ಅಂತರಾಷ್ಟ್ರೀಯ

ಲೈಂಗಿಕ ರೋಗ ಇದೆ ಎಂದು ಗೊತ್ತಾದ ಕೂಡಲೇ ಬಣ್ಣ ಬದಲಿಸುತ್ತೆ ಈ ಕಾಂಡೋಮ್

Pinterest LinkedIn Tumblr

condomsಲಂಡನ್ : ಲೈಂಗಿಕ ಕ್ರಿಯೆ ನಡೆಸುವಾಗ ಸಂಗಾತಿಗೆ ಲೈಂಗಿಕ ರೋಗ ಇದೆ ಎಂದು ಪತ್ತೆಯಾದ ಕೂಡಲೇ ಈ ಕಾಂಡೋಮ್ ಬಣ್ಣ ಬದಲಿಸುತ್ತದೆ. ಹೌದು ಲೈಂಗಿಕ ಸಂಪರ್ಕದಿಂದ ಹರಡುವ ರೋಗಾಣು ಪತ್ತೆಯಾದ ಕೂಡಲೇ ಬಣ್ಣ ಬದಲಿಸುವಂತಹ ಕಾಂಡೋಮ್‌ನ್ನು ಬ್ರಿಟನ್‌ನ ವಿದ್ಯಾರ್ಥಿಗಳು ತಯಾರಿಸಿದ್ದಾರೆ.

ಎಸ್‌ಟಿ ಐ (‘S.T.EYE) ಎಂದು ಕರೆಯಲ್ಪಡುವ ಈ ಕಾಂಡೋಮ್ ಲೈಂಗಿಕ ಕ್ರಿಯೆ ನಡೆಸುವ ವೇಳೆ ಲೈಂಗಿಕ ರೋಗ ಹರಡುವ ಬ್ಯಾಕ್ಟೀರಿಯ ಪತ್ತೆಯಾದ ಕೂಡಲೇ ಬಣ್ಣ ಬದಲಿಸುತ್ತದೆ. ವಿಧ ವಿಧದ ಬ್ಯಾಕ್ಟೀರಿಯಗಳು ಇದರ ಸಂಪರ್ಕಕ್ಕೆ ಬಂದೊಡನೆ ಈ ಕಾಂಡೋಮ್ ಬೇರೆ ಬೇರೆ ಬಣ್ಣಕ್ಕೆ ತಿರುಗುತ್ತದೆ.

ಇಲ್‌ಫಾರ್ಡ್‌ನ ಐಸಾಕ್ ನ್ಯೂಟನ್ ಅಕಾಡೆಮಿಯ ದಾನ್ಯಾಲ್ ಅಲಿ, ಮೌಜ್ ನವಾಜ್,ಚಿರಾಗ್ ಶಾ ಎಂಬೀ ವಿದ್ಯಾರ್ಥಿಗಳು ತಯಾರಿಸಿದ ಈ ಕಾಂಡೋಮ್ ಗೆ ಬೆಸ್ಟ್ ಹೆಲ್ತ್ ಇನ್ನೋವೇಶನ್ ಪ್ರಶಸ್ತಿ ಕೂಡಾ ದಕ್ಕಿದೆ.

ಕ್ಲಮೇಡಿಯಾ ಮತ್ತು ಸಿಫಿಲಸ್ ಸೇರಿದಂತೆ ಇನ್ನಿತರ ರೋಗಾಣುಗಳನ್ನು ಈ ಕಾಂಡೋಮ್  ಪತ್ತೆ ಹಚ್ಚುತ್ತಿದೆ ಎಂದು ದ ಟೆಲಿಗ್ರಾಫ್ ಪತ್ರಿಕೆ ವರದಿ ಮಾಡಿದೆ.

Write A Comment