುವ 100 ಸೆಲೆಬ್ರಿಟಿಗಳ ಪಟ್ಟಿಯಲ್ಲಿ ಬಾಲಿವುಡ್ ನಟರಾದ ಅಮಿತಾಬ್ ಬಚ್ಚನ್, ಸಲ್ಮಾನ್ ಖಾನ್, ಅಕ್ಷಯ್ ಕುಮಾರ್ ಮತ್ತು ಕ್ರಿಕೆಟರ್ ಮಹೇಂದ್ರ ಸಿಂಗ್ ಧೋನಿ ಸ್ಥಾನ ಪಡೆದಿದ್ದಾರೆ.

ಫೋರ್ಬ್ಸ್ ತಯಾರಿಸಿರುವ ಪಟ್ಟಿಯಲ್ಲಿ ಬಾಕ್ಸರ್ ಫ್ಲಾಯಿಡ್ ಮೇವೆದರ್ ಅಗ್ರಸ್ಥಾನ ಪಡೆದಿದ್ದು 300 ಮಿಲಿಯನ್ ಡಾಲರ್ ಸಂಭಾವನೆ ಪಡೆಯುತ್ತಿದ್ದಾರೆ. ಈ ಪಟ್ಟಿಯಲ್ಲಿ ಅಮಿತಾಬ್ ಬಚ್ಚನ್ ಮತ್ತು ಸಲ್ಮಾನ್ ಖಾನ್ ಜಂಟಿಯಾಗಿ 71ನೇ ಸ್ಥಾನ ಪಡೆದಿದ್ದು 33.5 ಮಿಲಿಯನ್ ಡಾಲರ್ (ಸುಮಾರು 213 ಕೋಟಿ ರೂ.) ಸಂಭಾವನೆ ಪಡೆಯುತ್ತಿದ್ದಾರೆ.

ಅಕ್ಷಯ್ ಕುಮಾರ್ ಪಟ್ಟಿಯಲ್ಲಿ 76ನೇ ಸ್ಥಾನ ಪಡೆದಿದ್ದು ಸಂಭಾವನೆ ರೂಪದಲ್ಲಿ 32.5 ಮಿಲಿಯನ್ ಡಾಲರ್ (ಸುಮಾರು 207 ಕೋಟಿ ರೂ.) ಪಡೆಯುತ್ತಿದ್ದರೆ, ಪಟ್ಟಿಯಲ್ಲಿ 82ನೇ ಸ್ಥಾನ ಪಡೆದಿರುವ ಮಹೇಂದ್ರ ಸಿಂಗ್ ಧೋನಿ 31 ಮಿಲಿಯನ್ ಡಾಲರ್ (ಸುಮಾರು 197 ಕೋಟಿ ರೂ.) ಸಂಭಾವನೆ ಪಡೆಯುತ್ತಿದ್ದಾರೆ.

ಈ ಪಟ್ಟಿಯಲ್ಲಿ ಬಾಲಿವುಡ್​ನ ಖ್ಯಾತ ನಟ ಶಾರುಖ್ ಖಾನ್ ಮತ್ತು ಇತರ ಮಹಿಳಾ ಸೆಲೆಬ್ರಿಟಿಗಳು ಸ್ಥಾನ ಪಡೆಯಲು ವಿಫಲರಾಗಿದ್ದಾರೆ.

Write A Comment