ಮನೋರಂಜನೆ

ಅತ್ಯಾಚಾರ ಆರೋಪ: ಸಹ ನಿರ್ದೇಶಕ ಮಹಮೂದ್ ಫಾರೂಕಿ ಬಂಧನ

Pinterest LinkedIn Tumblr

Mahmood-Farooqui-arrest

ನವದೆಹಲಿ: ನಟ ಅಮಿರ್ ಖಾನ್ ನಿರ್ಮಾಣದ ಪೀಪ್ಲಿ ಲೈವ್ ಚಿತ್ರದ ಸಹ ನಿರ್ದೇಶಕ ಮಹಮೂದ್ ಫಾರೂಕಿ ಅವರನ್ನು ಅತ್ಯಾಚಾರ ಆರೋಪದ ಮೇಲೆ ಬಂಧಿಸಲಾಗಿದೆ.

ದೆಹಲಿ ಪೊಲೀಸರು ಶುಕ್ರವಾರದಂದು ಫಾರೂಕಿಯನ್ನು ಬಂಧಿಸಿ ಜುಲೈ 6ರ ವರೆಗೆ ನ್ಯಾಯಾಂಗ ಬಂಧನದಲ್ಲಿ ಇರಿಸಿದ್ದಾರೆ. ಮಾರ್ಚ್ 28ರಂದು ದೆಹಲಿಯ ಸುಖದೇವ್ ವಿಹಾರ್ ನಲ್ಲಿ ಅತ್ಯಾಚಾರವಾಗಿದೆ ಎಂದು ಅಮೆರಿಕದ ಮಹಿಳೆಯೊಬ್ಬರು ನೀಡಿದ ದೂರು ಆಧರಿಸಿ ದಕ್ಷಿಣ ದೆಹಲಿಯ ನ್ಯೂ ಫ್ರೆಂಡ್ಸ್ ಕಾಲೋನಿಯ ಪೊಲೀಸ್ ಸ್ಟೇಷನ್ ನಲ್ಲಿ ಪ್ರಕರಣ ದಾಖಲಿಸಲಾಗಿದೆ.

ಕೊಲಂಬಿಯಾ ಯುನಿವಸ್ರಿಟಿಯಲ್ಲಿ ಪಿಹೆಚ್ ಡಿ ಮಾಡುತ್ತಿರುವ ಮಹಿಳೆ ಸಂಶೋಧನೆಗಾಗಿ ಭಾರದಲ್ಲಿದ್ದರೆಂದು ತಿಳಿದುಬಂದಿದೆ. ಪೀಪ್ಲಿ ಲೈವ್ ಚಿತ್ರದ ನಿರ್ದೇಶಕಿ ಅನುಷಾ ರಿಜ್ವಿ ಹಾಗೂ ಫಾರೂಕಿ ದಂಪತಿಗಳಾಗಿದ್ದು, ಘಟನೆಯ ಬಗ್ಗೆ ಫಾರೂಕಿ ಪತ್ನಿಯಿಂದ ಪ್ರತಿಕ್ರಿಯೆ ಲಭ್ಯವಾಗಿಲ್ಲ.

Write A Comment