ಕರ್ನಾಟಕ

ಒತ್ತುವರಿ ನಿವೇಶನಗಳ ಸಕ್ರಮಕ್ಕೆ ಚಿಂತನೆ: ನಗರ ಸಂಚಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಣೆ

Pinterest LinkedIn Tumblr

CM_siddu-city-rounds

ಬೆಂಗಳೂರು: ಬಿಬಿಎಂಪಿ ಚುನಾವಣೆ ಘೋಷಣೆಗೆ ದಿನಗಣನೆ ಹತ್ತಿರವಾಗುತ್ತಿದ್ದಂತೆ ಸಿಎಂ ಸಿದ್ದರಾಮಯ್ಯ ಅವರ ನಗರಸಂಚಾರ ಹಾಗೂ ಔದಾರ್ಯ ಕೆಲಸಗಳೆರಡೂ ಜೋರಾಗುತ್ತಿವೆ.

ಇತ್ತೀಚಿಗಷ್ಟೇ ಕೆರೆ ಸುತ್ತಮುತ್ತಲ ಅಕ್ರಮ ನಿರ್ಮಾಣ ತೆರವುಗೊಳಿಸಿ ನಡುಕ, ದುಗುಡ ಮೂಡಿಸಿದ್ದ ಅವರು ಈಗ ಬಿಡಿಎ ವ್ಯಾಪ್ತಿಯ ಅಕ್ರಮ ನಿವೇಶನಗಳ ಸಕ್ರಮಕ್ಕೆ ಮುಂದಾಗಿದ್ದಾರೆ. ಈ ಕುರಿತಂತೆ ಸರ್ಕಾರದ ನಿಲುವು ಪ್ರಕಟಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, `ಬೆಂಗಳೂರು ಅಬಿsವೃದ್ಧಿ ಪ್ರಾ„ಕಾರ (ಬಿಡಿಎ) ವ್ಯಾಪ್ತಿಯಲ್ಲಿ ಒತ್ತುವರಿಯಾಗಿರುವ 3,699 ನಿವೇಶನಗಳನ್ನು ಸಕ್ರಮ ಮಾಡಲು ಚಿಂತಿಸಿದ್ದು, ಅಂದಾಜಿನ ಪ್ರಕಾರ 66,500 ಅಕ್ರಮ ನಿವೇಶನಗಳನ್ನು ಸಕ್ರಮ ಮಾಡಲು ಆಲೋಚಿಸಲಾಗಿದೆ. ಅಕ್ರಮ ಕಟ್ಟಡ ಗಳು ಇನ್ನೂ ಕಂಡುಬಂದಲ್ಲಿ ಅವನ್ನೂ ಸಕ್ರಮಗೊಳಿಸ ಲಾಗುವುದು’ ಎಂದು ಔದಾರ್ಯ ತೋರಿದ್ದಾರೆ.

ಭಾನುವಾರ ನಗರದ ಮೂರು ವಿಧಾನ ಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಸಂಚಾರ ನಡೆಸಿದಾಗ ಸಾರ್ವಜನಿಕರ ಅಹವಾಲು ಸ್ವೀಕರಿಸಿದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ಒತ್ತುವರಿದಾರರಿಗೆ ಅಭಯ

ಬಿಡಿಎ ವ್ಯಾಪ್ತಿಯಲ್ಲಿ ಸಾಕಷ್ಟು ಜಮೀನು ಒತ್ತುವರಿಯಾಗಿದೆ. ಸುಮಾರು 30 ವರ್ಷಗಳ ಹಿಂದೆಯೇ ಒತ್ತುವರಿಯಾಗಿರುವ ಕಾರಣ ಅಲ್ಲಿ ವಾಸಿಸುತ್ತಿರುವ ಜನರನ್ನು ತೆರವುಗೊಳಿಸಲು ಸಾಧ್ಯವಿಲ್ಲ. ಹಾಗಾಗಿ ಆ ನಿವೇಶನಗಳನ್ನು ಸಕ್ರಮಗೊಳಿಸಲಾಗುವುದು. ಒತ್ತುವರಿ ಮಾಡಿರುವ ಜನರು ಚಿಂತೆ ಪಡುವ ಅಗತ್ಯವಿಲ್ಲ ಎಂದು ಹೇಳಿದರು. ಬಿಡಿಎ ವ್ಯಾಪ್ತಿಯ 68 ಲೇಔಟ್‍ಗಳಲ್ಲಿ ನಿವೇಶನಗಳ ಒತ್ತುವರಿಯಾಗಿ ಖಾಸಗಿ ವ್ಯಕ್ತಿಗಳು ಸರ್ಕಾರದ ನಿವೇಶನಗಳನ್ನು ಅನುಭವಿಸುತ್ತಿದ್ದಾರೆ. ಈ ಸಂಬಂಧ ಕೆಲವರು ನ್ಯಾಯಾಲಯದ ಮೊರೆ ಹೋಗಿದ್ದು, ಅವರೀಗ ನಿವೇಶನಕ್ಕೆ ತಗುಲುವ ಹಣವನ್ನು ಸರ್ಕಾರಕ್ಕೆ ಪಾವತಿಸಲು ಸಿದ್ಧರಿದ್ದು ನಿವೇಶನ ನೀಡಬೇಕು ಎಂದು ಮನವಿ ಮಾಡಿದ್ದಾರೆ.

