ಮನೋರಂಜನೆ

ವಿಶ್ವಕಪ್ ಕ್ವಾರ್ಟರ್ ಫೈನಲ್ ಸೋಲಿನ ಸೇಡಿಗೆ ನನ್ನ ಮೇಲೆ ಹಲ್ಲೆ: ಸಚಿನ್ ಕಟ್ಟಾ ಅಭಿಮಾನಿ ಸುಧೀರ್ ಗೌತಮ್

Pinterest LinkedIn Tumblr

sudheerನವದೆಹಲಿ: ಬಾಂಗ್ಲಾ ದೇಶದಲ್ಲಿ ತನ್ನ ಮೇಲೆ ನಡೆದ ಹಲ್ಲೆಗೆ 2015 ರ ವಿಶ್ವಕಪ್ ನ ಸೆಮಿಫೈನಲ್ ಪಂದ್ಯದ ಸೋಲೇ ಕಾರಣ ಎಂದು ಸಚಿನ್ ತೆಂಡೂಲ್ಕರ್ ಅವರ ಕಟ್ಟಾ ಅಭಿಮಾನಿ ಸುಧೀರ್ ಗೌತಮ್ ಹೇಳಿದ್ದಾರೆ.

ಸುದ್ದಿ ಚಾನೆಲ್ ವೊಂದರಲ್ಲಿ ಮಾತನಾಡಿರುವ ಸುಧೀರ್ ಗೌತಮ್, ವಿಶ್ವಕಪ್ ಕ್ವಾರ್ಟರ್ ಫೈನಲ್  ನಲ್ಲಿ ಭಾರತದ ವಿರುದ್ಧ ಸೋಲಿಗೆ ಪ್ರತೀಕಾರ ತೀರಿಸಿಕೊಳ್ಳುವುದಾಗಿ ಬಾಂಗ್ಲಾ ಅಭಿಮಾನಿಗಳು ಹೇಳುತ್ತಿದ್ದರು ಎಂದು ಹೇಳಿದ್ದಾರೆ. ನನ್ನನ್ನು ಹತ್ಯೆ ಮಾಡುವ ಮೂಲಕ ಸೇಡು ತೀರಿಸಿಕೊಳ್ಳಲು ಬಾಂಗ್ಲಾ ಅಭಿಮಾನಿಗಳು ಯೋಚಿಸಿದ್ದರು ಎಂದು ಸುಧೀರ್ ಗೌತಮ್ ಆರೋಪಿಸಿದ್ದಾರೆ.

ಟೀಂ ಇಂಡಿಯಾ  ಬಾಂಗ್ಲಾದೇಶದ ಪ್ರವಾಸದಲ್ಲಿದ್ದಾಗ ಸುಧೀರ್ ಗೌತಮ್ ಮೇಲೆ ಹಲ್ಲೆ ನಡೆದಿತ್ತು. ಭಾರತ ಸತತ ಎರಡು ಪಂದ್ಯಗಳನ್ನು ಸೋತು ಸುಣ್ಣವಾಗಿದ್ದನ್ನು ಬಾಂಗ್ಲಾ ದೇಶದ ಅಭಿಮಾನಿಗಳು ಅವಹೇಳನ ಮಾಡಿದ್ದರು. ಮೈದಾನದ ಮೊದಲನೇ ಗೇಟ್ ಗೆ ಪ್ರವೇಶಿಸುತ್ತಿದ್ದಂತೆಯೇ ಬಾಂಗ್ಲಾ ಅಭಿಮಾನಿಗಳು ಬಿದಿರು ಕೋಲುಗಳನ್ನು ಹಿಡಿದು ಗದ್ದಲ ಉಂಟುಮಾಡುತ್ತಿದ್ದರು ಗೇಟ್ ನಿಂದ ಹೊರಗಿದ್ದ ಬ್ಯಾಗ್ ನ್ನು ತೆಗೆದುಕೊಳ್ಳಲು ಹೋದಾಗ ಬಾಂಗ್ಲಾ ಅಭಿಮಾನಿಗಳು ನನ್ನನ್ನು ಹಿಂಬಾಲಿಸಿ ಹಲ್ಲೆ ನಡೆಸಿದ್ದರು ಭದ್ರತಾಪಡೆ ಸಿಬ್ಬಂದಿಗಳು ನನ್ನನ್ನು ರಕ್ಷಿಸಿದರು ಎಂದು ಸುಧೀರ್ ಗೌತಮ್ ಹೇಳಿದ್ದಾರೆ.

Write A Comment