ಗಲ್ಫ್

ಹಕ್ಕಿ ಡಿಕ್ಕಿ ಹೊಡೆದ ಪರಿಣಾಮ ತುರ್ತು ಭೂಸ್ಪರ್ಶ ಮಾಡಿದ ಏರ್ ಅರೇಬಿಯಾ ವಿಮಾನ

Pinterest LinkedIn Tumblr

Air arebia

ಜೈಪುರ, ಜೂ.26: ಶಾರ್ಜಾ ಮೂಲದ 165 ಮಂದಿ ಪ್ರಯಾಣಿಕರಿದ್ದ ಅರಬ್ ವಾಯುಸಾರಿಗೆ ವಿಮಾನವೊಂದು ಇಲ್ಲಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲೆ ಹಾರುತ್ತಿದ್ದಂತೆ ಹಕ್ಕಿಯೊಂದು ಡ್ಕಿಕಿ ಹೊಡೆದಿದ್ದರಿಂದ ಅನಿವಾರ್ಯವಾಗಿ ವಿಮಾನವನ್ನು ಮತ್ತೆ ಕೆಳಗಿಳಿಸಬೇಕಾಯಿತು.

ವಿಮಾನದಲ್ಲಿದ್ದ ಎಲ್ಲಾ ಪ್ರಯಾಣಿಕರು ಮತ್ತು ಸಿಬ್ಬಂದಿ ಸುರಕ್ಷಿತವಾಗಿದ್ದಾರೆ ಎಂದು ವಿಮಾನ ನಿಲ್ದಾಣ ಪ್ರಾಧಿಕಾರದ ಅಧಿಕಾರಿಗಳು ತಿಳಿಸಿದ್ದಾರೆ. ನಿನ್ನೆ ರಾತ್ರಿ ವಿಮಾನ ಮೇಲೇರಿದ ಸಂದರ್ಭದಲ್ಲಿ ವಿಮಾನಕ್ಕೆ ಹಕ್ಕಿ ಡಿಕ್ಕಿ ಹೊಡೆಯಿತು. ಇದರಿಂದ ವಿಮಾನವನ್ನು ತುರ್ತಾಗಿ ಕೆಳಕ್ಕಿಳಿಸಲಾಯಿತು. ಪ್ರಯಾಣಿಕರನ್ನು ಸಮೀಪದ ಹೊಟೇಲ್‌ಗಳಿಗೆ ಕರೆದೊಯ್ಯಲಾಯಿತು. ನಂತರ ರಾತ್ರಿ ಅಲ್ಲೇ ತಂಗಿದ್ದ ಪ್ರಯಾಣಿಕರು ಇಂದು ಮಧ್ಯಾಹ್ನದ ವಿಮಾನದಲ್ಲಿ ಪ್ರಯಾಣಿಸಿದರು.

Write A Comment