ಹಾಗಾಗಿ ಆ ಎಲ್ಲಾ ನಿವೇಶನಗಳನ್ನು ಪರಿಶೀಲಿಸಿ ಅವುಗಳಿಗೆ ಯಾವ ರೀತಿ ಮೊತ್ತ ನಿಗದಿಪಡಿಸಬೇಕು ಎಂಬುದನ್ನು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿ ನಂತರ ಕ್ರಮಕೈಗೊಳ್ಳಲಾಗುವುದು ಎಂದರು. ಒತ್ತುವರಿಯಾಗಿರುವ ಬಹುತೇಕ ನಿವೇಶನಗಳಲ್ಲಿ ಜನರು ವಾಸಿಸುತ್ತಿದ್ದು, ಜನನಿಬಿಡ ಪ್ರದೇಶವಾಗಿದೆ. ಕ್ರಮಕೈಗೊಂಡಲ್ಲಿ ಕಾನೂನು ಪ್ರಕಾರವಾಗಿ ಅವರನ್ನು ಹೊರಗೆ ಹಾಕಬೇಕು ಇಲ್ಲವೇ ಸಕ್ರಮಗೊಳಿಸಬೇಕು. ಇದು ಸುಮಾರು 60 ಸಾವಿರ ನಿವೇಶನಗಳ ಪ್ರಶ್ನೆ. ಹಾಗಾಗಿ ಅವರನ್ನು ತೆರವುಗೊಳಿಸುವುದು ಕೊಂಚ ಕಷ್ಟದ ಕೆಲಸ. ಅಂತಹ ನಿವೇಶನಗಳನ್ನು ಸಕ್ರಮ ಮÁಡಿದರೆ ಸರ್ಕಾರಕ್ಕೆ ಕೋಟಾಂತರ ರುಪಾಯಿ ಆದಾಯ ಬರಲಿದೆ. ಈ ಸಂಬಂಧ ಕಾನೂನು ತಜ್ಞರ ಸಲಹೆ ಪಡೆದು ಮುಂದಿನ ಕ್ರಮಕೈಗೊಳ್ಳಲಾಗುವುದು ಎಂದರು.

ಎಲ್ಲೆಲ್ಲಿ ಒತ್ತುವರಿ?

ನಾಗರಬಾವಿ, ಜೆ.ಪಿ. ನಗರ, ಬನಶಂಕರಿ, ಚಂದ್ರಾ ಲೇಔಟ್, ಮಹಾಲಕ್ಷಿ ್ಮ ಲೇಔಟ್, ಬಿಟಿಎಂ ಲೇಔಟ್ 3ನೇ ಹಂತ, ಅರ್ಕಾವತಿ ಬಡಾವಣೆ, ಸಾದರಮಂಗಲ, ಸಾರಕ್ಕಿ, ಎಚ್‍ಎಎಲ್, ಎಚ್‍ಎಸ್‍ಆರ್ ಲೇಔಟ್, ಎ.ಬಿ.ಆರ್.ಲೇಔಟ್, ಅಕ್ಕಿತಿಮ್ಮನಹಳ್ಳಿ, ಜ್ಞಾನಭಾರತಿ, ಅಂಬೇಡ್ಕರ್ ನಗರ, ಕೆಂಗೇರಿ ಸ್ಯಾಟಲೈಟ್ ಬಡಾವಣೆ, ಮಿನಿಫಾರೆಸ್ಟ್ , ಓಎಂಬಿಆರ್ ಲೇಔಟ್, ವೆಸ್ಟ್ ಆಫ್ ಕಾರ್ಡ್ ರಸ್ತೆ ಸೇರಿದಂತೆ 68 ಲೇಔಟ್‍ಗಳಲ್ಲಿ ಒತ್ತುವರಿಯಾಗಿದೆ.

