ಮನೋರಂಜನೆ

ಫಿಲಂ ಫೇರ್ ಅತ್ಯುತ್ತಮ ನಟ ಪ್ರಶಸ್ತಿ ಗೆದ್ದ ‘ರಾಮಾಚಾರಿ’

Pinterest LinkedIn Tumblr

yash

ಚೆನ್ನೈ, ಜೂ.26: ಇಲ್ಲಿನ ನೆಹರು ಕ್ರೀಡಾಂಗಣದಲ್ಲಿ ನಡೆದ 62ನೇ ಸೌತ್ ಇಂಡಿಯಾ ಫಿಲಂಫೇರ್ ಪ್ರಶಸ್ತಿ ಸಮಾರಂಭದಲ್ಲಿ ರಾಂಕಿಂಗ್ ಸ್ಟಾರ್ ಯಶ್ ಮಿಸ್ಟರ್ ಆಂಡ್ ಮಿಸೆಸ್ ರಾಮಚಾರಿಯಲ್ಲಿ ನೀಡಿದ ಅದ್ಭುತ ನಟನೆಯಿಂದಾಗಿ ಅತ್ಯುತ್ತಮ ನಟ ಎಂಬ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.

ಫ್ಲೇರ್ ಅಂಡ್ ಲವ್ಲಿ ಚಿತ್ರದಲ್ಲಿ ಮನೋಜ್ಞ ಅಭಿನಯ ನೀಡಿದ್ದ ಶ್ವೇತಾ ಶ್ರೀನಿವಾಸ್ತವ ಅವರಿಗೆ ಅತ್ಯುತ್ತಮ ನಟಿ ಪ್ರಶಸ್ತಿ ಲಭಿಸಿದರೆ, ಉಳಿದವರು ಕಂಡಂತೆ ಚಿತ್ರವು ಉತ್ತಮ ನಿರ್ದೇಶಕ (ರಕ್ಷಿತ್‌ಶೆಟ್ಟಿ) ಹಾಗೂ ಅತ್ಯುತ್ತಮ ಸಂಗೀತ ನಿರ್ದೇಶಕ (ಅಜನೀಶ್) ವಿಭಾಗದಲ್ಲಿ ಪ್ರಶಸ್ತಿಯನ್ನು ಬಾಚಿಕೊಂಡಿದೆ. ಉತ್ತಮ ಮನರಂಜನಾ ಚಿತ್ರವಾಗಿ ಯಶ್ ಹಾಗೂ ರಾಧಿಕಾಪಂಡಿತ್ ಅಭಿನಯದ ‘ಮಿ||ಅಂಡ್ ಮಿಸೆಸ್’ ರಾಮಚಾರಿ ಚಿತ್ರವು ಭಾಜನವಾಗಿದೆ. ಅತ್ಯುತ್ತಮ ಚಲನಚಿತ್ರ ವಿಭಾಗದಲ್ಲಿ ಮಿಸ್ಟರ್ ಆಂಡ್ ಮಿಸೆಸ್ ರಾಮಾಚಾರಿಗೆ ದೃಶ್ಯಂ, ಗಜಕೇಸರಿ, ಉಗ್ರಂ , ಉಳಿದವರು ಕಂಡಂತೆ ಚಿತ್ರಗಳು ತೀವ್ರ ಪೈಪೋಟಿ ನೀಡಿತ್ತು. ಕನ್ನಡ, ತೆಲುಗು, ತಮಿಳು ಮತ್ತು ಮಲೆಯಾಳಂ ಚಿತ್ರರಂಗದ ನಟ, ನಟಿಯರು, ತಾಂತ್ರಿಕ ವರ್ಗದವರ ನಡುವೆ ನಡೆದ ಸಮಾರಂಭದಲ್ಲಿ ಪ್ರಶಸ್ತಿಗಳನ್ನು ವಿತರಿಸಲಾಯಿತು.

Write A Comment