ಅಂತರಾಷ್ಟ್ರೀಯ

ಮಾರುಕಟ್ಟೆ ಮೌಲ್ಯ: ವಾಲ್‌ಮಾರ್ಟ್‌ನ್ನು ಹಿಂದಿಕ್ಕಿದ ಫೇಸ್ ಬುಕ್

Pinterest LinkedIn Tumblr

facebook1ನ್ಯೂಯಾರ್ಕ್ :ಜನಪ್ರಿಯ ಸಾಮಾಜಿಕ ತಾಣವಾದ ಫೇಸ್‌ಬುಕ್ ಮಾರುಕಟ್ಟೆ ಮೌಲ್ಯದಲ್ಲಿ ವಾಲ್ ಮಾರ್ಟ್‌ನ್ನು ಹಿಂದಿಕ್ಕಿ ಮುನ್ನಡೆ ಸಾಧಿಸಿದೆ .ಎಸ್ ಆ್ಯಂಡ್ ಪಿ 500 ಸೂಚ್ಯಂಕದಲ್ಲಿ ಅತೀ ಹೆಚ್ಚು ಮಾರುಕಟ್ಟೆ ಮೌಲ್ಯ ಹೊಂದಿರುವ 10 ಕಂಪನಿಗಳ ಪಟ್ಟಿಯಲ್ಲಿ ಫೇಸ್‌ಬುಕ್ ಸ್ಥಾನ ಗಿಟ್ಟಿಸಿಕೊಂಡಿದೆ.

ಮಂಗಳವಾರದ ಮುಕ್ತಾಯದ ಹೊತ್ತಿಗೆ ಫೇಸ್‌ಬುಕ್‌ನ ಮಾರುಕಟ್ಟೆ ಮೌಲ್ಯ 23800 ಕೋಟಿ ಡಾಲರ್ ಆಗಿತ್ತು.  3.7 ಶೇ ವರ್ಧನೆಯಾಗಿದ್ದು, ಫೇಸ್‌ಬುಕ್ ಷೇರು ಮೌಲ್ಯ 87.88 ಡಾಲರ್ ಆಗಿದೆ.

ವಾಲ್ ಮಾರ್ಟ್‌ನ ಮಾರುಕಟ್ಟೆ ಮೌಲ್ಯ 23,400 ಕೋಟಿ ಡಾಲರ್ ಆಗಿದೆ. ಆದಾಗ್ಯೂ ವಾಲ್‌ಮಾರ್ಟ್‌ನ ಷೇರು ಮೌಲ್ಯದಲ್ಲಿ ಶೇ. 22ರಷ್ಟು ಕುಸಿತವುಂಟಾಗಿದೆ. ಮಂಗಳವಾರ ಮುಕ್ತಾಯದ ವೇಳೆ ವಾಲ್‌ಮಾರ್ಟ್ ಷೇರು ಮೌಲ್ಯ 72.57 ಡಾಲರ್ ಆಗಿತ್ತು.

Write A Comment