ಸಕ್ರಮದಿಂದ 6,000 ಕೋಟಿ

ಸಿಎಂ ಚಿಂತನೆಗೆ ತಮ್ಮ ವಿವರಣೆ ನೀಡಿದ ಬಿಡಿಎ ಆಯುಕ್ತ ಶ್ಯಾಂ ಭಟ್, ನಗರದಲ್ಲಿರುವ 66,500 ಅಕ್ರಮ ನಿವೇಶನಗಳನ್ನು ಸಕ್ರಮ ಮಾಡಲು ಸರ್ಕಾರ ಮುಂದಾಗಿದೆ. ಅಷ್ಟು ನಿವೇಶನಗಳು ಸಕ್ರಮವಾದರೆ ಸರ್ಕಾರಕ್ಕೆ ಅಂದಾಜು ರು.6 ಸಾವಿರ ಕೋಟಿ ಹಣ ಸಿಗಲಿದೆ ಎಂದಿದ್ದಾರೆ. `ಕೆಲವರು ತಮ್ಮ ಜಾಗದ ಅಕ್ಕ ಪಕ್ಕದ ಜಾಗವನ್ನೂ ಒತ್ತುವರಿ ಮಾಡಿದ್ದಾರೆ. ಅಂತಹ ಕೆಲ ಪ್ರಕರಣಗಳು ನ್ಯಾಯಾಲಯದಲ್ಲಿವೆ. ಕೆಲವರು ತಮ್ಮ ಹೆಸರಿನಲ್ಲಿ ನೋಂದಣಿ ಮಾಡಿಸಿಕೊಂಡು ಸೂಕ್ತ ಹಣ ಪಾವತಿಸುವುದಾಗಿ ಮನವಿ ಮಾಡಿದ್ದಾರೆ. ಈ ಬಗ್ಗೆ ಚರ್ಚಿಸಿ ಮುಂದಿನ ಕ್ರಮಕೈಗೊಳ್ಳಲಾಗುವುದು. ಬಿಡಿಎ ಕಾಯ್ದೆ ಅಡಿ 38ಸಿ ಪ್ರಕಾರ ಮಾಲೀಕರಿಗೆ ಆ ನಿವೇಶನ ವಾಪಾಸ್ ನೀಡಬಹುದು. ಹಾಗಾಗಿ 1973ರಿಂದ 1986ರ ನಡುವೆ ಒತ್ತುವರಿಯಾಗಿ ರುವ ನಿವೇಶನಗಳಿಗೆ ಈ ಕಾಯ್ದೆ ಅನ್ವಯವಾಗುತ್ತದೆಯೇ ಇಲ್ಲವೇ ಎಂಬುದನ್ನು ತಜ್ಞರೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳುವುದಾಗಿ ಅವರು ಹೇಳಿದ್ದಾರೆ.

ಸುಮಾರು 30 ವರ್ಷಗಳ ಹಿಂದೆಯೇ ಭೂಮಿ ಒತ್ತುವರಿಯಾಗಿದ್ದು, ಆಗ ಅಧಿಕಾರಿಗಳು ನಿದ್ದೆ ಮಾಡುತ್ತಿದ್ದರು. ಹಾಗಾಗಿ ಖಾಸಗಿಯವರು ಸರ್ಕಾರಿ ಸ್ವತ್ತನ್ನು ಅನುಭವಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಇದನ್ನು ಪರಿಶೀಲಿಸಿ ಅಧಿಕಾರಿಗಳು ತಪ್ಪಿತಸ್ಥರು ಎಂದು ಕಂಡುಬಂದಲ್ಲಿ ಕ್ರಮಕೈಗೊಳ್ಳಲಾಗುವುದು.

-ಸಿದ್ದರಾಮಯ್ಯ, ಮುಖ್ಯಮಂತ್ರಿ

Write A Comment