ಮನೋರಂಜನೆ

ಮತ್ತೆ ಬರುತ್ತಿದ್ದಾಳೆ ಕತ್ರೀನಾ !

Pinterest LinkedIn Tumblr

katrina_kaif

ಬಾಲಿವುಡ್ ಸಿನಿಮಾ ಪ್ರಿಯರಿಗೆ ಕತ್ರೀನಾ ಕೈಫ್ ಅಭಿಮಾನಿಗಳಿಗೊಂದು ಸಂತಸದ ಸುದ್ದಿ. ಅನೇಕ ದಿನಗಳಿಂದ ಮೂಲೆ ಸೇರಿ ಕುಳಿತಿದ್ದ ಕತ್ರೀನಾ ಕೈಫ್ ಮತ್ತು ಸೈಫ್ ಅಲಿಖಾನ್ ಅವರು ನಟಿಸಿರುವ ‘ಫ್ಯಾಂಟಮ್’ ಎಂಬ ಬಹು ನಿರೀಕ್ಷೆಯ ಚಿತ್ರ ಕೊನೆಗೂ ಬಿಡುಗಡೆ ಭಾಗ್ಯ ಕಾಣುತ್ತಿದೆಯಂತೆ.

ನಿಜ ಹೇಳಬೇಕೆಂದರೆ, ಆ ಸಿನಿಮಾದ ಮಾತಿನ ಡಬ್ಬಿಂಗ್‌ನಲ್ಲಿ ಕತ್ರಿನಾ ಬಿಸಿಯಾಗಿದ್ದಾಳಂತೆ. ಅದರ ಜತೆ ಜತೆಯಲ್ಲೇ ರಣ್‌ಬೀರ್ ಕಪೂರ್ ಜತೆ ‘ಜಗ್ಗಾ ಜಸೂಸ್’ ಸಿನಿಮಾದ ಚಿತ್ರೀಕರಣದಲ್ಲೂ ಭಾಗವಹಿಸುತ್ತಿದ್ದಾಳಂತೆ. ಫ್ಯಾಂಟಮ್ ಚಿತ್ರ ಬಿಡುಗಡೆ ಹೀಗೆ ವಿಳಂಬಿಸುತ್ತಿರುವುದಕ್ಕೆ ಕಾರಣವೆಂದರೆ ಚಿತ್ರ ನಿರ್ಮಾತೃಗಳು ಚಿತ್ರದ ಬಿಡುಗಡೆಗೆ ನಿರ್ದಿಷ್ಟ ದಿನಾಂಕ ನೀಡದೆ ಇರುವುದು. ಅದೇನೇ ಇರಲಿ, ಆ.28ಕ್ಕೆ ‘ಫ್ಯಾಂಟಮ್’ ತೆರೆಗಪ್ಪಳಿಸುವುದು ಶತಃಸಿದ್ಧ ಎಂದು ಸ್ವತಃ ಕತ್ರೀನಾಳೇ ಹೇಳಿದ್ದಾಳಂತೆ. ವಿಶೇಷ ಅಂದ್ರೆ ಜಾಗತಿಕ ಭಯೋ ತ್ಪಾದನೆಯ ವಿಷಯ ಹಾಗೂ ಮುಂಬೈ ಸ್ಫೋಟದ ವಿಷಯಗಳನ್ನೊಳ ಗೊಂಡಿದೆಯಂತೆ.

Write A Comment