ಅಂತರಾಷ್ಟ್ರೀಯ

ವಾಮಾಚಾರ ಆರೋಪ: ಇಬ್ಬರು ಮಹಿಳೆಯರ ಶಿರಚ್ಛೇದ ಮಾಡಿದ ಐಎಸ್‌

Pinterest LinkedIn Tumblr

isis_650_021315091744

ಬೈರುತ್: ವಾಮಾಚಾರ ನಡೆಸಿದ ಆರೋಪದ ಮೇಲೆ ಇಸ್ಲಾಮಿಕ್‌ ಸ್ಟೇಟ್ ಉಗ್ರರು ಸಿರಿಯಾದಲ್ಲಿ ಇಬ್ಬರು ಮಹಿಳೆಯರ ಶಿರಚ್ಛೇದ ಮಾಡಿದ್ದಾರೆ.

ಉಗ್ರರು ಈ ರೀತಿ ಮಹಿಳೆಯರ ಶಿರಚ್ಛೇದನ ಮಾಡಿರುವುದು ಇದೇ ಮೊದಲು ಎಂದು ಸಿರಿಯಾದ ಮಾನವ ಹಕ್ಕುಗಳ ಆಯೋಗ ಮಂಗಳವಾರ ತಿಳಿಸಿದೆ.

‘ಡೆಯಿರ್‌ ಎಜರ್‌ ಪ್ರಾಂತ್ಯದಲ್ಲಿ ಇಸ್ಲಾಮಿಕ್‌ ಸ್ಟೇಟ್‌ ಉಗ್ರರು ಇಬ್ಬರು ಮಹಿಳೆಯರ ಶಿರಚ್ಛೇದ ಮಾಡಿದ್ದಾರೆ. ಉಗ್ರರು ಮಹಿಳೆರನ್ನು ಈ ರೀತಿ ಕೊಲ್ಲುತ್ತಿರುವುದು ಇದೇ ಮೊದಲು,’ ಎಂದು ಆಯೋಗದ ಮುಖ್ಯಸ್ಥ ರಾಮಿ ಅಬ್ದೆಲ್‌ ರಹಮಾನ್‌ ಹೇಳಿದ್ದಾರೆ.

ಅತಿ ಕ್ರೂರ ಶಿಕ್ಷೆಗಳಿಗೆ ಕುಖ್ಯಾತಿಯಾಗಿರುವ ಇಸ್ಲಾಮಿಕ್‌ ಸ್ಟೇಟ್‌, ವ್ಯಭಿಚಾರದ ಆರೋಪ ಕೇಳಿ ಬಂದ ಮಹಿಳೆಯರನ್ನು ಕಲ್ಲು ಹೊಡೆದು ಸಾಯಿಸಿರುವ ಉದಾಹರಣೆಗಳಿವೆ. ಆದರೆ, ಮಹಿಳೆಯರ ಶಿರಚ್ಛೇದನ ಮಾಡಿರುವುದು ಇದೇ ಮೊದಲು ಎಂದು ಮಾನವ ಹಕ್ಕುಗಳ ಆಯೋಗ ತಿಳಿಸಿದೆ.

ವರದಿಗಳ ಪ್ರಕಾರ, ಸಿರಿಯಾದಲ್ಲಿ ಐಎಸ್‌ ಒಂದು ವರ್ಷದ ಅವಧಿಯಲ್ಲಿ ‌3,000ಕ್ಕೂ ಹೆಚ್ಚು ಜನರಿಗೆ ಮರಣದಂಡನೆ ವಿಧಿಸಿದೆ. ಈ ಪೈಕಿ 74 ಮಕ್ಕಳು, 1,800 ನಾಗರಿಕರು ಸೇರಿದ್ದಾರೆ.

1 Comment

Write A Comment