ಮನೋರಂಜನೆ

ಪುಲಿ ಚಿತ್ರದಲ್ಲಿ ಮಹಾರಾಣಿಯಾಗಿ ಮೆರೆದ ಶ್ರೀದೇವಿ

Pinterest LinkedIn Tumblr

srideviಬಾಲಿವುಡ್‌ನ ಮೊಟ್ಟ ಮೊದಲ ಸೂಪರ್ ಸ್ಟಾರಿಣಿ ಎಂಬ ಬಿರುದು ಪಡೆದ ಏಕೈಕ ತಾರೆ ನಟಿ ಶ್ರೀದೇವಿ. ಬಾಲಕಿಯಾಗಿದ್ದ ಶ್ರೀದೇವಿ ಬಾಲನಟಿಯಾದಂದಿನಿಂದಲೂ ಬಾಲಿವುಡ್‌ನಲ್ಲಿ ಸೂಪರ್ ಸ್ಟಾರ್ ಪಟ್ಟ ಏರುವವರೆಗೂ, ಏರಿದ ನಂತರವೂ ಇಲ್ಲಿಯವರೆಗೆ ಒಂದೇ ರೀತಿಯಲ್ಲಿ ನಟನಾ ಕೌಶಲ್ಯ ಮೆರೆದ ಏಕಮಾತ್ರ ನಟಿ ಶ್ರೀದೇವಿ.

ಶ್ರೀದೇವಿ ಇದೀಗ ಬಹುತಾರಾಗಣದ ಪುಲಿ ಚಿತ್ರದಲ್ಲಿ ಮಹಾರಾಣಿಯಾಗಿ ಕಾಣಿಸಿಕೊಂಡಿದ್ದಾಳೆ. ಈ ಪುಲಿ ಚಿತ್ರದಲ್ಲಿ ಶ್ರೀದೇವಿ ರಾಣಿಯಾಗಿ ಮೆರೆದರೆ, ಕನ್ನಡದ ನಟ ಸುದೀಪ್, ವಿಜಯ್ ಸಮರ ಯೋಧರಾಗಿ ವಿಜೃಂಭಿಸಿದ್ದಾರೆ.  ಈ ಚಿತ್ರದಲ್ಲಿ ಶೃತಿ ಹಾಸನ್ ಯೋಧ ವಿಜಯ್ ಪ್ರೇಮಿಯಾಗಿ ನಟಿಸಿದ್ದಾಳೆ.

ಅಂದರೆ ಅಷ್ಟೇನೂ ಸ್ಕೋಪ್ ಇಲ್ಲವಂತೆ. ಹಾಗೆಯೇ ಹಂನ್ಸಿಕಾ ಮೋಟ್ವಾನಿ ಕೂಡ ಬಂದು ಹೋಗುತ್ತಾಳಂತೆ. ಪ್ರಸ್ತುತ ಪುಲಿ ಚಿತ್ರದ ಮೊದಲ ಟೀಸರ್ ಬಿಡುಗಡೆಯಾಗಿದೆ. ಇದರಲ್ಲಿ ಶ್ರೀದೇವಿ, ಸುದೀಪ್, ವಿಜಯ್ ಎಲ್ಲರ ಲುಕ್ ಭಾರೀ ಗ್ರಾಂಡ್ ಆಗಿದೆಯಂತೆ. ಶ್ರೀದೇವಿ ಎಂದಿನಂತೆ ತನ್ನ ಪಾತ್ರಕ್ಕೆ ರಾಜ ಮರ್ಯಾದೆ ನೀಡಿದ್ದಾಳಂತೆ. ಸುದೀಪ್ ಪಾತ್ರದ ಬಗ್ಗೆಹೇಳುವಂತೆಯೇ ಇಲ್ಲ. ವಿಜಯ್ ಕೂಡ ಹಾಗೇ ವಿಜೃಂಭಿಸಿದ್ದಾನಂತೆ.

Write A Comment